ಹಾಡು ಪಾಡು

ರಂಜಾನ್ ಅಂದರೆ ಹಬ್ಬವಲ್ಲ ; ಹಬ್ಬದ ಮೊದಲಿನ ಉಪವಾಸ

ಖದೀಜಾ ಉಮೈರಾ

ರಂಜಾನಿಗೆ ಒಂದು ಹಬ್ಬದ ಗುಣವಿದೆ. ಹಾಗಾಗಿ ನಮಗೆಲ್ಲಾ ಅದು ಹಬ್ಬದಂತೆ ಭಾಸವಾಗುವುದು ಸಹಜ. ಇದು ಇಸ್ಲಾಮಿಕ್ ಕ್ಯಾಲೆಂಡರಿನ ಒಂಬತ್ತನೆಯ ಮತ್ತು ಬಹುಮುಖ್ಯ ತಿಂಗಳು. ಭಾರತ ಒಳಗೊಂಡಂತೆ ಹಲವಷ್ಟು ದೇಶಗಳಲ್ಲಿ ರಂಜಾನ್ ಹಬ್ಬವೆಂದು ಪರಿಗಣಿಸಿದರೂ, ಇದು ವಾಸ್ತವದಲ್ಲಿ ಆತ್ಮ ಶುದ್ಧೀಕರಣ ಗೊಳಿಸುವ ತಿಂಗಳು ಮತ್ತು ಈ ತಿಂಗಳ ಕೊನೆಗೆ ಬರುವುದಾಗಿದೆ ನಿಜವಾದ ಹಬ್ಬ ಈದ್.

ಭಾರತ, ಪಾಕಿಸ್ತಾನ ಮತ್ತು ಕೊಲ್ಲಿರಾಷ್ಟ್ರಗಳು ಭೂ ಮಧ್ಯ ರೇಖೆಗೆ ಹತ್ತಿರವಿರುವುದರಿಂದ ಎಲ್ಲ ಕಾಲಮಾನಗಳಲ್ಲೂ ವರ್ಷಪೂರ್ತಿ ಹಗಲು ಮತ್ತು ರಾತ್ರಿಯ ಕಾಲಾವಽಯಲ್ಲಿ ತುಂಬಾ ವ್ಯತ್ಯಾಸ ಇರುವುದಿಲ್ಲ. ಆ ಕಾರಣದಿಂದ, ನನಗೆ ನನ್ನೂರಲ್ಲಿ ಹಲವು ವರ್ಷಗಳ ಕಾಲ ನಿರ್ದಿಷ್ಟ ಗಂಟೆಗಳ ಉಪವಾಸ ಮಾಡುವ ಅನುಭವ ಮಾತ್ರವಿತ್ತು. ಆದರೆ ಕೆಲಸದ ಕಾಣದಿಂದ ಫ್ರಾನ್ಸ್‌ನಲ್ಲಿ ಇರಬೇಕಾಗಿ ಬಂದಾಗ ನಾನು ಮೊದಲ ಬಾರಿಗೆ ೧೮ ಗಂಟೆಗಳ ದೀರ್ಘ ಕಾಲ ಉಪವಾಸ ಮಾಡಿದ್ದೆ. ಲಂಡನ್‌ನಲ್ಲಿ ರಂಜಾನ್ ಚಂದ್ರದರ್ಶನವಾದ ಕೂಡಲೇ ಈ ತಿಂಗಳನ್ನು ದೀಪಾವಳಿಯಂತೆಯೇ ಬಣ್ಣ ಬಣ್ಣದ ಬೆಳಕಿನ ದೀಪಗಳೊಂದಿಗೆ ಸ್ವಾಗತಿಸಲಾಗುತ್ತದೆ. ಮಸೀದಿಗಳಲ್ಲಿ ವಿಶೇಷ ತರಾವೀಹ್ ನಮಾಝ್‌ಗಳು ನಡೆಯುತ್ತವೆ ಮತ್ತು ಕಮ್ಯೂನಿಟಿ ಸೆಂಟರ್‌ಗಳಲ್ಲಿ ಇಫ್ತಾರ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕುಟುಂಬಗಳು ಮತ್ತು ಸ್ನೇಹಿತರು ಒಟ್ಟಾಗಿ ಉಪವಾಸ ತೊರೆಯುವ ಕ್ಷಣಗಳು ಎಲ್ಲೆಡೆ ಕಾಣಸಿಗುತ್ತವೆ. ವಿಶೇಷವಾಗಿ ಮುಸ್ಲಿಂ ಸಮುದಾಯ ಹೆಚ್ಚು ಇರುವ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲೂ ಅಂಗಡಿಗಳು ಮತ್ತು ಹೋಟೆಲ್‌ಗಳು ಇಫ್ತಾರ್ ಹಾಗೂ ಸಹರಿ ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣಬಹುದು.

