ಹಾಡು ಪಾಡು

ಡಾ.ಬೃಂದಾ ಸುಹಾಸ್ ಸೈಕ್ಲಿಂಗ್ ಧ್ಯಾನ

ಅಕ್ಷತಾ

ಸೈಕ್ಲಿಂಗ್‌ನಲ್ಲಿ ‘ಸೂಪರ್ ರಾಂಡೋನಿಯರ್’ ಬಿರುದಾಂಕಿತ ಮೈಸೂರಿನ ಮೊದಲ ಮಹಿಳೆ ಡಾ.ಬೃಂದಾ ಗೋಧಿ. ಡಾ.ಬೃಂದಾ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿ ದಿನವಿಡೀ ಡಾಕ್ಟರ್ ವೃತ್ತಿ, ಪ್ರಾಧ್ಯಾಪನ ವೃತ್ತಿಯ ಜೊತೆಗೆ ಸೈಕ್ಲಿಂಗ್‌ಅನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇವರ ಸೈಕ್ಲಿಂಗ್ ಸಾಧನೆ ಬಹಳಷ್ಟು. ಪಿಯುಸಿ ನಂತರ ಸೈಕಲ್ ಸಹವಾಸ ಬಿಟ್ಟಿದ್ದವರನ್ನು ಮತ್ತೆ ಸೈಕ್ಲಿಂಗ್‌ಗೆ ಮುಖ ಮಾಡುವಂತೆ ಮಾಡಿದ್ದೇ ೨೦೧೭ರಲ್ಲಿ ‘ರಾಯಲ್ ರೈಡರ್ಸ್ ಮೈಸೂರು’ ತಂಡ. ತಂಡದ ಸದಸ್ಯರು ಮನಾಲಿ-ಕಾರ್ದೂಂಗ್ಲಾ ಟ್ರಿಪ್‌ಗೆ ಅಭ್ಯಾಸ ಮಾಡುತ್ತಿದ್ದುದನ್ನು ನೋಡಿ ತನಗೂ ಇಂತಹ ರೈಡ್ ಹೋಗಬೇಕೆಂಬ ಆಸೆ ಹುಟ್ಟಿತು. ಹೀಗೆ ಶುರುವಾದ ಬೃಂದಾ ಅವರ ಸೈಕಲ್ ಸವಾರಿ ಇತ್ತೀಚೆಗೆ ‘ಕಾಶ್ಮೀರ್ ಟು ಕನ್ಯಾಕುಮಾರಿ’ ತನಕವೂ ಸಾಗಿದೆ.

ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣದಲ್ಲಿ ಸೈಕ್ಲಿಂಗ್‌ಅನ್ನು ಕೇವಲ ಹವ್ಯಾಸವಾಗಿ ಅಷ್ಟೇ ನೋಡದೆ ಬೃಂದಾ ತಮ್ಮ ವೃತ್ತಿಪರತೆಯನ್ನೂ ಮೆರೆದಿದ್ದಾರೆ. ಸಾಗುವಷ್ಟು ದೂರವೂ ಹಳ್ಳಿಗಳ ಗುಡ್ಡಗಾಡು ಪ್ರದೇಶಗಳ ಜನರಿಗೆ ಹಲ್ಲಿನ ಆರೋಗ್ಯದ ಕುರಿತು ಪುಟ್ಟ ಪುಟ್ಟ ಕರಪತ್ರಗಳನ್ನು ಹಂಚುವ ಮೂಲಕ, ಶಾಲೆಗಳಿಗೆ ತೆರಳಿ ಮಕ್ಕಳಿಗೆ ತರಗತಿ ತೆಗೆದುಕೊಳ್ಳುವ ಮುಖೇನ ಆರೋಗ್ಯ ಜಾಗೃತಿಯನ್ನು ಮೂಡಿಸಿದ ಹಿರಿಮೆ ಡಾ.ಬೃಂದಾ ಸುಹಾಸ್ ಗೋಧಿಯವರದ್ದು.

