Andolana originals

ಓದುಗರ ಪತ್ರ: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಒಂದು ಬಹಿರಂಗ ಪತ್ರ

ಮಾನ್ಯರೆ ,

ಕುವೆಂಪುನಗರ ಬಡಾವಣೆ ಆರಂಭವಾದ ದಿನಗಳಿಂದಲೂ ಇಲ್ಲಿ (ಮನೆನ ಸಂಖ್ಯೆ ೨೨೨೨, ನಾಲ್ಕನೆಯ ಕ್ರಾಸ್, ಗಂಗೂಬಾಯಿ ಹಾನಗಲ್ ರಸ್ತೆ , ಕೆ.ಬ್ಲಾಕ್,) ಸರಿಯಾದ ಚರಂಡಿಯ ವ್ಯವಸ್ಥೆಯೇ ಇಲ್ಲ. ಮಳೆ ಬಂದಿ ತೆಂದರೆ ಇನ್ನಿಲ್ಲದ ಗೋಳು. ಮನೆಯ ಮುಂದಿರುವ ಮೋರಿ ನೀರು ತುಂಬಿ ಮುಂದಕ್ಕೆ ಹೋಗದೆ ಬೀದಿ ಕಡೆಗೇ ನುಗ್ಗಿತ್ತದೆ. ಪಕ್ಕದ ರಸ್ತೆಯ ಎತ್ತರವಾಗಿದ್ದು, ಮುಂದಿನ ಮನೆಯವರು ಮಣ್ಣು ಕಲ್ಲು ಹಾಕಿ ಚರಂಡಿ ಮುಚ್ಚಿರುವುದರಿಂದ ಯಾವ ಕಡೆಯೂ ನೀರು ಹರಿಯದೆ ಕೊಳಚೆ ಗಟ್ಟಿ ನಿಲ್ಲುವಂತಾಗಿದೆ.

ಇದರಿಂದ ಕಾಂಪೌಂಡ್, ಮನೆಗೆ ಹಾನಿ, ಸಂಪಿಗೆ ಕೊಳಚೆ ನೀರು ಸಂಪರ್ಕ, ಪಕ್ಕದ ಲೈಟ್ ಕಂಬದಿಂದ ಕರೆಂಟ್ ಗ್ರೌಂಡ್ ಆಗುವ ಅಪಾಯವಿದೆ. ಕಳೆದ ಏಳು ವರ್ಷಗಳಿಂದಲೂ ಚರಂಡಿ ನೀರಿನ ಅವಾಂತರದಿಂದ ಮನೆಯ ಗೋಡೆಗಳಿಗೆ ವಸ್ತಿ ಏರಿ ತೊಂದರೆಯಾಗುತ್ತಿದೆ. ಸೂಕ್ತ ಚರಂಡಿ ಮಾಡಿ ಮನೆ ಉಳಿಸಿ ಎಂದು ಅರ್ಜಿ ಮೂಲಕ ಮನವಿ ಮಾಡಿದರೂ ಇತ್ತ ತಿರುಗಿಯೂ ನೋಡಿಲ್ಲ. ಈ ಭಾಗದ ಇಂಜಿನಿಯರ್‌ಗೆ ಖುದ್ದಾಗಿ ವಿನಂತಿಸಿದರೂ ಚರಂಡಿ ಮಾಡಿಲ್ಲ. ಕಳೆದ ಫೆಬ್ರವರಿಯಿಂದ ಹಲವು ಪತ್ರಗಳನ್ನು ನೀಡಿ ಖುದ್ದು ಆಯುಕ್ತರನ್ನು ಭೇಟಿ ಮಾಡಿ ವಿನಂತಿಸಿದರೂ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ. ಪದೇ ಪದೇ ಮಳೆಯಿಂದ ತೊಂದರೆ ಇದ್ದರೂ ಅಧಿಕಾರಿಗಳ ಸುಳಿವಿಲ್ಲ.

