ಅನ್ನದಾತರ ಅಂಗಳ

ಸ್ಕೂಟರ್‌ ಟ್ರಾಲಿ ಕೃಷಿ ಕೆಲಸ ಸಲೀಸು

ಜಿ.ಕೃಷ್ಣಪ್ರಸಾದ್

ಮೊನ್ನೆ ಪಾಂಡವಪುರ ಸಮೀಪದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದ ರೈತರ ಸಭೆಯೊಂದಕ್ಕೆ ಹೋಗಿದ್ದೆ. ಇದು ರೈತ ನಾಯಕ ಪುಟ್ಟಣ್ಣಯ್ಯನವರ ಹುಟ್ಟೂರು. ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ಪರ್ಯಾಯ ಕೃಷಿ ಮಾಡುತ್ತಿರುವ ಜೈವಿಕ ರೈತ ಕುಟುಂಬಗಳನ್ನು ಒಂದೆಡೆ ತರುವ ಪ್ರಯತ್ನದ ಭಾಗವಾಗಿ ಆಯೋಜನೆಗೊಂಡಿದ್ದ ಸಭೆ ಅದು.

ಸಭೆ ನಡೆದ ತೋಟದ ರಸ್ತೆಯಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ನನ್ನ ಗಮನ ಸೆಳೆಯಿತು. ಆ ಬೈಕ್‌ಗೆ ಟ್ರಾಲಿ ಯೊಂದನ್ನು ಜೋಡಿಸಿದ್ದರು; ಟ್ರಾಕ್ಟರ್‌ಗೆ ಟ್ರಾಲಿ ಜೋಡಿಸಿದಂತೆ. ಸೀಮೆ ಹುಲ್ಲುನ್ನು ಕೊಯ್ದು ತಂದು ಟ್ರಾಲಿಯಲ್ಲಿ ತುಂಬುತ್ತಿದ್ದರು.

ಅದು ಕ್ಯಾತನಹಳ್ಳಿ ರಾಮಚಂದ್ರರ ‘ಸ್ಕೂಟರ್ ಟ್ರಾಲಿ’. ಸಣ್ಣಪುಟ್ಟ ಸರಂಜಾಮು, ತೋಟದ ತೆಂಗಿನಕಾಯಿ, ದನಕರುಗಳಿಗೆ ಬೇಕಾದ ಹುಲ್ಲು, ಗೊಬ್ಬರದ ಚೀಲ ಮೊದಲಾದ ಅಗತ್ಯ ಕೃಷಿ ಸರಕುಗಳನ್ನು ಈ ಟ್ರಾಲಿಗೆ ತುಂಬಿ ಬೈಕ್ ಓಡಿಸಿದರೆ, ನಾಯಿಯ ಬಾಲದಂತೆ ಈ ಟ್ರಾಲಿ ಜೊತೆಗೆ ಬರುತ್ತದೆ.

ಕೂಲಿ ಕಾರ್ಮಿಕರು ಸಿಗಲ್ಲ: ಈಗಿನ ಮಕ್ಕಳು ಹೊರೆ ಹೊರಲ್ಲ. ಟ್ರಾಲಿಗೆ ಲಗೇಜ್ ಹಾಕಿದರೆ ಖುಷಿಯಾಗಿ ಬೈಕ್ ಓಡಿಸುತ್ತಾರೆ. ಎಷ್ಟೋ ಸಲ ತರಕಾರಿ, ಎಳನೀರು ತುಂಬಿ ಇದೇ ಟ್ರಾಲಿಯಲ್ಲಿ ಶ್ರೀರಂಗಪಟ್ಟಣಕ್ಕೆ ತಗೊಂಡು ಹೋಗಿದ್ದೇನೆ. ಭತ್ತ ಮಿಲ್ ಮಾಡಿಸೋಕೋ ಇದರಲ್ಲಿ ಹೋಗ್ತೇನೆ ಎಂದು ರಾಮಚಂದ್ರ ಖುಷಿ ಯಿಂದಲೇ ಹೇಳಿದರು. ಸ್ಕೂಟರ್ ಟ್ರಾಲಿ ಅವರ ಕೃಷಿ ಸಂಬಂಧ ಸರಕು ಸಾಗಾಣಿಕೆಯನ್ನು ಸುಲಭಗೊಳಿಸಿದೆ.

