Andolana originals

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ

ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್ ಅಳವಡಿಸಲು ರಸ್ತೆಯನ್ನು ಅಗೆದು ಹಾಗೆಯೇ ಬಿಟ್ಟಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯು ರಾಜ್ಯ ಹೆದ್ದಾರಿ ಪ್ರಾಽಕಾರಕ್ಕೆ ಸೇರಿದೆ ಹಾಗೂ ಗ್ರಾಮೀಣ ರಸ್ತೆಯಾಗಿದೆ. ನೇಮಿಸಿರುವ ಗುತ್ತಿಗೆದಾರರು ರಸ್ತೆಯ ಕ್ಯಾರೇಜ್‌ವೇಯಿಂದ ೦.೩೦ ಮೀ.ನಿಂದ ೧.೦೦ ಮೀ. ಬಿಟ್ಟು ಅಗೆದ ಮಣ್ಣನ್ನು ಕ್ಯಾರೇಜ್‌ವೇ (೩.೭೫ ಮೀ ಅಗಲ) ನಲ್ಲಿಯೇ ರಾಶಿ ಹಾಕಿದ್ದಾರೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.

ಸರ್ಕಾರದ ಆದೇಶ, ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ರಸ್ತೆಯನ್ನು ಕತ್ತರಿಸಲು ನಿಗದಿತ ಶುಲ್ಕವನ್ನು ಪಾವತಿಸಿ ಕಾರ್ಯಪಾಲಕ ಇಂಜಿನಿಯರ್ರವರಿಂದ ಅನುಮತಿಯನ್ನು ಪಡೆದು ಕಾಮಗಾರಿಯನ್ನು ಪ್ರಾರಂಭಿಸಬೇಕು. ಆದರೆ ಬಿಎಸ್‌ಎನ್‌ಎಲ್‌ನವರು ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಲೋಕೋ ಪಯೋಗಿ ಇಲಾಖೆಯಿಂದ ನಿಯಮಾನುಸಾರ ರಸ್ತೆಯನ್ನು ಕತ್ತರಿಸಲು ಅನುಮತಿಯನ್ನು ಪಡೆಯದೆ, ಅನಧಿಕೃತವಾಗಿ ರಸ್ತೆಯನ್ನು ಅಗೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಾಲ್ಲೂಕಿನ ಬರಗಿ ಮುಖ್ಯರಸ್ತೆ, ಶಿವಪುರ-ಹಂಗಳ ರಸ್ತೆ, ಮಳವಳ್ಳಿ-ನೇನೆಕಟ್ಟೆ- ಮುಂಟೀಪುರ ರಸ್ತೆ, ರಾಷ್ಟ್ರೀಯ ಹೆದ್ದಾರಿ ಸಮೀಪದ ವೀರನಪುರ-ಬನ್ನಿತಾಳಪುರ ರಸ್ತೆ, ಹೊನ್ನಶೆಟ್ಟರಹುಂಡಿ, ಹುಲಸಗುಂದಿ, ಭೀಮನಭೀಡು-ಹೊಂಗಹಳ್ಳಿ ರಸ್ತೆ, ಚನ್ನಮಲ್ಲೀಪುರ ರಸ್ತೆ, ಸೋಮಹಳ್ಳಿ-ಹೆಮ್ಮರಗಾಲ ರಸ್ತೆ, ಕಾಳನಹುಂಡಿ, ಕೋಟೆಕೆರೆ, ಬೋಗಯ್ಯನಹುಂಡಿ ಬೆಟ್ಟದಮಾದಳ್ಳಿ ರಸ್ತೆ, ರಾಮನಾಥಪುರ- ತೆರಕಣಾಂಬಿ ರಸ್ತೆಯಲ್ಲಿ ರಸ್ತೆ ಬದಿಗಳನ್ನು ಅಗೆಯಲಾಗಿದೆ. ರಸ್ತೆ ಬದಿಗಳಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಕೂಡ ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಪೈಪ್‌ಗಳು ಒಡೆದು ಹೋದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

” ಬಿಎಸ್‌ಎನ್‌ಎಲ್‌ನಿಂದ ಗುತ್ತಿಗೆ ಪಡೆದವರು ರಸ್ತೆಗಳನ್ನು ಅಗೆದು ಹಾನಿ ಮಾಡುತ್ತಿದ್ದಾರೆ. ಇಲಾಖೆಗಳು ಹಾಗೂ ಗ್ರಾಪಂನಿಂದ ಅನುಮತಿ ಪಡೆದು ಇಂತಿಷ್ಟು ಹಣ ಪಾವತಿಸಬೇಕು. ಪೈಪ್‌ಲೈನ್ ಸಂಪರ್ಕದ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡಬೇಕು. ರಸ್ತೆ ಬದಿಯಲ್ಲಿಯೇ ಮಣ್ಣು ಸುರಿಯುತ್ತಿರುವುದರಿಂದ ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕ್ರಮವಹಿಸಬೇಕು.”

-ಮಹದೇವಪ್ಪ ಶಿವಪುರ, ರೈತ ಮುಖಂಡ

” ದಿಲ್ಲಿ ಮಟ್ಟದಲ್ಲಿ ಬಿಎಸ್‌ಎನ್‌ಎಲ್ ಟೆಂಡರ್ ಕರೆದು ಅನುಮತಿ ನೀಡಲಾಗಿದೆ. ಸ್ಥಳೀಯವಾಗಿಯೂ ಅನುಮತಿ ಪಡೆಯಲಾಗಿದೆ. ಈ ವಿಚಾರವಾಗಿ ಲೋಕೋಪಯೋಗಿ ಇಲಾಖೆ ನಮಗೆ ದೂರು ನೀಡದೆ ಎಸ್ಪಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿದಿಲ್ಲ.”

-ಕುಮಾರ್, ಹೆಚ್ಚುವರಿ ಇಂಜಿನಿಯರ್, ಬಿಎಸ್‌ಎನ್‌ಎಲ್, ಚಾ.ನಗರ

” ಕಾಮಗಾರಿ ಸಂಬಂಧವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಮ್ಮ ಇಂಜಿನಿಯರ್ ದೂರು ನೀಡಿದ್ದಾರೆ. ಎಲ್ಲೆಲ್ಲಿ ಕಾಮಗಾರಿ ಮಾಡುತ್ತಿದ್ದಾರೋ ಅದನ್ನು ತಡೆಯಲಾಗಿದೆ. ಜನರು ಇದರ ಬಗ್ಗೆ ಎಚ್ಚೆತ್ತುಕೊಂಡು ತಕ್ಷಣ ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಬೇಕು. ಪೊಲೀಸರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು.”

-ರವಿಕುಮಾರ್, ಎಇಇ, ಲೋಕೋಪಯೋಗಿ ಇಲಾಖೆ 

 

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

10 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

14 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

14 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

14 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

14 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

14 hours ago