Andolana originals

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು

ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ

ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ, ವ್ಯವಸಾಯಕ್ಕಿಲ್ಲ ಎಂಬ ಆದೇಶ ಮಾಡಿದ ಸರ್ಕಾರ ಜಲಾನಯನ ವ್ಯಾಪ್ತಿಯ ರೈತರಿಗೆ ಕೃಷಿ ಮಾಡದಂತೆ ನಿರ್ಬಂಧ ಹಾಕಿರುವುದರಿಂದ ಚುಂಚನಕಟ್ಟೆ ಹೋಬಳಿ ರೈತರು ಆತಂಕದಿಂದ ದಿನ ದೂಡುವಂತಾಗಿದೆ.

ಕಳೆದ ವರ್ಷ ಮೇ ತಿಂಗಳಾಂತ್ಯದಲ್ಲೇ ಮೈದುಂಬಿ ಹರಿದ ಕಾವೇರಿ ರೈತನ ಹೊಲ ಗದ್ದೆಗಳಲ್ಲಿ ಹರಿದು ಹಸಿವು ನೀಗಿಸಿದ್ದಳು. ಆದರೆ ಈ ಬಾರಿ ಶೇ.೭೦ರಷ್ಟು ಮಳೆ ಕೊರತೆಯಾಗಿ ಕೆರೆ-ಕಟ್ಟೆಗಳು, ಪಂಪ್‌ಸೆಟ್ಗಳು ಬತ್ತಿಹೋಗಿದ್ದು ನದಿಯಿಂದ ನೇರ ವಾಗಿ ಈ ಭಾಗದಲ್ಲಿ ಹರಿಯುವ ಮೊದಲ ಅಣೆಕಟ್ಟೆ ಕಟ್ಟೆಪುರ, ಚಾಮರಾಜ, ಮಿರ್ಲೆ ಶ್ರೇಣಿ ಮತ್ತು ರಾಮಸಮುದ್ರ ನಾಲೆಗಳಿಗೆ ಕೃಷಿಗೆ ನೀರು ಹರಿಸುವುದಿಲ್ಲ ಎಂಬ ಆದೇಶ ನೀಡಿದ ಇಲಾಖೆ ನಾಲಾ ವ್ಯಾಪ್ತಿಯ ರೈತರಲ್ಲಿ ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಚುಂಚನಕಟ್ಟೆ ಹೋಬಳಿಯಲ್ಲಿ ಕಳೆದ ವರ್ಷವೂ ಮಳೆ ಪ್ರಮಾಣ ಕಡಿಮೆಯಾಗಿ ಶೇ.೪೩ರಷ್ಟು ಕೊರತೆ ಅನುಭವಿಸಿತ್ತು. ಆದರೆ ಹೋಬಳಿಯಲ್ಲಿ ಹರಿಯುವ ನಾಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದ ರೈತರು ಈ ಬಾರಿ ಒಂದು ಹದವಾದ ಮಳೆಯನ್ನು ಕೂಡ ಕಾಣದೆ ಬಿತ್ತನೆ ಕಾರ್ಯವಿರಲಿ ತೆಂಗು, ಬಾಳೆ, ಅಡಕೆ, ಕಬ್ಬಿನಂತಹ ದೀರ್ಘ ಕಾಲೀನ ಬೆಳೆಗಳನ್ನು ಕಾಪಾಡುವುದೇ ಕಷ್ಟಕರವಾಗುತ್ತಿದೆ. ನದಿ ನೀರು ಕೇವಲ ನಗರಪ್ರದೇಶಗಳ ದಾಹ ತೀರಿಸಲು ಮಾತ್ರ ಬಳಕೆಯಾದರೆ ಆ ನೀರನ್ನೇ ನಂಬಿ ಬದುಕು ಕಟ್ಟಿಕೊಂಡ ರೈತರ ಪಾಡೇನಾಗಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲವಾಗಿದೆ.

ಸದ್ಯ ಹಾರಂಗಿ ಜಲಾಶಯ ತುಂಬಿದ್ದು ತಕ್ಷಣ ಕೆರೆಕಟ್ಟೆಗಳನ್ನು ತುಂಬಿಸುವ ಸಲುವಾಗಿಯಾದರೂ ನೀರು ಹರಿಸಬೇಕಿದೆ. ಈಬಾರಿ ಕಡ್ಡಾಯವಾಗಿ ಕೃಷಿಗೆ ನೀರಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಕನಿಷ್ಠ ಪಕ್ಷ ಕಟ್ಟು ನೀರಿನ ಪದ್ಧತಿಯಲ್ಲಿ ನೀರು ನೀಡಬೇಕು. ಜೊತೆಗೆ ನಾಲೆಗಳಿಗೆ ಕುಡಿಯುವ ಹಾಗೂ ಕೆರೆಕಟ್ಟೆಗಳನ್ನು ತುಂಬಿಸಲು ನೀರು ಬಿಡುವ ಮೊದಲು ಹೂಳು ತೆಗೆಸ ಬೇಕೆಂಬುದು ರೈತರ ಆಗ್ರಹವಾಗಿದೆ.

” ೨ ವರ್ಷಗಳಿಂದ ಚುಂಚನಕಟ್ಟೆ ಹೋಬಳಿ ಬರದಿಂದ ಕಂಗೆಟ್ಟಿದ್ದು, ಕನಿಷ್ಠ ಪಕ್ಷ ಈಭಾಗದ ರೈತರ ಗೋಳು ಕೇಳುವವರು ಇಲ್ಲವಾಗಿದೆ. ತಕ್ಷಣ ನಾಲೆಗಳಿಗೆ ನೀರು ಹರಿಸಿ ಅಂತರ್ಜಲವನ್ನು ವೃದ್ಧಿಸಬೇಕಿದೆ. ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಿದೆ.”

-ಡಿ.ಸಿ.ರಾಮೇಗೌಡ, ನಿರ್ದೇಶಕ, ಕೃಷಿಕ ಸಮಾಜ

” ಚುಂಚನಕಟ್ಟೆ ಹೋಬಳಿಯ ಬಹುತೇಕ ಕೆರೆಕಟ್ಟೆಗಳು ಬತ್ತಿಹೋಗಿದ್ದು ಹಾರಂಗಿ ಬಲದಂಡೆ ನಾಲೆಯಿಂದ ತಕ್ಷಣ ನೀರು ಹರಿಸಿದರೆ ಅನುಕೂಲವಾಗಲಿದೆ. ಇಲ್ಲವಾದರೆ ದನಕರುಗಳ ಸಮೇತ ಜನರು ವಲಸೆ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.”

-ಬಾಲಮನೋಹರ್, ಮಾಜಿ ಅಧ್ಯಕ್ಷ, ಕುಪ್ಪೆ ಗ್ರಾಪಂ

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

9 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

13 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

13 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

13 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

14 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

14 hours ago