ಟ್ರಾಲಿಗೆ ಆಟೋ ಮಾದರಿಯಲ್ಲಿ ಮೂರು ಚಕ್ರಗಳಿರುವುದರಿಂದ ಪಲ್ಟಿ ಹೊಡೆಯುವ ಸಂಭವ ಇಲ್ಲವೇ ಇಲ್ಲ. ತಿರುವುಗಳಲ್ಲಿ ಸುಲಭವಾಗಿ ತಿರುಗುತ್ತದೆ. ಬೈಕ್ ಓಡಾಡುವ ರಸ್ತೆಯಲ್ಲಿ ಈ ಟ್ರಾಲಿ ಸುಲಭವಾಗಿ ಬರುತ್ತದೆ. ೫೦೦ ಕೆಜಿಯವರೆಗೆ ಸರಕು ತುಂಬಬಹುದು. ಟ್ರಾಲಿಯನ್ನು ಬೈಕ್‌ಗೆ ಜೋಡಿಸಲು ಲೋಹದ ಸರಳು ಇರುತ್ತದೆ.

ಬೇಡ ಎನಿಸಿದಾಗ ಇದನ್ನು ಬಿಚ್ಚಿಡಬಹುದು. ಎರಡು- ಮೂರು ಮನೆಯವರು ಒಂದೇ ಟ್ರಾಲಿ ಬಳಸುತ್ತಾರೆ. ಕ್ಯಾತನಹಳ್ಳಿ ಅಷ್ಟೇ ಅಲ್ಲ ಸುತ್ತಮುತ್ತಲ ಊರುಗಳಲ್ಲೂ ಸ್ಕೂಟರ್ ಟ್ರಾಲಿ ಜನಪ್ರಿಯ. ಇದನ್ನು ಯಾರು ಅಭಿವೃದ್ಧಿಪಡಿಸಿದರು ಎಂಬುದು ಗೊತ್ತಿಲ್ಲವಾದರೂ, ಕಳೆದ ಐದಾರು ವರ್ಷಗಳಿಂದ ಇದರ ಬಳಕೆ ಇದೆ. ಸ್ಥಳೀಯವಾಗಿ ಸಿದ್ಧವಾಗುವ ಸ್ಕೂಟರ್ ಟ್ರಾಲಿ ಮಾಡಿಸಲು ೧೫ ಸಾವಿರ ರೂ. ಖರ್ಚಾಗುತ್ತದೆ.

ಯಾವುದೇ ನಿರ್ವಹಣಾ ವೆಚ್ಚ ಕೇಳದು. ‘ಮೊದಲೆಲ್ಲಾ ಹೊಲಕ್ಕೆ ಬಂಡಿ ಕಟ್ಟಿಕೊಂಡು ಹೋಗ್ತಿದ್ದರು. ಈಗ ದನಗಳೇ ಇಲ್ಲ. ಈಗಿನ ಪೀಳಿಗೆ ಹುಡುಗರಿಗೆ ಈ ಟ್ರಾಲಿ ಇಷ್ಟವಾಗಿದೆ’ ಎನ್ನುತ್ತಾರೆ ರೈತ ಬಸವರಾಜು. ಬದಲಾದ ಕಾಲಕ್ಕೆ ಅನುಗುಣವಾಗಿ ಎತ್ತಿನ ಗಾಡಿ ಬದಲು ಸ್ಕೂಟರ್ ಟ್ರಾಲಿ ಬಂದಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ರಾಮಚಂದ್ರ-ಮೊ.ಸಂ. ೭೩೫೩೨ ೮೫೯೪೩ ಸಂಪರ್ಕಿಸಬಹುದು.

ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

7 hours ago

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ  ಸರಗೂರು: ಪಟ್ಟಣದ…

8 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…

8 hours ago

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…

8 hours ago

ಓದುಗರ ಪತ್ರ: ಗವಿಸಿದ್ಧೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ: ಸಿಎಂ ನಿರ್ಧಾರ ಶ್ಲಾಘನೀಯ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…

8 hours ago

ಇವರ ಪಾಪಗಳನ್ನೆಲ್ಲ ಸಹಿಸಿಕೊ ಸಹ್ಯಾದ್ರಿ!

ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…

8 hours ago