ವಲಯ – ೩ ಕಚೇರಿ, ಪಾಲಿಕೆಯ ಮುಖ್ಯ ಕಚೇರಿಗೆ ಹಲವು ಬಾರಿ ಹೋಗಿ ನಮ್ಮ ಆತಂಕ ವ್ಯಕ್ತಪಡಿಸಿದರೂ ಅದ್ಯಾರೋ ರಾಜಕಾರಣಿಯನ್ನು ಭೇಟಿಮಾಡಿಯೆಂದೂ, ಇನ್ನಾವುದೋ ವಿಭಾಗವನ್ನು ಭೇಟಿ ಮಾಡಿ ಎಂದು ಅಲೆದಾಡಿಸಿದ್ದಾರೆ. ಹತಾಶೆ ಮೂಡಿದೆ . ಪ್ರಾಧ್ಯಾಪಕನಾಗಿದ್ದ ನನ್ನ ಪಾಡೇ ಹೀಗಾದರೆ ಬೇರೆಯವರ ಪಾಡೇನು? ದಯಮಾಡಿ ನಮ್ಮ ಮನೆ ಬಳಿ ತಾವು ಬರಬೇಕು. ತಾವೇ ಖುದ್ದು ಪರಿಶೀಲಿಸಿ ಆಗುವ ಅನಾಹುತ ತಪ್ಪಿಸಲು ಕೂಡಲೇ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ. ವಂದನೆಗಳು

-ಎ.ಎಂ ಶಿವಸ್ವಾಮಿ, ನಿವೃತ್ತ ಪ್ರಾಂಶುಪಾಲರು, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಇ – ಖಾತಾ: ಹೊಸ ಸಮಸ್ಯೆಯ ಅರಿವಿದೆಯೇ?

ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…

2 mins ago

ಮೈಸೂರು ದಸರಾ; ಆಗಬೇಕಿದೆ ಜನಪರ

ಜಿ.ಪಿ.ಬಸವರಾಜು ಖುಷಿಯೋ, ಸಂಕಟವೊ ಒಡಲೊಳಗಿಟ್ಟುಕೊಳ್ಳುತ್ತಾರೆ ಜನಸಾಮಾನ್ಯರು ಹತ್ತು ದಿನಗಳ ಕಾಲ ಕುಣಿದು ಕುಣಿದು ದಣಿದ ಮೈಸೂರು ದಸರಾ ಕಾಲ್ತೆಗೆದಿದೆ. ಹೋಗುವಾಗ…

9 mins ago

ಕ್ಯಾನ್ಸರನ್ನೇ ಕುಣಿಸಿದ ಕಥಕ್ ನರ್ತಕಿ!

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಹರಿದ್ವಾರಕ್ಕೆ ಹೋಗಿ ತಲೆಯ ಕೂದಲು ತೆಗೆಸಿಕೊಂಡರು! ನೋಯ್ಡಾದ ೫೨ ವರ್ಷ ಪ್ರಾಯದ ಅಲಕಾನಂದಾ ದಾಸ್‌ಗುಪ್ತಾ ಒಬ್ಬ…

17 mins ago

ಅಕ್ಕಿ ದುಬಾರಿ: ಅನ್ನದ ಬಟ್ಟಲಿಗೆ ಬರದ ಬಿಸಿ

ಎಚ್.ಎಸ್.ದಿನೇಶ್‌ಕುಮಾರ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬರೆ  ಮೈಸೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ…

34 mins ago

ಕುಶಾಲನಗರದಲ್ಲಿ ಪಾರ್ಕಿಂಗ್ ಕಿರಿಕಿರಿ

ಕೆ.ಬಿ. ಶಂಶುದ್ದೀನ್ ‘ನೋ ಪಾರ್ಕಿಂಗ್’ ಫಲಕವಿದೆ, ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯಿಲ್ಲ  ಕುಶಾಲನಗರ: ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ…

47 mins ago

ಮೈಸೂರು ಜಿಲ್ಲೆಯಲ್ಲಿ 5,19,626 ಮತದಾರರು ಔಟ್‌

ಕೆ.ಬಿ.ರಮೇಶ ನಾಯಕ ಎಸ್‌ಐಆರ್‌ಗೂ ಮುನ್ನ ೨೭,೯೯,೬೯೩ ಮತದಾರರು: ಎಸ್‌ಐಆರ್ ನಂತರ ೨೨,೮೦,೦೬೭ ಮತದಾರರು  ಮೈಸೂರು: ಇಡೀ ದೇಶದಲ್ಲಿ ಮತದಾರರ ಪಟ್ಟಿ…

58 mins ago