ಹಲ್ಲುಗಳ ಆರೋಗ್ಯದಲ್ಲಿ ಏರುಪೇರಾದರೆ ಅವರು ಉದುರುವುದು ಮಾಮೂಲು. ಆದರೆ ಅದಕ್ಕೆ ಬದಲಿಯಾಗಿ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳಲು ಇಂದು ಹಲವಾರು ಚಿಕಿತ್ಸಾ ವಿಧಾನಗಳಿವೆ. ಅವುಗಳನ್ನು ಮಾಡಿಸಿಕೊಂಡರೆ ದಂತಪಂಕ್ತಿ ಸುರಕ್ಷಿತ ಮತ್ತು ಹಲ್ಲು ಕಾಣುವಂತೆ ಚೆಂದದ ನಗು ಬೀರಲು ಸಾಧ್ಯ.
ಅನುವಂಶೀಯ ಕಾರಣಗಳು, ಅಪಘಾತ, ಒಸಡು ರೋಗ, ದಂತಕುಳಿ ಅಥವಾ ಹಲ್ಲುಗಳನ್ನು ಸ್ವಚ್ಚವಾಗಿಡದೆ ಇರುವ ಕಾರಣಗಳಿಂದ ಹಲ್ಲು ಕಳೆದುಕೊಳ್ಳಬಹುದು. ಇದು ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದಕ್ಕಾಗಿ ಕೃತಕ ದಂತ ಪಂಕ್ತಿ (ಹಲ್ಲುಸೆಟ್), ಡೆಂಟಲ್ ಇಂಪ್ಲಾಂಟ್ಸ್ ಅಥವಾ ಫಿಕ್ಸ್ ಬ್ರಿಡ್ಜ್ ಮುಂತಾದ ಚಿಕಿತ್ಸಾ ವಿಧಾನಗಳಿವೆ.
ಹಲ್ಲು ಕಟ್ಟಿಸದೇ ಇದ್ದರೆ ಆಗುವ ತೊಂದರೆ
* ಹಲ್ಲು ಬಿದ್ದ ಜಾಗಕ್ಕೆ ಪಕ್ಕದ ಹಲ್ಲು ಜರುಗಿ ಹಲ್ಲುಗಳ ಮಧ್ಯೆ ಕಿಂಡಿ ಕಾಣಿಸಿಕೊಳ್ಳುತ್ತದೆ.
* ಹಲ್ಲುಗಳು ಜರುಗುತ್ತಾ ಹೋದಂತೆ ಹಲ್ಲಿನ ಬೇರಿಗೂ ತೊಂದರೆ.
* ದವಡೆಯ ಮೂಳೆಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
* ಉಳಿದ ಹಲ್ಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.
* ಆಹಾರವನ್ನು ಅಗಿಯಲು ಕಷ್ಟ, ಜೀರ್ಣಕ್ರಿಯೆ ಮೇಲೆ ಪರಿಣಾಮ.
* ಮುಖದ ರಚನೆಯ ಮೇಲೆ ಪ್ರಭಾವ, ಸ್ನಾಯುಗಳು ಜೋತು ಬೀಳುತ್ತವೆ.
* ಮಾತುಗಳಲ್ಲಿ ತೊದಲು, ಸ್ವಾಭಾವಿಕವಾಗಿ ಮಾತನಾಡಲು ಸಮಸ್ಯೆ
ಹಲ್ಲನ್ನು ಕಟ್ಟಿಸಿಕೊಳ್ಳುವ ವಿವಿಧ ಆಯ್ಕೆಗಳು
* ಡೆಂಟಲ್ ಇಂಪ್ಲಾಂಟ್ಸ್
ಒಂದು ಹಲ್ಲು ಇಲ್ಲದಿರುವಾಗ ಅದನ್ನು ಪುನಃ ಜೋಡಿಸಲು ಡೆಂಟಲ್ ಇಂಪ್ಲಾಂಟ್ ಒಳ್ಳೆಯ ಆ್ಂಕೆು. ಈ ವಿಧಾನದಲ್ಲಿ ಕೃತಕ ದಂತವನ್ನು ಒಸಡಿನಲ್ಲಿ ಶಾಶ್ವತವಾಗಿ ಜೋಡಣೆ ಮಾಡಲಾಗುತ್ತದೆ.
* ಕೃತಕ ದಂತಪಂಕ್ತಿ
ಕೆಲವು ಅಥವಾ ಸಂಪೂರ್ಣ ಹಲ್ಲುಗಳು ಇಲ್ಲದಿರುವಾಗ ಅದಕ್ಕೆ ಅನುಗುಣವಾಗಿ ಕೃತಕ ದಂತ ಪಂಕ್ತಿಗಳನ್ನು ಹಾಕಿಕೊಡಲಾಗುತ್ತದೆ. ಕೃತಕ ದಂತಪಂಕ್ತಿಗಳು ಎರಡು ರೀತಿಯಾಗಿರುತ್ತದೆ.
೧. ಸಂಪೂರ್ಣ ಹಲ್ಲುಗಳ ದಂತಪಂಕ್ತಿಯಲ್ಲಿ ಎಲ್ಲ ಹಲ್ಲುಗಳನ್ನು ಜೋಡಣೆ ಮಾಡುವುದು.
೨. ವಿಭಾಗೀಯ ದಂತ ಪಂಕ್ತಿಯಲ್ಲಿ ಒಂದು ಅಥವಾ ಕೆಲವು ಹಲ್ಲುಗಳನ್ನು ಜೋಡಣೆ.
* ಡೆಂಟಲ್ ಬ್ರಿಡ್ಜ್
ಒಂದು ಅಥವಾ ಎರಡು ಹಲ್ಲು ಇಲ್ಲದಿದ್ದಾಗ, ಅಕ್ಕ ಪಕ್ಕದ ಹಲ್ಲುಗಳನ್ನು ಆಧಾರವಾಗಿ ಬಳಸಿ ಡೆಂಟಲ್ ಬ್ರಿಡ್ಜ್ ಅನ್ನು ಮಾಡಬಹುದು. ಅದನ್ನು ಸಾಮಾನ್ಯವಾಗಿ ಕ್ಯಾಪ್ ಅಥವಾ ಕ್ರೌನ್ ಅನ್ನುತ್ತಾರೆ. ಇದನ್ನು ಡೆಂಟಲ್ ಸಿಮೆಂಟ್‌ನಿಂದ ಫಿಕ್ಸ್ ಮಾಡಲಾಗುತ್ತದೆ.
-ಡಾ. ಸಿ.ಪಿ. ಕಾತ್ಯಾಯಿನಿ, ಅಧ್ಯಾಪಕರು, ಹಲ್ಲು ನ್ಯೂನ ಪೂರಣ ಶಾಸ್ತ್ರ ವಿಭಾಗ, ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…
ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…
ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…
ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…
ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…