ಕೆ.ಬಿ.ರಮೇಶ ನಾಯಕ
ಎಸ್ಐಆರ್ಗೂ ಮುನ್ನ ೨೭,೯೯,೬೯೩ ಮತದಾರರು: ಎಸ್ಐಆರ್ ನಂತರ ೨೨,೮೦,೦೬೭ ಮತದಾರರು
ಮೈಸೂರು: ಇಡೀ ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕುರಿತು ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ದೊಡ್ಡ ಸಮರ ನಡೆಯುತ್ತಿರುವುದರ ನಡುವೆಯೇ ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೈಸೂರು ಜಿಲ್ಲೆ ಮತದಾರರ ಅಂತಿಮ ಪಟ್ಟಿಯಲ್ಲಿ ೨೨,೮೦,೦೬೭ ಮಂದಿ ಮತದಾನದ ಹಕ್ಕು ಉಳಿಸಿಕೊಂಡಿದ್ದಾರೆ. ಎಸ್ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ ೨೭,೯೯,೬೯೩ ಮಂದಿ ಮತದಾರರು ಇದ್ದು, ರಾಜ್ಯ ಚುನಾವಣಾ ಆಯೋಗವು ಮಂಗಳವಾರ ಬಿಡುಗಡೆ ಮಾಡಿದ ಮತದಾರರ ಅಂತಿಮ ಪಟ್ಟಿಯಲ್ಲಿ ೫,೧೯,೬೨೬ ಮಂದಿ ಹೊರಗುಳಿದು, ೨೨,೮೦,೦೬೭ಮಂದಿ ಮತದಾನದ ಹಕ್ಕನ್ನು ಉಳಿಸಿಕೊಂಡಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಇಆರ್ಒ ಮತ್ತು ಎಇಆರ್ಒ ಕಚೇರಿಗಳಲ್ಲಿ ಮತ್ತು ಮೈಸೂರು ಜಿಲ್ಲೆಯ ಅಧಿಕೃತ ಜಾಲತಾಣದ ವೆಬ್ಸೈಟ್ನಲ್ಲೂ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗವು ದೇಶದಲ್ಲಿ ಆರಂಭಿಸಿದ ವಿಶೇಷ ಮತದಾರರ ಪರಿಷ್ಕಣೆಯ ವೇಳೆ ಅರ್ಹ ಮತದಾರರನ್ನು ಕೈ ಬಿಡಲಾಗುತ್ತಿದೆ ಎನ್ನುವ ವಿಚಾರವನ್ನು ಮುಂದಿಟ್ಟು ಕೊಂಡು ವಿರೋಧಪಕ್ಷಗಳು ಸಮರವನ್ನೇ ಸಾರಿವೆ.
ಇದರ ನಡುವೆ ಕರ್ನಾಟಕದಲ್ಲಿ ಜೂನ್ ೧೬ರಂದು ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಈ ಬಗ್ಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವರು ವಿರೋಧ ಮಾಡುವ ಜತೆಗೆ, ಅರ್ಹ ಮತದಾರರನ್ನು ಕೈ ಬಿಡದಂತೆ ನೋಡಿಕೊಳ್ಳಲು ಜಾಗೃತಿ ಅಭಿಯಾನ ಶುರು ಮಾಡಲಾಗಿತ್ತು. ಇದಲ್ಲದೆ, ಒಂದು ವರ್ಗದ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಸಲು ಬಿಜೆಪಿ ಕಾರ್ಯಕರ್ತರು ನಮೂನೆ ೭ ಸಲ್ಲಿಸಿದ್ದಾರೆ ಎಂಬ ದೂರಿನ ಮೇರೆಗೆ ನರಸಿಂಹರಾಜ ಕ್ಷೇತ್ರ ಸೇರಿ ಅನೇಕ ಕಡೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಎಲ್ಲ ವಿವಾದಗಳ ನಡುವೆ ಕರ್ನಾಟಕದಲ್ಲಿ ಎಸ್ಐಆರ್ ಮುಗಿದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿರುವುದರಿಂದ ಮತ ದಾರರ ಸಂಖ್ಯೆ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ೨,೯೬೭ ಮತಗಟ್ಟೆಗಳು: ಪಿರಿಯಾಪಟ್ಟಣ-೨೪೦, ಕೃಷ್ಣರಾಜನಗರ-೨೫೯, ಹುಣಸೂರು-೨೮೫, ಎಚ್.