ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌: ಇ-ಬುಕ್ ಲೋಕದಲ್ಲೊಂದು ಸುತ್ತು ಹಾಕಿ

ಇನ್ನೇನು 5ಜಿ ಆಗಮನವಾಗುವ ಹೊಸ್ತಿಲಲ್ಲಿ ನಿಂತಿದ್ದೇವೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳು, ಓದುಗರು ಅಂತಾರ್ಜಾಲದೊಳಗೆ ಪ್ರವೇಶ ಪಡೆದುಕೊಂಡು ಸಾಕಷ್ಟು ಪಡೆದುಕೊಂಡಿದ್ದಾರೆ. ಅಲ್ಲಿ ಸಿಗುವ ಬೇರೆ ಬೇರೆ ಆಕರ್ಷಕ ಕೊಂಡಿಗಳನ್ನು ಹಿಡಿದು ಸಮಯವನ್ನು ವ್ಯರ್ಥ ಮಾಡಿಕೊಂಡು ಆಸಕ್ತಿಯನ್ನು ಬೇರೆ ಕಡೆಗೆ ಹರಿಸಿದ್ದೂ ಇದೆ.

ಇಂತಹ ಹೊತ್ತಿನಲ್ಲಿ ಎಚ್ಚರಿಕೆಯಿಂದ, ನಮಗೇನು ಬೇಕು ಎನ್ನುವ ಸ್ಪಷ್ಟತೆಯಿಂದ ಜಾಲಾಡಿದರೆ ಜಾಲತಾಣ ಬೃಹತ್ ವಿಶ್ವಕೋಶ. ಇಲ್ಲಿ ಎಲ್ಲವೂ ಲಭ್ಯ. ಅಂತೆಯೇ ಇ-ಬುಕ್, ಆಡಿಯೋ ಬುಕ್‌ಗಳೂ ಕೂಡ.

ಕನ್ನಡದ ಮಟ್ಟಿಗೆ ಇ-ಬುಕ್‌ಗಳ ಲೋಕ ಆರಂಭವಾಗಿದ್ದು ೨೦೧೫ರಿಂದ ಈಚೆಗೆ. ಕೊರೊನಾ ಸಂದರ್ಭದಲ್ಲಿ ಇವುಗಳ ಬೆಳವಣಿಗೆ ಹೆಚ್ಚಾಯಿತು. ಮೈಲಾಂಗ್ ಸೇರಿ ಹಲವಾರು ಸಂಸ್ಥೆಗಳು ಹೊಸ ಇ-ಪುಸ್ತಕಗಳ ಪ್ರಕಟಣೆ, ಇರುವ ಪುಸ್ತಕಗಳನ್ನು ಇ-ಪುಸ್ತಕಗಳಾಗಿ ಪರಿವರ್ತಿಸುವ ಕೆಲಸ ಮಾಡುತ್ತಿವೆ. ಅಲ್ಲದೇ ಎಲ್ಲ ಪ್ರಮುಖ ಪ್ರಕಾಶನ ಸಂಸ್ಥೆಗಳೂ ಇ-ಪುಸ್ತಕದ ಕಡೆ ಮುಖ ಮಾಡುತ್ತಿವೆ.

ಅನುಕೂಲಗಳು

  • ಒಮ್ಮೆ ಸಿದ್ಧಪಡಿಸಿದರೆ ಮತ್ತೆ ಸಿದ್ಧಪಡಿಸುವ ಅಗತ್ಯವಿಲ್ಲ.
  • ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಸುಲಭ, ಕಡಿಮೆ ವೆಚ್ಚ.
  • ಬೇಕೆಂದ ತಕ್ಷಣ ಕೊಂಡುಕೊಳ್ಳಲು ಅವಕಾಶ.
  • ಮೊಬೈಲ್‌ನಲ್ಲಿಯೇ ಓದಬಹುದು, ಟಿಪ್ಪಣಿ ಮಾಡಿಕೊಳ್ಳಬಹುದು.
  • ಭೌತಿಕವಾಗಿ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಹೊರೆ ಇರುವುದಿಲ್ಲ.
  • ಎಲ್ಲಿಯೇ ಇದ್ದರೂ ಓದಬಹುದು, ಕಂಪ್ಯೂಟರ್, ಟ್ಯಾಬ್‌ಗಳಲ್ಲೂ ಬಳಸಬಹುದು.
andolana

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

53 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago