ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು ನಿರ್ವಾಹಕರು ಚಿಲ್ಲರೆ ಸಂಬಂಧವಾಗಿ ವರ್ತಿಸಿದ ಬಗೆಯನ್ನು ಪ್ರಸ್ತಾಪಿಸುತ್ತಿದ್ದೇನೆ.
ಇತ್ತೀಚೆಗೆ ನಂಜನಗೂಡಿನ ಹುಲ್ಲಹಳ್ಳಿ ವೃತ್ತದ ಬಳಿ ಮೈಸೂರಿಗೆ ತೆರಳಲು ನಗರ ಸಾರಿಗೆ ವಿಭಾಗದ ಬಸ್ ಹತ್ತಿದೆ. ಟಿಕೆಟ್ ದರ ೩೯ ರೂ. ನಾನು ನಿರ್ವಾಹಕರಿಗೆ ೪೦ ರೂ. ನೀಡಿ ಟಿಕೆಟ್ ಪಡೆದೆ. ಚಿಲ್ಲರೆ ನೀಡಲಿಲ್ಲ. ಒಂದೆರಡು ದಿನಗಳ ಬಳಿಕ ಮೈಸೂರಿನಿಂದ ನಂಜನಗೂಡಿಗೆ ಹೊರಟಿದ್ದೆ. ಇದು ಕೆಎಸ್‌ಆರ್‌ಟಿಸಿ ಬಸ್ ಆದ್ದರಿಂದ ಟಿಕೆಟ್ ಪಡೆಯಲು ನಿರ್ವಾಹಕರಿಗೆ ೫೦ ರೂ. ನೀಡಿದೆ. ಟಿಕೆಟ್ ದರ ೪೬ ರೂ. ನಿರ್ವಾಹಕರು ೬ ರೂ. ಚಿಲ್ಲರೆ ಇದೆಯಾ ಎಂದರು. ನಿರ್ವಾಹಕರು ಇನ್ನೊಂದಿಬ್ಬರಿಗೆ ಟಿಕೆಟ್ ನೀಡಿ, ೫ ರೂ. ನಾಣ್ಯ ತೆಗೆದು ನನಗೆ ಕೊಟ್ಟರು! ಆಶ್ಚರ್ಯವೋ ಆಶ್ಚರ್ಯ! ಏಕೆಂದರೆ ಅವರು ೪ ರೂ. ಕೊಡಬೇಕಿದ್ದುದು, ೧ರೂ. ಹೆಚ್ಚು ಕೊಟ್ಟಿದ್ದರು. ಒಟ್ಟಿನಲ್ಲಿ ಇಂತಹ ನಿರ್ವಾಹಕರೂ ಇzರಲ್ಲ ಎಂದು ಸಮಾಧಾನವಾಯಿತು.
-ಎಸ್. ಪ್ರಸಾದ್, ನಂಜನಗೂಡು
ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ…
ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…
ಮಾನ್ಯರೆ , ಕುವೆಂಪುನಗರ ಬಡಾವಣೆ ಆರಂಭವಾದ ದಿನಗಳಿಂದಲೂ ಇಲ್ಲಿ (ಮನೆನ ಸಂಖ್ಯೆ ೨೨೨೨, ನಾಲ್ಕನೆಯ ಕ್ರಾಸ್, ಗಂಗೂಬಾಯಿ ಹಾನಗಲ್ ರಸ್ತೆ…
ಜಿ.ಪಿ.ಬಸವರಾಜು ಖುಷಿಯೋ, ಸಂಕಟವೊ ಒಡಲೊಳಗಿಟ್ಟುಕೊಳ್ಳುತ್ತಾರೆ ಜನಸಾಮಾನ್ಯರು ಹತ್ತು ದಿನಗಳ ಕಾಲ ಕುಣಿದು ಕುಣಿದು ದಣಿದ ಮೈಸೂರು ದಸರಾ ಕಾಲ್ತೆಗೆದಿದೆ. ಹೋಗುವಾಗ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಹರಿದ್ವಾರಕ್ಕೆ ಹೋಗಿ ತಲೆಯ ಕೂದಲು ತೆಗೆಸಿಕೊಂಡರು! ನೋಯ್ಡಾದ ೫೨ ವರ್ಷ ಪ್ರಾಯದ ಅಲಕಾನಂದಾ ದಾಸ್‌ಗುಪ್ತಾ ಒಬ್ಬ…
ಎಚ್.ಎಸ್.ದಿನೇಶ್‌ಕುಮಾರ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬರೆ ಮೈಸೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ…