ರಾಜ್ಯ

ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಬಿಸಿ ಮುಟ್ಟಿಸಿದೆ. ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ ಚಿಲ್ಲರೆ ಬೆಲೆ ಶೇಕಡಾ 30ರಷ್ಟು ಹೆಚ್ಚಾಗಿದೆ.

ಎರಡು ತಿಂಗಳಲ್ಲೇ ಸೋನಾ ಮಸೂರಿ ಅಕ್ಕಿ ಕೆಜಿಗೆ 20 ರೂಪಾಯಿ ದುಬಾರಿಯಾಗಿದೆ. ಸದ್ಯ ಹಳೆಯ ಸೋನಾ ಮಸೂರಿ ಕೆಜಿಗೆ 82ರಿಂದ 98 ರೂಪಾಯಿ, ಜೀರಿಗೆ ಅಕ್ಕಿ 90ರಿಂದ 115 ರೂಪಾಯಿ ಹಾಗೂ ಬುಲೆಟ್‌ ಅಕ್ಕಿ ಸುಮಾರು 95 ರೂಪಾಯಿಗೆ ಮಾರಾಟವಾಗುತ್ತಿದೆ.

ಮಾರುಕಟ್ಟೆಗಳಲ್ಲಿ ಭತ್ತದ ಆವಕ ಶೇಕಡಾ 10ರಿಂದ 40ರಷ್ಟು ಕುಸಿದಿದೆ. ಮಳೆ ಕೊರತೆ, ನೀರು ಬಿಡುಗಡೆ ವಿಳಂಬ ಹಾಗೂ ಪೂರೈಕೆ ಕುಸಿತ ಬೆಲೆ ಏರಿಕೆಗೆ ಕಾರಣವೆಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಎರಡನೇ ಬೆಳೆಗೂ ನೀರಿನ ಆತಂಕ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಆಂದೋಲನ ಡೆಸ್ಕ್

Recent Posts

ನವೆಂಬರ್.‌1ರಿಂದ ಎಲ್‌ಪಿಜಿ ಗ್ಯಾಸ್‌ ನಿಯಮಗಳಲ್ಲಿ ಬಿಗ್‌ ಚೇಂಜ್‌

ಬೆಂಗಳೂರು: ಎಲ್‌ಪಿಜಿ ಗ್ರಾಹಕರೇ ಗಮನಿಸಿ. ನವೆಂಬರ್‌ 1ರಿಂದ ಗ್ಯಾಸ್‌ ವಿತರಣೆಯ ನಿಯಮಗಳು ಮತ್ತಷ್ಟು ಬಿಗಿಯಾಗಲಿವೆ ಎಂದು ವರದಿಯಾಗಿದೆ. ಆಧಾರ್‌ ಆಧಾರಿತ…

12 mins ago

ಓದುಗರ ಪತ್ರ: ಒಂದು ‘ರೂಪ’, ಎರಡು ಗುಣ!

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು…

4 hours ago

ಓದುಗರ ಪತ್ರ: ಹಗುರ ಮಾತು ಬೇಡ

ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ…

4 hours ago

ಓದುಗರ ಪತ್ರ: ಇ – ಖಾತಾ: ಹೊಸ ಸಮಸ್ಯೆಯ ಅರಿವಿದೆಯೇ?

ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…

4 hours ago

ಓದುಗರ ಪತ್ರ: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಒಂದು ಬಹಿರಂಗ ಪತ್ರ

ಮಾನ್ಯರೆ , ಕುವೆಂಪುನಗರ ಬಡಾವಣೆ ಆರಂಭವಾದ ದಿನಗಳಿಂದಲೂ ಇಲ್ಲಿ (ಮನೆನ ಸಂಖ್ಯೆ ೨೨೨೨, ನಾಲ್ಕನೆಯ ಕ್ರಾಸ್, ಗಂಗೂಬಾಯಿ ಹಾನಗಲ್ ರಸ್ತೆ…

4 hours ago

ಮೈಸೂರು ದಸರಾ; ಆಗಬೇಕಿದೆ ಜನಪರ

ಜಿ.ಪಿ.ಬಸವರಾಜು ಖುಷಿಯೋ, ಸಂಕಟವೊ ಒಡಲೊಳಗಿಟ್ಟುಕೊಳ್ಳುತ್ತಾರೆ ಜನಸಾಮಾನ್ಯರು ಹತ್ತು ದಿನಗಳ ಕಾಲ ಕುಣಿದು ಕುಣಿದು ದಣಿದ ಮೈಸೂರು ದಸರಾ ಕಾಲ್ತೆಗೆದಿದೆ. ಹೋಗುವಾಗ…

4 hours ago