Andolana originals

ಜಿಪಂ, ತಾಪಂ ಚುನಾವಣೆ ಘೋಷಣೆಗೆ ಮುನ್ನವೇ ಪ್ರಚಾರ ಶುರು!

ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ: ಆಕಾಂಕ್ಷಿಗಳಿಂದ ಜಾಲತಾಣಗಳಲ್ಲಿ ಪ್ರಚಾರ, ಮುಖಂಡರ ಭೇಟಿ

ಸಾಲಿಗ್ರಾಮ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯತೊಡಗಿವೆ.

ಚುನಾವಣೆಗಾಗಿ ದೀರ್ಘ ಕಾಲದಿಂದ ಕಾದು ಕುಳಿತಿದ್ದ ಮುಖಂಡರುಗಳು ಈಗ ಸಕ್ರಿಯರಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳು ಈಗಾಗಲೇ ತಮ್ಮ ಭಾವಚಿತ್ರದೊಂದಿಗೆ ತಮ್ಮ ಪಕ್ಷಗಳ ವರಿಷ್ಠರುಗಳ ಭಾವಚಿತ್ರಗಳನ್ನು ಹಾಕಿಕೊಂಡು ಫೇಸ್‌ಬುಕ್, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿ ಪ್ರಚಾರವನ್ನು ಆರಂಭಿಸಿದ್ದಾರೆ.

ಮತ್ತೊಂದೆಡೆ ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮಗಳ ಮುಖಂಡರುಗಳು, ವಿವಿಧ ಸಮುದಾಯಗಳ ಗಣ್ಯರು ಹಾಗೂ ಪಕ್ಷಗಳ ಕಾರ್ಯಕರ್ತರುಗಳನ್ನು ಭೇಟಿ ಮಾಡಿ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಇದೆಲ್ಲದರ ನಡುವೆ ಪಕ್ಷಗಳ ಟಿಕೆಟ್‌ಗಾಗಿ ತಮ್ಮ ತಮ್ಮ ಪಕ್ಷಗಳ ವರಿಷ್ಠರುಗಳ ಮನವೊಲಿಸುವ ಕೆಲಸವನ್ನು ತಮ್ಮದೇ ಆದ ವಿವಿಧ ಮಾರ್ಗಗಳಲ್ಲಿ ಮಾಡುತ್ತಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮಗಳಿವೆ? ಯಾವ ಸಮುದಾಯದ ಮತದಾರರು ಎಷ್ಟು ಸಂಖ್ಯೆಯಲ್ಲಿದ್ದಾರೆ? ಅವುಗಳಲ್ಲಿ ತಮ್ಮ ಪಕ್ಷಗಳಿಗೆ ಬರುವ ಮತಗಳ ಸಂಖ್ಯೆ ಎಷ್ಟು? ಹೀಗೆ ವಿವಿಧ ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಅಂಗಡಿ,ಮ ಹೋಟೆಲ್‌ಗಳ ಬಳಿ ಚುನಾವಣೆಯ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿವೆ. ಈ ಮೂಲಕ ಚುನಾವಣಾ ದಿನಾಂಕವು ಪ್ರಕಟಗೊಳ್ಳುವ ಮುನ್ನವೇ ಚುನಾವಣೆಯ ಕಾವು ರಂಗೇರಿದೆ.

ಏನೇ ಆದರೂ ಅಂತಿಮವಾಗಿ ಮೀಸಲಾತಿ ಪಟ್ಟಿ ಪ್ರಕಟಗೊಂಡು ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆಗಳು ಸ್ಪಷ್ಟವಾಗಿ ಗೋಚರವಾಗಲಿವೆ. ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಗೆ ೪ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ೧೩ ತಾಪಂ ಕ್ಷೇತ್ರಗಳು ಸೇರಿವೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು: ಸಾಲಿಗ್ರಾಮ ಕ್ಷೇತ್ರ – ಸಾಮಾನ್ಯ ಮಹಿಳೆ, ಮಿರ್ಲೆ ಕ್ಷೇತ್ರ- ಸಾಮಾನ್ಯ ಮಹಿಳೆ, ಭೇರ್ಯ ಕ್ಷೇತ್ರ- ಸಾಮಾನ್ಯ, ಹೊಸೂರು ಕ್ಷೇತ್ರ- ಅನುಸೂಚಿತ ಜಾತಿ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು: ಸಾಲಿಗ್ರಾಮ- ಅನುಸೂಚಿತ ಜಾತಿ ಮಹಿಳೆ, ಹರದನಹಳ್ಳಿ- ಹಿಂದುಳಿದ ಅ ವರ್ಗ ಮಹಿಳೆ, ಲಕ್ಷ್ಮೀಪುರ – ಸಾಮಾನ್ಯ, ಮೇಲೂರು- ಸಾಮಾನ್ಯ ಮಹಿಳೆ, ಮಿರ್ಲೆ- ಹಿಂದುಳಿದ ಬ ವರ್ಗ ಮಹಿಳೆ, ಭೇರ್ಯ -ಅನುಸೂಚಿತ ಪಂಗಡ ಮಹಿಳೆ, ತಂದ್ರೆ- ಸಾಮಾನ್ಯ ಮಹಿಳೆ, ಮುಂಡೂರು- ಸಾಮಾನ್ಯ, ಹನಸೋಗೆ- ಸಾಮಾನ್ಯ ಮಹಿಳೆ, ಚನ್ನಂಗೆರೆ- ಅನುಸೂಚಿತ ಜಾತಿ, ಮಾಯಿಗೌಡನಹಳ್ಳಿ- ಹಿಂದುಳಿದ ಅ ವರ್ಗ, ಹಳಿಯೂರು- ಸಾಮಾನ್ಯ, ಕುಪ್ಪೆ- ಸಾಮಾನ್ಯ.

ʼ ಇದೆಲ್ಲದರ ನಡುವೆ ಈಗಾಗಲೇ ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಮುಖ ಆಕಾಂಕ್ಷಿಗಳಾಗಿದ್ದ ಹಲವರಿಗೆ ಮೀಸಲಾತಿಯಿಂದ ತಮ್ಮ ತಮ್ಮ ಕ್ಷೇತ್ರಗಳು ಕೈಬಿಟ್ಟು ಹೋಗಿರುವುದು ಅರಗಿಸಿಕೊಳ್ಳಲಾಗದಂತಾಗಿದ್ದು ತಮಗೆ ಬೇರೆ ಯಾವ ಕ್ಷೇತ್ರದಲ್ಲಿ ಅನುಕೂಲವಾಗಲಿದೆ ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಅಕ್ಕಿ ದುಬಾರಿ: ಅನ್ನದ ಬಟ್ಟಲಿಗೆ ಬರದ ಬಿಸಿ

ಎಚ್.ಎಸ್.ದಿನೇಶ್‌ಕುಮಾರ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬರೆ  ಮೈಸೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ…

13 mins ago

ಕುಶಾಲನಗರದಲ್ಲಿ ಪಾರ್ಕಿಂಗ್ ಕಿರಿಕಿರಿ

ಕೆ.ಬಿ. ಶಂಶುದ್ದೀನ್ ‘ನೋ ಪಾರ್ಕಿಂಗ್’ ಫಲಕವಿದೆ, ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯಿಲ್ಲ  ಕುಶಾಲನಗರ: ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ…

26 mins ago

ಮೈಸೂರು ಜಿಲ್ಲೆಯಲ್ಲಿ 5,19,626 ಮತದಾರರು ಔಟ್‌

ಕೆ.ಬಿ.ರಮೇಶ ನಾಯಕ ಎಸ್‌ಐಆರ್‌ಗೂ ಮುನ್ನ ೨೭,೯೯,೬೯೩ ಮತದಾರರು: ಎಸ್‌ಐಆರ್ ನಂತರ ೨೨,೮೦,೦೬೭ ಮತದಾರರು  ಮೈಸೂರು: ಇಡೀ ದೇಶದಲ್ಲಿ ಮತದಾರರ ಪಟ್ಟಿ…

37 mins ago

ಆಂಧ್ರ ಕರಾವಳಿಗೆ ಅರ್ನಾಬ್ ಚಂಡಮಾರುತ ಭೀತಿ: ಅ.28ರಂದು ಕರಾವಳಿ ದಾಟುವ ಸಾಧ್ಯತೆ!

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿರುವ ಅರ್ನಾಬ್ ಚಂಡಮಾರುತ ನಾಳೆ, ಅಕ್ಟೋಬರ್ 28ರ ಪೂರ್ವಾಹ್ನ ಆಂಧ್ರಪ್ರದೇಶದ ಕರಾವಳಿ ದಾಟುವ ಸಾಧ್ಯತೆಯಿದೆ. ಬಾಪಟ್ಲಾ ಮತ್ತು…

18 hours ago

ಕರ್ನಾಟಕದ ಎಸ್‌ಐಆರ್‌ ಅಂತಿಮ ಮತದಾರರ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ, ಅಂದರೆ ಎಸ್‌ಐಆರ್‌ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌…

19 hours ago