‘ಸೈಕ್ಲಿಂಗ್ ಎಂದರೆ ನಿಮ್ಮ ಪ್ರಕಾರ ಏನು?’ ಎಂದು ಕೇಳಿದರೆ ‘ಮೊದಲು ಸೈಕಲ್‌ನ ಬೇರೆ ಬೇರೆ ಮಾದರಿಗಳ ಬಗ್ಗೆ ಅರಿವಿರಬೇಕು’ ಎನ್ನುವ ಡಾ.ಬೃಂದಾ ಸೈಕಲ್ ಕುರಿತಾಗಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಸೈಕಲ್‌ನಲ್ಲಿ ಮೂರು ವಿಧವಿದ್ದು ಮೌಂಟೇನ್ ಬೈಕ್, ಹೈಬ್ರಿಡ್ ಬೈಕ್ ಹಾಗೂ ರೋಡ್ ಬೈಕ್ ಎಂದು ವಿಂಗಡಿಸಲಾಗುತ್ತದೆ. ಮೌಂಟೇನ್ ಬೈಕ್‌ಗಳ ಟಯರ್ ದಪ್ಪನಾಗಿದ್ದು ಒಂದು ಸಲಕ್ಕೆ ೨೦೦ ಕಿಲೋಮೀಟರ್ ದೂರ ಕ್ರಮಿಸಬಹುದು.

ರೋಡ್ ಬೈಕ್‌ಗಳು ಹಗುರವಾಗಿ ತೆಳ್ಳನೆಯ ಟಯರ್ ಹೊಂದಿದ್ದು ೩೦೦-೪೦೦ ಕಿಲೋಮೀಟರ್ ಪ್ರಯಾಣಿಸಬಹುದು. ಸರಿಸುಮಾರು ಒಂದೂವರೆ ಲಕ್ಷದಿಂದ ಮೂರು ಲಕ್ಷದವರೆಗಿನ ಸೈಕಲ್‌ಗಳಿದ್ದು ಬಿಡಿಭಾಗಗಳ ಗುಣಮಟ್ಟಕ್ಕನುಸಾರವಾಗಿ ಸೈಕಲ್ ದರದಲ್ಲಿ ವ್ಯತ್ಯಾಸವಿರುತ್ತದೆ. ನಮ್ಮ ಸೈಕಲ್ ಟಯರ್ ರೇಟ್ ಕಾರ್ ಟಯರ್ ಗಿಂತಲೂ ದುಬಾರಿ. ಒಂದೊಂದು ಟಯರ್ ೯,೦೦೦ ರೂಪಾಯಿಗಳಷ್ಟು ಬೆಲೆಬಾಳುತ್ತದೆ ಎನ್ನುತ್ತಾರೆ ಡಾ.ಬೃಂದಾ.

ಸೈಕ್ಲಿಸ್ಟ್ ಆಗಿರುವ ನಮ್ಮಂತಹವರಿಗೆ ಸೈಕಲ್ ಎಂದರೆ ಕುಟುಂಬದ ಒಬ್ಬ ಸದಸ್ಯನಂತೆ ಎನ್ನುವ ಬೃಂದಾ ‘ಸೈಕಲ್‌ನ ಕಾಳಜಿಯೆಂದರೆ ತಮ್ಮ ವೈಯಕ್ತಿಕ ಆರೋಗ್ಯದಷ್ಟೇ ಮುಖ್ಯವಾಗುತ್ತದೆ. ಪ್ರತೀ ಮೂರು ಸಾವಿರ ಕಿಲೋಮೀಟರ್ ಪ್ರಯಾಣದ ನಂತರ ಸೈಕಲ್ ಸರ್ವಿಸ್ ಮಾಡುವುದು ಮುಖ್ಯವಾಗುತ್ತದೆ. ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸದಿದ್ದರೆ ಸೈಕಲ್ ಸವಾರಿ ದುಬಾರಿಯಾಗುತ್ತದೆ. ದೂರ ಪ್ರಯಾಣ ಮಾಡುವಂತಹ ಸೈಕಲ್‌ಗಳಿಗೆ ಹೆಚ್ಚಾಗಿ ಟ್ಯೂಬ್ ಲೆಸ್ ಟಯರ್‌ಗಳೇ ಇರುವುದರಿಂದ ಅಷ್ಟು ಬೇಗನೇ ಪಂಕ್ಚರ್ ಆಗುವ ಭಯ ಇರುವುದಿಲ್ಲ.