ಈ ವರ್ಷ ಇಂಗ್ಲೆಂಡಿನಲ್ಲಿ ಚಳಿಗಾಲದ ಕಡಿಮೆ ಅವಽಯ ಹಗಲಿನಲ್ಲಿ ಉಪವಾಸ ಬಂದಿದೆ. ಬೇಸಿಗೆ ಕಾಲದಲ್ಲಿ ಹಗಲು ಸುಮಾರು ೧೮ ಗಂಟೆಗಳವರೆಗೆ ಇದ್ದರೆ ಚಳಿಗಾಲದಲ್ಲಿ ೭ರಿಂದ ೮ ಗಂಟೆಗಳಲ್ಲೇ ಹಗಲು ಮುಗಿಯುವುದರಿಂದ ದೇಹ ಹೆಚ್ಚು ದಣಿಯುವುದಿಲ್ಲ. ನಮ್ಮಲ್ಲಿ ಖರ್ಜೂರ, ಸಮೋಸ, ಹಣ್ಣುಗಳು ಹಾಗೂ ಹಲವಾರುವಿಧದ ಮಣ್ಣಿಗಳು(ಹಾಲುಭಾಯಿ) ಇಫ್ತಾರಿನ ಪ್ರಮುಖ ಆಹಾರವಾಗಿದ್ದರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಮ್ಮ ಮಕ್ಕಳು ಖರ್ಜೂರದೊಂದಿಗೆ ಹ್ಯಾಷ್ ಬ್ರೌನ್, ಬೇಯಿಸಿದ ತರಕಾರಿಗಳು ಮತ್ತು ಮ್ಯಾಕ್ ಅಂಡ್ ಚೀಸ್‌ಗಳಂತಹ ಆಹಾರಗಳಿಗೆ ಹೆಚ್ಚಿನ ಬೇಡಿಕೆ ಇಡುತ್ತಾರೆ. ನಾವು ಮೊದಲ ಬಾರಿ ಒಂದು ತುನೀಷಿಯನ್ ಕುಟುಂಬದೊಂದಿಗೆ ಇಫ್ತಾರ್ ಮಾಡಿದಾಗ ಅಚ್ಚರಿಯೆಂಬಂತೆ ಅವರ ಇಫ್ತಾರ್ ಟೇಬಲ್ ಮೇಲೂ ಸಮೋಸ ಇತ್ತು. ಆದರೆ ಅವರು ಅದನ್ನು ಬ್ರಿವತ್ ಅನ್ನುತ್ತಾರೆ.

ಇತ್ತೀಚಿಗೆ ನಮ್ಮಲ್ಲೂ ರಂಜಾನಿನ ಆಹಾರ ಪದ್ಧತಿ ಆಧುನೀಕರಣಗೊಂಡಿದೆ. ಹಣ್ಣು ಹಂಪಲು ಮತ್ತು ಪೋಷಕಾಂಶಯುಕ್ತ ಆಹಾರಗಳನ್ನು ತಿನ್ನುವ ಕಡೆ ಬಹಳಷ್ಟು ಕರಿದ ಆಹಾರ ಮತ್ತು ಜೆಲಟಿನ್, ಸಕ್ಕರೆಯಿರುವ ಆಹಾರಗಳಿಗೆ ಆಕರ್ಷಿತರಾಗುತ್ತಿದ್ದೇವೆ, ಅನಗತ್ಯದ ಆರೋಗ್ಯ ಸಮಸ್ಯೆಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ.