ಡಿ.ಕೋಟೆ-೨೮೮, ನಂಜನ ಗೂಡು-೨೪೯, ಚಾಮುಂಡೇಶ್ವರಿ-೩೫೧, ಕೃಷ್ಣರಾಜ-೨೬೫, ಚಾಮರಾಜ-೨೪೮, ನರಸಿಂಹರಾಜ-೨೮೩, ವರುಣ-೨೬೭, ತಿ.ನರಸೀಪುರ -೨೩೨ ಮತಗಟ್ಟೆಗಳನ್ನು ಹೊಂದಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ೩೦,೪೫೮ ವಿಶೇಷಚೇತನ, ೧,೧೧೨ ಸೇವಾ, ೨,೭೫೦ ಗಣ್ಯ ಮತದಾರರು, ೧೭೯ ಎನ್ಆರ್ಐ ಮತದಾರರು ಇದ್ದಾರೆ.
ನಿರಂತರ ಪರಿಷ್ಕರಣೆ: ಪ್ರಸ್ತುತ ನಿರಂತರ ಪರಿಷ್ಕರಣೆಯು ಚಾಲ್ತಿಯಲ್ಲಿರುತ್ತದೆ. ನಿರಂತರ ಪರಿಷ್ಕರಣೆಯ ಸಂದರ್ಭದಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರ್ಪಡೆಗೊಳಿಸಲು, ತೆಗೆದುಹಾಕಲು, ವಿವರಗಳನ್ನು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ನಮೂನೆ-೬ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಮ ಮಾಡಲು, ನಮೂನೆ-೭ ಮತದಾರರ ಪಟ್ಟಿಯಿಂದ ತೆಗೆದುಹಾಕಲು, ನಮೂನೆ-೮ರಲ್ಲಿ ಹೆಸರು, ಸಂಬಂಧಿಯ ಹೆಸರು, ಸಂಬಂಧದ ವಿಧ, ಲಿಂಗ, ಜನ್ಮದಿನಾಂಕ, ವಿಳಾಸ, ಭಾವಚಿತ್ರ ತಿದ್ದುಪಡಿಗಾಗಿ, ಸ್ಥಳಾಂತರ,ವಿಶೇಷಚೇತನ ಮತದಾರರಾಗಿದ್ದಲ್ಲಿ ಆ ಕುರಿತು ಗುರುತು ಮಾಡಲು,ಮೊಬೈಲ್ ನಂಬರ್ ಲಿಂಕ್ ಮಾಡಲು, ನಕಲು ಎಪಿಕ್ ಪಡೆದುಕೊಳ್ಳಲು ಸಲ್ಲಿಸಬಹುದಾಗಿದೆ. ನಿರಂತರ ಪರಿಷ್ಕರಣೆಯ ಅವಧಿಯಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕಾಗಿರುವ ವಿವರಗಳು ಉಳಿದುಕೊಂಡಿದ್ದಲ್ಲಿ ಆ ಕುರಿತು ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ಅಗತ್ಯಪೂರಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಮತದಾರರ ಪಟ್ಟಿಯಲ್ಲಿರುವ ಯಾವುದೇ ಮತದಾರರ ಭಾವಚಿತ್ರವನ್ನು ಅಳವಡಿಸದಿದ್ದಲ್ಲಿ ಭಾವಚಿತ್ರವು ಅಸ್ಪಷ್ಟವಾಗಿದ್ದಲ್ಲಿ ಅಥವಾ ಚುನಾವಣಾ ಆಯೋಗವು ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದರೆ, ಇನ್ನಿತರೆ ದೋಷವಿರುವ ಭಾವಚಿತ್ರಗಳನ್ನು ಹಾಗೂ ಮತದಾರರ ಗುರುತಿನ ಚೀಟಿಯಲ್ಲಿರುವ ಯಾವುದೇ ವಿವರಗಳ ತಿದ್ದುಪಡಿಗಾಗಿ ಅಗತ್ಯಪೂರಕ ದಾಖಲಾತಿಗಳೊಂದಿಗೆ ತಿದ್ದುಪಡಿ ಅರ್ಜಿಯ ಮೂಲಕ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದ್ದು,ಅದರ ಸದುಪಯೋಗ ಪಡೆದುಕೊಳ್ಳುವುದು.