ಲಾಂಗ್ ಡಿಸ್ಟೆನ್ಸ್ ಸೈಕ್ಲಿಂಗ್ ಹೋಗುವುದ ಕ್ಕಾಗಿಯೇ ಪ್ರತ್ಯೇಕ ಸೈಕಲ್ಗಳಿದ್ದು ಮಾಮೂಲಿ ಸೈಕಲ್ ಅಂಗಡಿಗಳಲ್ಲಿ ಇವು ದೊರಕದ ಕಾರಣ ಆರ್ಡರ್ ಮಾಡಿ ತರಿಸಿಕೊಳ್ಳುತ್ತೇವೆ. ಇದು ಸೈಕಲ್‌ನ ಸಂಗತಿಯಾದರೆ ಇನ್ನು ಸೈಕ್ಲಿಸ್ಟ್‌ಗಳು ‘ಬೈಕ್ ಫಿಟ್’ ಮಾಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿಯೇ ಬೈಕ್ ಫಿಟ್ ಸೆಂಟರ್‌ಗಳು ಇದ್ದು ಸೈಕ್ಲಿಸ್ಟ್‌ಗಳ ಎತ್ತರ ಮತ್ತು ತೂಕಕ್ಕೆ ಅನುಗುಣವಾಗಿ ಸೈಕಲ್ ಅನ್ನು ವಿನ್ಯಾಸ ಮಾಡಲಾಗುತ್ತದೆ. ಸೈಕ್ಲಿಸ್ಟ್ ಭುಜದಿಂದ ಸೈಕಲ್ ಹ್ಯಾಂಡಲ್ ತನಕದ ಉದ್ದಳತೆ, ಪೆಡಲ್ ತುಳಿಯುವ ವೇಳೆ ಮಂಡಿಯ ಬಾಗುವಿಕೆ ಇತ್ಯಾದಿಗಳಿಗೆ ತಕ್ಕಂತೆ ಪ್ರತಿಯೊಬ್ಬ ಸೈಕ್ಲಿಸ್ಟ್‌ಗೆ ಸೈಕಲ್ ಡಿಸೈನ್ ಮಾಡಲಾಗುತ್ತದೆ. ಒಬ್ಬ ಸೈಕ್ಲಿಸ್ ನ ಸೈಕಲ್ ಇನ್ನೊಬ್ಬ ಸೈಕ್ಲಿಸ್ಟ್‌ಗೆ ಹೊಂದಿಕೆಯಾಗದಿರು ವುದರಿಂದ ಪ್ರತಿಯೊಬ್ಬ ಸೈಕ್ಲಿಸ್ಟ್ ತನಗೆ ಬೇಕಾದಂತೆ ಸೈಕಲ್ ಡಿಸೈನ್ ಮಾಡಿಸುತ್ತಾರೆ. ಬಟ್ಟೆಗಳಲ್ಲಿ ಇರುವಂತೆ ಸೈಕಲ್‌ಗಳಲ್ಲಿಯೂ ಮೀಡಿಯಂ, ಲಾರ್ಜ್, ಎಕ್ಸ್ ಟ್ರಾ ಲಾರ್ಜ್ ಸೈಜ್‌ಗಳಿದ್ದು ಸೈಕ್ಲಿಸ್ಟ್ ತನಗೆ ಬೇಕಾದ ಅಳತೆಯ ಸೈಕಲ್ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಎಲ್ಲ ರೀತಿಯಲ್ಲಿ ಸೈಕಲ್ ಸಿದ್ಧಪಡಿಸಿ ರೋಡ್ ಟ್ರಯಲ್ ಮಾಡಿದ ನಂತರವೇ ಸೈಕಲ್ ಸವಾರಿಯ ಪೂರ್ವ ತಯಾರಿ ಮುಗಿಯು ತ್ತದೆ. ಇದಕ್ಕೆ ಏನಿಲ್ಲವೆಂದರೂ ಹದಿನೈದು ಸಾವಿರ ರೂಪಾಯಿಗಳಷ್ಟು ಖರ್ಚು ಇರು ತ್ತದೆ!’ ಎನ್ನುತ್ತಾ ತಮ್ಮ ಸೈಕಲ್ ಬಗ್ಗೆ ಹೇಳುತ್ತಾರೆ. ಡಾ.ಬೃಂದಾ ಪ್ರಕಾರ ಸೈಕ್ಲಿಂಗ್ ಎನ್ನುವುದು ಒಂದು ಧ್ಯಾನ. ‘ಸೈಕಲ್ ಸೀಟಿನಲ್ಲಿ ಒಮ್ಮೆ ಕುಳಿತುಬಿಟ್ಟರೆ ಪ್ರಪಂಚವನ್ನೇ ಮರೆಯುತ್ತೇನೆ.