ಹಾಗೆಯೇ, ಹಿಂದೆ ಕೂಡು ಕುಟುಂಬಗಳಲ್ಲಿ ಉಪವಾಸ ತೊರೆಯುವ ಸಂದರ್ಭಗಳಲ್ಲಿ, ಅಡುಗೆ ಮಾಡುವುದು ಹೆಣ್ಣು ಮಕ್ಕಳಿಗೆ ಮಾತ್ರ ಮೀಸ ಲಾಗಿತ್ತು. ಈಗ ದಂಪತಿ ಇಬ್ಬರೂ ಒಟ್ಟಾಗಿ ಅಡುಗೆ ಮಾಡಿ ಮಕ್ಕಳೊಂದಿಗೆ ಕುಳಿತು ಪ್ರಾರ್ಥಿಸಿ ಮಗ್ರಿಬ್ ಬಾಂಗಿಗೆ ಕಾಯುವಷ್ಟು ನಾವು ಬದಲಾಗಿದ್ದೇವೆ. ಇನ್ನು, ಪ್ರಾದೇಶಿಕವಾಗಿ ಮನುಷ್ಯನಿಗೆ ಉಪವಾಸದ ಅನುಭವ ಭಿನ್ನ ವಾಗಿರುವಂತೆ, ಅವರವರ ಉದ್ಯೋಗ ಹಾಗೂ ಜೀವನಶೈಲಿಗೂ ಅನುಗುಣವಾಗಿ ಉಪವಾಸದ ಕಷ್ಟಗಳು ಮತ್ತು ಕಾವು ಭಿನ್ನವಾಗಿರುತ್ತವೆ. ಕಡು  ಬೇಸಿಗೆಯಲ್ಲಿ ಕೃಷಿಕರು ಅಥವಾ ಕಾರ್ಮಿಕರು ತೀವ್ರ ಕೆಲಸ ಮಾಡುವಾಗ ಉಪವಾಸ ಮಾಡುವುದು ಎಷ್ಟೋ ಸಲ ಕಷ್ಟವಾಗುವುತ್ತದೆ. ಹಲವು ಕ್ರೀಡಾ ಪಟುಗಳು ಕೂಡ ಉಪವಾಸವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ವೇಗದ ಬದುಕಲ್ಲಿ ನೆಮ್ಮದಿಯನ್ನು ಅರಸುವ ಎಲ್ಲರಿಗೂ ರಂಜಾನ್ ಒಂದು ಓಯಾಸಿಸ್‌ನಂತೆ. ರೋಗಿಗಳಿಗೆ, ದೂರ ಪ್ರಯಾಣ ಕೈಗೊಂಡವರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಉಪವಾಸ ಕಡ್ಡಾಯವಲ್ಲ. ಆದರೆ, ಇಫ್ತಾರಿನ ವೇಳೆ ಎಲ್ಲರೂ ಕೂತು ಕಾಯುವ ಆ ಸವಿ ಕ್ಷಣಕ್ಕಾಗಿ ಮಕ್ಕಳು ಹಠ ಮಾಡಿ ಉಪವಾಸ ಆಚರಿಸುತ್ತಾರೆ.

