BREAKING NEWS

ಗಾಂಧಿಯನ್ನ ಕೊಂದ ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು: ಸಿದ್ದರಾಮಯ್ಯ

ಬೆಂಗಳೂರು : ಶಾಸಕರ ಅಮಾನತು ವಿರೋಧಿಸಿ ಬಿಜೆಪಿ ಶಾಸಕರು ಧರಣಿ ನಡೆಸಬೇಕಾಗಿದ್ದು ಮಹಾತ್ಮ ಗಾಂಧಿ ಪ್ರತಿಮೆಯ ಮುಂದಲ್ಲ, ಬದಲಾಗಿ ನಾಥುರಾಂ ಗೋಡ್ಸೆ ಪ್ರತಿಮೆಯ ಮುಂದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ನ್ಯಾಯ ಕೊಡಿಸಿ ಎನ್ನುವುದು ಎಂತಹ ವಿಪರ್ಯಾಸ ಎಂದು ಕಿಡಿಕಾರಿದರು.

ಬರೀ ಸುಳ್ಳು ಹೇಳುವವರು, ಘರ್ಷಣೆ ಉಂಟು ಮಾಡುವವರು, ಸಮಾಜ ಒಡೆಯುವವರು ಈಗ ಹೋಗಿ ಗಾಂಧಿ ಮುಂದೆ ಕೂತಿದ್ದಾರೆ. ಬಿಜೆಪಿಯವರಿಗೆ ನೈತಿಕತೆ ಇದೆಯಾ? ಎಂದು ಪ್ರಶ್ನಿಸಿದರು.

ವಿಪಕ್ಷ ಟೀಕೆ ಮಾಡುವುದು ಹಾಗೂ ಬಾವಿಗಿಳಿಯುವುದು ಸರ್ಕಾರದ ಗಮನ ಸೆಳೆಯುವುದು ಅವರ ಹಕ್ಕು. ವಿಧಾನಸಭೆಯಲ್ಲಿ ಅವರು ನಡೆದುಕೊಂಡ ರೀತಿಯಿಂದ ಕೆಲವರನ್ನು ಅಮಾನತು ಮಾಡಿದ್ದಾರೆ. ಅನಾಗರಿಕ ವರ್ತನೆ ಮಾಡಿದ್ದಾರೆ. ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಅಮಾನುಷವಾಗಿ ನಡೆದುಕೊಂಡಿದ್ದಾರೆ.‌ ಮಾರ್ಷಲ್ ಇಲ್ಲದಿದ್ದರೆ ಏನು ಮಾಡ್ತಿದ್ರೋ ಏನೋ? ಎಂದು ಆತಂಕ ವ್ಯಕ್ತಪಡಿಸಿದರು.

ಅದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ.‌ ಸದನದಲ್ಲಿ ಒಂದು ಶಿಸ್ತು ಇರಬೇಕಲ್ಲ.‌ ಪರಿಷತ್ ಗೆ ಬಿಜೆಪಿಯವರು ಹಾಜರಾಗಬಹುದಿತ್ತು. ಇಲ್ಲೇನೂ ಗಲಾಟೆ ಆಗಿರಲಿಲ್ಲ ಎಂದರು.

ಜೆಡಿಎಸ್ ನವರು ಯಾಕೆ ಬಿಜೆಪಿಯವರ ಜೊತೆಗೆ ಸೇರಿಕೊಂಡರೋ ಗೊತ್ತಿಲ್ಲ. ವಿಧೇಯಕಗಳನ್ನು ಅಂಗೀಕಾರ ಆಗದಂತೆ ಮಾಡೋದಕ್ಕೂ ಜೆಡಿಎಸ್ ಬಿಜೆಪಿ ಜೊತೆಗೆ ಸೇರಿಕೊಳ್ತಾರೆ. ಮರಿತಿಬ್ಬೇಗೌಡ ಟೆಕ್ನಿಕಲಿ ಜೆಡಿಎಸ್, ಆದರೆ ಜೆಡಿಎಸ್ ವಿರೋಧಿ ಅವರು. ಕಾರಣ ಇಲ್ಲದೆಯೇ ಬಿಜೆಪಿ ಹಾಗೂ ಜೆಡಿಎಸ್ ಗೈರಾಗಿದ್ದಾರೆ. ಬೇಜವಾವ್ದಾರಿಗಳು- ಜನ ವಿರೋಧಿಗಳು ಬಿಜೆಪಿ ಜೆಡಿಎಸ್ ನವರು ಎಂದು ಕಿಡಿಕಾರಿದರು.