ಜಿಲ್ಲೆಯ ಯಾವುದೇ ಅರ್ಹ ಮತದಾರರ, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳನ್ನು ಕೈಬಿಟ್ಟು ಹೋಗದಂತೆ ನೋಂದಣಿ ಮಾಡಿಕೊಳ್ಳುವುದು. ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವುದು ಎಂದು ತಿಳಿಸಲಾಗಿದೆ.
” ೧೬,೫೮೪ ಪುರುಷರು, ೧೪,೭೨೮ ಮಹಿಳೆಯರು, ಒಬ್ಬರು ತೃತೀಯಲಿಂಗಿ ಮತದಾರರನ್ನು ಹೊಂದಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿದ್ದು, ಮ್ಯಾಪಿಂಗ್ ಆಗಿಲ್ಲದೇ ಇರುವ ಮತ್ತು ಮ್ಯಾಪಿಂಗ್ ಆಗಿ ವ್ಯತ್ಯಾಸಗಳಿರುವ ಮತದಾರರಲ್ಲಿ ೧,೨೮,೨೧೭ ಮಂದಿಗೆ ನೋಟಿಸ್ ನೀಡಿ, ಎಇಆರ್ಒಗಳು ವಿಚಾರಣೆ ಮಾಡಿ ೧,೬೨೫ ಅರ್ಜಿಗಳನ್ನು ಅನರ್ಹತೆ ಎಂದು ಪರಿಗಣಿಸಿ ತಿರಸ್ಕರಿಸಲಾಗಿದೆ.”
೩೧,೩೧೩ ಮಂದಿ ಯುವ ಮತದಾರರ ಸೇರ್ಪಡೆ
ಮೈಸೂರು: ಜಿಲ್ಲೆಯ ಹನ್ನೊಂದ ವಿಧಾನಸಭಾ ಕ್ಷೇತ್ರಗಳಿಂದ ೩೧,೩೧೩ ಮಂದಿ ೧೮ರಿಂದ ೧೯ ವರ್ಷದೊಳಗಿನ ಯುವ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ.
ಎಚ್.ಎಸ್.ದಿನೇಶ್ಕುಮಾರ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬರೆ ಮೈಸೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ…
ಕೆ.ಬಿ. ಶಂಶುದ್ದೀನ್ ‘ನೋ ಪಾರ್ಕಿಂಗ್’ ಫಲಕವಿದೆ, ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯಿಲ್ಲ ಕುಶಾಲನಗರ: ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ…
ಕೆ.ಟಿ.ಮೋಹನ್ ಕುಮಾರ್ ಸಾಲಿಗ್ರಾಮ: ಆಕಾಂಕ್ಷಿಗಳಿಂದ ಜಾಲತಾಣಗಳಲ್ಲಿ ಪ್ರಚಾರ, ಮುಖಂಡರ ಭೇಟಿ ಸಾಲಿಗ್ರಾಮ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕ್ಷೇತ್ರಗಳ…
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿರುವ ಅರ್ನಾಬ್ ಚಂಡಮಾರುತ ನಾಳೆ, ಅಕ್ಟೋಬರ್ 28ರ ಪೂರ್ವಾಹ್ನ ಆಂಧ್ರಪ್ರದೇಶದ ಕರಾವಳಿ ದಾಟುವ ಸಾಧ್ಯತೆಯಿದೆ. ಬಾಪಟ್ಲಾ ಮತ್ತು…
ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ, ಅಂದರೆ ಎಸ್ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್…