ರಂಜಾನ್ ಹಸಿವಿನ ಮಹತ್ವ ಮತ್ತು ಬಡತನದ ಸಂಕಟವನ್ನು ತಿಳಿಯಲು ಕಲಿಸುವ ತಿಂಗಳು. ಹಾಗಾಗಿ ಒಂದು ಕಡೆಯಿಂದ ರಂಜಾನಿನ ಇಫ್ತಾರಿಗಾಗಿ ಅರ್ಹತೆಯುಳ್ಳವರಿಗೆ ಕಿಟ್‌ಗಳನ್ನು ನೀಡಿ ಸಹಕರಿಸುವ ತಂಡಗಳು ನಮಗೆ ಅಲ್ಲಲ್ಲಿ ಕಾಣಸಿಗುತ್ತವೆ. ವಿಪರ್ಯಾಸವೆಂದರೆ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳಿಂದ ಪ್ರಭಾವಿತರಾಗಿ ಮಾಡುವ ಕೆಲವು ಇಫ್ತಾರ್ ಕಾರ್ಯಕ್ರಮಗಳು ಬಡವರನ್ನು ಅಣಕಿಸುವಂತಿರುತ್ತದೆ. ರಂಜಾನಿನಲ್ಲಿ ಬೆಳೆಸಿಕೊಂಡ ಸಹನೆ, ಕ್ಷಮಾಶೀಲತೆ ಮತ್ತು ಉದಾರತೆಯನ್ನು ಉಳಿದ ತಿಂಗಳುಗಳಲ್ಲೂ ಬೆಳೆಸಿಕೊಂಡು ಸ್ವಚ್ಛ ಮನಸ್ಸಿನಿಂದ ಮುನ್ನಡಿಯಿಟ್ಟಷ್ಟೂ ಬದುಕು ಚಂದವಾಗುತ್ತದೆ.

” ರಂಜಾನ್ ಹಸಿವಿನ ಮಹತ್ವ ಮತ್ತು ಬಡತನದ ಸಂಕಟವನ್ನು ತಿಳಿಯಲು ಕಲಿಸುವ ತಿಂಗಳು”

 

 

 

ಆಂದೋಲನ ಡೆಸ್ಕ್

Recent Posts

ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ-ಗಂಭೀರ ಗಾಯ

ಹಾಸನ: ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ನೌಕರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ…

1 hour ago

ಕೆ.ಆರ್‌.ನಗರ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಕೆ.ಆರ್.‌ನಗರ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕಿನ ಚೀನರಹಳ್ಳಿ ಗ್ರಾಮದಲ್ಲಿ ನಡೆದಿದೆ.…

2 hours ago

ಓದುಗರ ಪತ್ರ: ಚುನಾವಣೋತ್ತರ.. !

ಚುನಾವಣೋತ್ತರ.. ! ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ.. ಪ್ರಕಟವಾದವು ಫಲಿತಾಂಶದ ಸಮೀಕ್ಷೆ ಆದರೆ ಯಾರೂ ಮಾಡಿರಲಿಲ್ಲ ಹೀಗೆ ವಾಣಿಜ್ಯ ಸಿಲಿಂಡರ್ ದರ…

2 hours ago

ಓದುಗರ ಪತ್ರ: ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಿ

ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ ರಾಜ್ಯದ ಹಲವೆಡೆ ನೀರಿನ ಕೊರತೆ ಗಂಭೀರವಾಗುತ್ತಿದೆ. ಕೆರೆಗಳು, ಹಳ್ಳಗಳು ಒಣಗುತ್ತಿದ್ದು, ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.…

2 hours ago

ಓದುಗರ ಪತ್ರ: ರಸ್ತೆ ಬದಿಯಲ್ಲಿರುವ ಗಿಡ ಮರಗಳಿಗೆ ನೀರುಣಿಸಿ

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ, ಗ್ರಾಮ ರಸ್ತೆ, ಗಡಿ ರಸ್ತೆಗಳ ಬದಿಯಲ್ಲಿರುವ ಗಿಡ ಮರಗಳು ನೆರಳು ನೀಡುತ್ತಿವೆ…

3 hours ago

ಓದುಗರ ಪತ್ರ: ವಾಣಿಜ್ಯ ಸಿಲಿಂಡರ್ ದರ ಏರಿಕೆ ಬರೆ

ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ದರವನ್ನು ಮೇ ೧ರಿಂದ ಒಂದೇ ಬಾರಿಗೆ ೯೯೧ರೂ.ಗಳಿಗೆ ಏರಿಕೆ ಮಾಡಿದ್ದು, ಇದರಿಂದಾಗಿ ಹೋಟೆಲ್‌ಗಳಲ್ಲಿ…

3 hours ago