ನಾನು, ಸೈಕಲ್ ಮತ್ತು ರಸ್ತೆ ಇಷ್ಟೇ ನನ್ನ ಜಗತ್ತಾಗುತ್ತದೆ. ಲಾಂಗ್ ಡಿಸ್ಟೆನ್ಸ್ ರೈಡ್‌ನಲ್ಲಿ ನನ್ನೊಳಗಿನ ನಾನು ಪಕ್ವಗೊಳ್ಳುತ್ತಾ ಸಾಗುತ್ತೇನೆ. ನಾನು ನನ್ನನ್ನು ಕಂಡುಕೊಳ್ಳು ವುದಕ್ಕೆ ಸೈಕ್ಲಿಂಗ್ ಮಾಡುತ್ತೇನೆ. ಫಿಟ್ನೆಸ್ಗಾಗಿ ಆಯ್ಕೆ ಮಾಡಿಕೊಂಡ ಸೈಕ್ಲಿಂಗ್ ನನಗೆ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಕಲಿಸಿಕೊಟ್ಟಿದೆ. ಸೈಕ್ಲಿಂಗ್ ಎಂದರೆ ನನಗೆ ಬದುಕು’ ಎಂದು ತಮ್ಮ ಸೈಕಲ್ ಪ್ರೀತಿಯ ಮಧುರ ಸುಖವನ್ನು ಹಂಚಿಕೊಂಡ ಡಾ.ಬೃಂದಾ ಸುಹಾಸ್ ಅವರ ಸೈಕ್ಲಿಂಗ್ ಸಾಧನೆಯ ಪಟ್ಟಿ ದೊಡ್ಡದಿದೆ.

‘ವಯಸ್ಸು ಕೇವಲ ಒಂದು ಸಂಖ್ಯೆ’ ಎಂಬ ಮಾತನ್ನು ಮತ್ತೆ ಮತ್ತೆ ಹೇಳುವ ಡಾ.ಬೃಂದಾ ೨೦೨೫ರಲ್ಲಿ ಸೈಕ್ಲಿಂಗ್‌ನಲ್ಲಿ ಲಾಲ್ ಚೌಕ್ ಶ್ರೀನಗರದಿಂದ ಕನ್ಯಾಕುಮಾರಿಯವರೆಗಿನ ೩,೬೫೮ ಕಿ.ಮೀ. ದೂರವನ್ನು ೨೨ ದಿನಗಳಲ್ಲಿ ಮೂಲಕ ಕ್ರಮಿಸಿ ತಮ್ಮ ಗುರಿ ಮುಟ್ಟಿದ್ದಾರೆ.

” ಸೈಕಲ್ ಎಂದರೆ ಇಷ್ಟೇನಾ ಎಂದು ಮೂಗು ಮುರಿಯುವವರಿಗೆ ಡಾ.ಬೃಂದಾ ಸುಹಾಸ್ ಗೋಽಯವರು ಸೈಕಲ್ ಎಂದರೆ ಚಕ್ರಗಳೊಳಗೆ ದೊರಕುವ ಬದುಕಿನ ಪಾಠ ಎನ್ನುತ್ತಾರೆ”

 

 

ಆಂದೋಲನ ಡೆಸ್ಕ್

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

16 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

16 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

16 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

16 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

16 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

16 hours ago