ಹಾಡು ಪಾಡು

ಸಂವಿಧಾನ ಮತ್ತು ಅಪ್ಪನ ಕಣ್ಣ ಬೆಳಕು

ರಮ್ಯ ಕೆ ಜಿ ಮೂರ್ನಾಡು

ನಾನು ಸಣ್ಣವಳಿದ್ದಾಗ ನಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾರಣ ಭಾನುವಾರ ನಮ್ಮಪ್ಪ ಪಿಚ್ಚರ್ ನೋಡಲು ಅವರ ಪರಿಚಯವಿರುವ ಒಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಟಿವಿ, ಹಾಲ್‌ನಲ್ಲಿದ್ದ ಕಾರಣ ನಾವು ಮನೆಯಿಂದ ಆಚೆ ಅಂದ್ರೆ ಹೊರಗಡೆ ಕೂತು ಪಿಚ್ಚರ್ ನೋಡ್ತಿದ್ದೆವು. ಆಗೊಂದು ದಿನ ‘ಹೇಮಾವತಿ’ ಪಿಚ್ಚರ್ ಹಾಕಿದ್ರು. ಅದ್ರಲ್ಲಿ ಹೀರೋ ಶ್ರೀನಿವಾಸಮೂರ್ತಿಯವರಿಗೆ ಬ್ರಾಹ್ಮಣ್ರು ಕೆಲವ್ರು “ನಮ್ ಸಂಸ್ಕಾರ, ಸಂಸ್ಕ ತಿ ಹಾಳ್ಮಾಡ್ದೆ‘ ಅಂತೆಲ್ಲ ಬೈತಿದ್ರು. ಶ್ರೀನಿವಾಸಮೂರ್ತಿ ಅವರಿಗೆಲ್ಲ ಮಾನವೀಯತೆಯ ಪಾಠ ಹೇಳ್ತಿದ್ದ. ಆಗ ನನ್ನಪ್ಪನ ಮುಖದಲ್ಲಿ ಎಂಥದ್ದೋ ಮಿಂಚು ಹೊಳಿತಿತ್ತು. ಆ ಮಿಂಚಿಗೆ ಕಾರಣ ಏನು ಅನ್ನೋದು ಆಗ ಗೊತ್ತಾಗಿರ್ಲಿಲ್ಲ. ಇತ್ತೀಚೆಗೆ ಮತ್ತೆ ಆ ಸಿನಿಮಾನ ನೋಡ್ದಾಗ ನನ್ನಪ್ಪನೊಳಗಿನ ಮಿಂಚಿಗೆ ಕಾರಣ ಗೊತ್ತಾಯ್ತು. ಅದೇ ಆ ಮನೆಯವರು, ಇಂದು ನನ್ನನ್ನು ಮನೆಯೊಳಗೆ ಕರೆದು, ಸೋಫಾದಲ್ಲಿ ಕೂರಿಸಿ, ಕಾಫಿ ಕೊಡುತ್ತಾರಂದ್ರೆ ಇದು ಸಾಧ್ಯವಾದದ್ದು ಸಂವಿಧಾನದಿಂದ.

ನನ್ನೂರು ಕೊಡಗು. ನಾನು ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು. ಇಲ್ಲಿನ ಮೂಲನಿವಾಸಿಗಳಾಗಿದ್ದೂ, ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿರುವ ಅನೇಕ ಸಮುದಾಯಗಳೊಂದಿಗೆ ಶತಮಾನಗಳಾಚೆ ಕೊಡಗಿಗೆ ವಲಸೆ ಬಂದ ನಮ್ಮ ಸಮುದಾಯದ ಅನೇಕರಿಗೆ ಇಂದಿಗೂ ಮನೆಗಳಿಲ್ಲ.