ಬಜೆಟ್ ಮೇಲೆ ಬೆಳಕು ಚೆಲ್ಲಿದ್ದರೆ ನನಗೆ ಅನುಕೂಲ ಆಗ್ತಾ ಇತ್ತು. ಇಬ್ಬರೇ ಇಬ್ಬರು ಬಿಜೆಪಿಯವರು ಬಜೆಟ್ ಮೇಲೆ ಮಾತನಾಡಿದ್ದಾರೆ.
ಬಜೆಟ್ ಮೇಲೆ ಚರ್ಚೆ ಮಾಡೋದಕ್ಕೆ ಗೈರು ಆಗ್ತಾರೆ. ಪ್ರಜಾಪ್ರಭುತ್ವ ಹಾಗೂ ಜನವಿರೋಧಿಗಳು ಇವರಿಬ್ಬರು ಎಂದು ವಾಗ್ದಾಳಿ ನಡೆಸಿದರು.

andolanait

Recent Posts

ಮುಂದಿನ ಚುನಾವಣೆಯಲ್ಲಿ NDA 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೆ : ನಿಖಿಲ್ ಕುಮಾರಸ್ವಾಮಿ ಭರವಸೆ

ಬೆಂಗಳೂರು : ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ…

4 hours ago

ಪ್ರತ್ಯೇಕವಾಗಿದ್ದ ದಂಪತಿ ನಡುವೆ ಕಿರಿಕ್ ; ಪತ್ನಿ ಕೊಲೆಯಲ್ಲಿ ಅಂತ್ಯ

ನಂಜನಗೂಡು : ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ರಾತ್ರೋರಾತ್ರಿ ದಿಢೀರನೆ ಪ್ರತ್ಯಕ್ಷವಾಗಿ ಪತ್ನಿಯನ್ನು ಕೊಂದಿರುವ ಘಟನೆ ನಂಜನಗೂಡು ತಾಲೂಕಿನ…

4 hours ago

ಸಿಎಂ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಿ : ಅಧಿಕಾರಿಗಳಿಗೆ ಯತೀಂದ್ರ ಸೂಚನೆ

ನಂಜನಗೂಡು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವ…

5 hours ago

ಸಂಕ್ರಾಂತಿ ವಿಶೇಷ : ಮೈಸೂರು – ಟ್ಯುಟಿಕಾರನ್‌ ನಡುವೆ ವಿಶೇಷ ರೈಲು

ಮೈಸೂರು : ಮುಂದಿನ ವಾರ ಸಂಕ್ರಾಂತಿ/ಪೊಂಗಲ್‌ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಮೈಸೂರು-ಕೊಡಗು…

5 hours ago

ಸಂಶೋಧನೆಗೆ ಸಿಗದ ಪ್ರಾಮುಖ್ಯತೆ : ವಿಶ್ರಾಂತ ಕುಲಪತಿ ರಂಗಪ್ಪ ಬೇಸರ

ಮೈಸೂರು : ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಜೊತೆಗೆ ಸಂಶೋಧನೆಗೆ ಕಡಿಮೆ ಹಣವನ್ನು ವೆಚ್ಚ…

5 hours ago

ಆಹಾರದ ಮಹತ್ವ ಕುರಿತು ಅರಿವು ಅಗತ್ಯ : ಕೃಷಿ ಸಚಿವ.ಚಲುವರಾಯಸ್ವಾಮಿ

ಮಂಡ್ಯ : ಆಹಾರದ ಮಹತ್ವ ಹೆಚ್ಚಿದೆ. ಎಲ್ಲರೂ ಆಹಾರದ ಮಹತ್ವದ ಕುರಿತು ತಿಳಿದುಕೊಳ್ಳಬೇಕು. 30-40 ವರ್ಷಗಳ ಹಿಂದೆ ಭಾರತ ಆಹಾರದ…

5 hours ago