ಹಾಡು ಪಾಡು

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌

ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ ಹೋಗ್ತಿದ್ರು ಅನ್ನೋದು ಬಿಟ್ರೆ, ಈ ಗೌರಿ ಹಬ್ಬದ ಬಗ್ಗೆ ನಂಗೆ ಹೆಚ್ಚೇನು ಗೊತ್ತಿರಲಿಲ್ಲ. ಗೌರಿ ಹಬ್ಬದ ಆಚರಣೆ ಕುರಿತು ನಾನು ತಿಳಿದುಕೊಂಡಿದ್ದು ಗೆಳತಿಯ ವಾಟ್ಸಾಪ್ ಸ್ಟೇಟಸ್‌ನಲ್ಲಿ!

ಈಗ ನಾನು ನಗರದಲ್ಲಿ ನೋಡುತ್ತಿರುವ ಹಬ್ಬದ ಆಚರಣೆಗಳು ಹಳ್ಳಿಯ ನನ್ನ ಬಾಲ್ಯದಲ್ಲಿ ಇರಲಿಲ್ಲ. ದುಡಿಮೆ ನಂಬಿ ಬದುಕುವ ಹಳ್ಳಿಗರಿಗೆ ಇಂತಹ ಆಚರಣೆಗಳಿಗೆ ಸಮಯವೂ ಇರಲಿಲ್ಲ ಅನ್ನಿ! ದುಡಿದರಷ್ಟೇ ಕೂಳು ಎಂಬ ಪರಿಸ್ಥಿತಿಯಲ್ಲಿ ಹಬ್ಬದ ಆಡಂಬರವಾದರೂ ಎಲ್ಲಿಂದ? ವಿವಿಧ ಸಂಘಗಳು ಹಳ್ಳಿಗಳಲ್ಲಿ ಹುಟ್ಟಿಕೊಂಡ ನಂತರ ಆಚರಣೆಗಳಿಗೆ ಸಾಂಘಿಕ ರೂಪ ಬಂತು. ಪ್ರತಿಯೊಂದೂ ಲೆಕ್ಕಾಚಾರ ಕ್ಕಿಳಿದು ಹಬ್ಬಕ್ಕೊಂದು ರಜೆ, ಹೋಳಿಗೆ ಊಟ, ಇಲ್ಲಿಗೆ ಹಬ್ಬ ಮುಗಿಯಿತು!

ಆದರೆ ಗಣೇಶ ಹಬ್ಬಕ್ಕಿರುವಷ್ಟು ಮಹತ್ವ ಗೌರಿ ಹಬ್ಬಕ್ಕಿಲ್ಲ ಎಂದು ಹೇಳಬಲ್ಲೆ. ಇಲ್ಲೂ ಗಂಡು- ಹೆಣ್ಣೆಂಬ ತಾರತಮ್ಯ ಇದ್ದರೂ ಇದೆಯೇನೋ? ಇದೇ ಕಾರಣಕ್ಕೆ ಕೆಲವೆಡೆ ಗೌರಿ ಹಬ್ಬವೆಂದರೆ ಉಪೇಕ್ಷೆ. “ಹೆಣ್ಮಕ್ಳಿಗೆ ಮಾಡೋಕೇನೂ ಕೆಲ್ಸ ಇಲ್ಲ, ಅದ್ಕೆ ಈ ಹಬ್ಬ, ಸಡಗರ ಇತ್ಯಾದಿ” ಎಂಬ ತಾತ್ಸಾರದ ಮಾತುಗಳು ಮಹಿಳೆಯರ ಕುರಿತಾಗಿ ಎಲ್ಲ ಕಾಲಕ್ಕೂ ಇದ್ದೇ ಇದೆ! ಹಬ್ಬಗಳು ಹೆಂಗಸರಿಗೆ ಯಾವತ್ತೂ ಆಡಂಬರವಲ್ಲ, ಅದೊಂದು ಜವಾಬ್ದಾರಿ. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ, ಉಣಬಡಿಸಿ ತಾನು ಕುಳಿತು ಉಣ್ಣುವ ಹೊತ್ತಿಗಾಗಲೇ “ಈ ಹಬ್ಬಗಳು ಯಾಕಾದರೂ ಬರುತ್ತವೋ. . . ”

ಎನ್ನುವಷ್ಟು ರೋಸಿ ಹೋಗುತ್ತಾರೆ. ಹೊರಗೆ ನಗುವಿನ ಮೇಕಪ್ ಬಳಿದುಕೊಂಡು ಅಡುಗೆ ಮನೆಯಲ್ಲಿ ಒಳಗೊಳಗೆ ಕುದ್ದುಹೋಗುವ ಹೆಂಗಸರನ್ನೂ ನೋಡಿದ್ದೇನೆ.
sowminimegha@gmail.com

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

9 mins ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

12 mins ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

28 mins ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

42 mins ago

ʼಮಣ್ಣಿನ ಗಣಪನಿಗೆ ಮನ್ನಣೆಗೆ ಸಿಗಲಿʼ

ಭಾರತಿ ಸಜ್ಜನ್‌ ಮೈಸೂರು : ಜಾಗತಿಕ ತಾಪಮಾನ ಏರುಗತಿಯ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಡೆ ಸಿದ್ಧತೆ ನಡೆದಿದೆ.…

59 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌

1 hour ago