ನನ್ನಮ್ಮನಂತೆ ಅನಕ್ಷರಸ್ಥರೂ, ಮತ್ತು ಅಕ್ಷರಸ್ಥರಾಗಿಯೂ ಶಿಕ್ಷಣ ವಂಚಿತರಾದ ಅನೇಕರು ಇಲ್ಲಿನ ತೋಟಗಳಲ್ಲಿ ಇಂದಿಗೂ ಕೂಲಿಯಾಳುಗಳಾಗಿಯೇ ಉಳಿದು ಹೋಗಿರುವುದಕ್ಕೆ ಕಾರಣ ಉಳ್ಳವರು ಹೇಳುವ ದುಶ್ಚಟಗಳೊಂದೇ ಅಲ್ಲವೆನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ನನ್ನಪ್ಪ ಹೇಳಿದ ಒಂದು ಸಂಗತಿ ನೆನಪಾಗುತ್ತದೆ. ಆ ಕಾಲಕ್ಕೆ ಮೂರ್ನಾಡಿನಲ್ಲಿದ್ದ ಇಂಗ್ಲಿಷ್ ಮೀಡಿಯಂ ಶಾಲೆಗೆ ನನ್ನನ್ನು ಸೇರಿಸುವ ಬಯಕೆಯಾದಾಗ, ಅಲ್ಲಿನ ಮ್ಯಾನೇಜ್ಮೆಂಟ್‌ಗೆ ಕೇಳಿ, ಸ್ವಲ್ಪ ಸ್ವಲ್ಪವೇ ಫೀಸ್ ಕಟ್ತೀನಿ ಅಂತ ನನ್ನಪ್ಪ ಕೋರಿಕೊಂಡಾಗ್ಯೂ, ಮ್ಯಾನೇಜ್ಮೆಂಟ್ ಒಪ್ಪದ ಕಾರಣ ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಬೇಕಾಯ್ತಂತೆ. ಈ ಸರ್ಕಾರಿ ಶಾಲೆಯೂ ಇಲ್ಲದೇ ಹೋಗಿದ್ದಿದ್ದರೆ! ಮತ್ತು ಶಿಕ್ಷಣ ಎಲ್ಲರಿಗೂ ಸಿಗಬೇಕೆಂದು ಸಂವಿಧಾನದಲ್ಲಿ ಇಲ್ಲದೇ ಹೋಗಿದ್ದಿದ್ದರೆ! ನೆನೆದರೇ ದಿಗಿಲು ನನಗೆ!

ಶಾಲೆಗಳಲ್ಲಿ ನನ್ನ ಕಲಿಕೆ ನೋಡಿ ನಮ್ಮಪ್ಪನಿಗೆ ಖುಷಿಯಾಗುತ್ತಿತ್ತು. ಆದರೆ ಯಾರ್ಯಾರೋ “ಹುಡುಗೀರ್ನ ಯಾಕೆ ಓದಿಸ್ತೀಯ?” ಅಂತ ಕೇಳ್ತಿದ್ರಂತೆ. ಆದ್ರೆ ನನ್ನೊಂದಿಗೆ ನನ್ನ ತಂಗಿ, ತಮ್ಮಂದಿರನ್ನೂ ಶಾಲೆಗೆ ಕಳಿಸಿದ ನನ್ನಪ್ಪ ಮತ್ತು ಅಮ್ಮನ ಪ್ರಜ್ಞೆಯ ಕಾರಣವಾಗಿ ನಾನೀಗ ಇಂದು ಸಂವಿಧಾನ ನೀಡಿದ ಮೀಸಲಾತಿಯ ಉಪಯೋಗದಿಂದ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದೇನೆ. ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ.

” ಮಾನವತೆಯ ಮಹಾಶಕ್ತಿಯಾಗಿರುವ ಸಂವಿಧಾನವೇ ನಮ್ಮ ಬದುಕಿನ ಬೆಳಕು ಎಂದು ನನ್ನೊಳಗನ್ನು ಮತ್ತೆ ಎಚ್ಚರಗೊಳಿಸಿ ಕೊಳ್ಳುತ್ತಿದ್ದೇನೆ…”

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

4 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

17 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

17 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

17 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

18 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

18 hours ago