• ರಮೇಶ್ ಪಿ.ರಂಗಸಮುದ್ರ

ನಮ್ಮ ದೇಶದಲ್ಲಿ ಬಾಳೆ ಬೇಸಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಲ್ಲ ಶುಭಕಾರ್ಯಗಳಿಗೂ,
ಸರ್ವರಿಗೂ ಪ್ರಿಯವಾದ ಹಣ್ಣು ಬಾಳೆ. ಈ ಹಣ್ಣು ಕೊಬ್ಬು ರಹಿತವಾದದ್ದರಿಂದ, ಪೊಟ್ಯಾಶಿಯಂ ನಿಂದ ಕೂಡಿರುವುದರಿಂದ ಹೃದಯಕ್ಕೆ ಒಳ್ಳೆಯದು. ಪ್ರಪಂಚದಲ್ಲಿ ಭಾರತ ಬಾಳೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಬಾಳೆಗೆ ಬಳಸುವ ವಿಪ ರೀತ ರಾಸಾಯನಿಕ ಮತ್ತು ವಿಷಕಾರಿ ಕಳೆ ಕೀಟ ನಾಶಕಗಳಿಂದಾಗಿ ವಿದೇಶಿ ಮಾರುಕಟ್ಟೆಯಲ್ಲಿ ದೇಶದ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇಲ್ಲ. ವಿಶ್ವದ ಮಾರುಕಟ್ಟೆಯಲ್ಲಿ ಬಾಳೆಗೂ ಬೇಡಿಕೆ ಹೆಚ್ಚಾಗಬೇಕಾ ದರೆ ರೈತರು ಸಾವಯವ ಬಾಳೆ ಕೃಷಿಗೆ ತೆರೆದು ಕೊಳ್ಳಬೇಕು.

ಅಂಗಾಂಶ ಕೃಷಿ ಬಾಳೆ: ಹಿಂದೆಲ್ಲಾ ತಾಯಿ ಬುಡದ ಸುತ್ತ ಬೆಳೆದ ಕಂದುಗಳನ್ನು ಕಿತ್ತು ತಂದು ನಾಟಿ ಮಾಡುತ್ತಿದ್ದರು. ಇದರಿಂದ ತಾಯಿ ಬುಡಕ್ಕೆ ರೋಗ ಬಾಧೆಗಳು ಇಡೀ ತೋಟಕೆ ವಾರದ ಹರಡುತ್ತಿತ್ತು. ಇದರ ನಿವಾರಣೆಗೆ ಕೃಷಿ ಅಂಕಣ ಹಾಗೂ ಗಿಡಗಳ ಸದೃಢತೆಗೆ ಹೆಚ್ಚಿನ ರಾಸಾಯನಿಕ ಗೊಬ್ಬರ
ಗಳು ಮತ್ತು ಕೀಟನಾಶಕಗಳನ್ನು ಬಳಸುತ್ತಿದ್ದರು. ಇದರಿಂದ ಉತ್ಪಾದನಾ ವೆಚ್ಚವು ಅಧಿಕವಾಗುತ್ತಿತ್ತು. ಈಗ ಬಾಳೆ ಬೆಳೆಯಲು ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಬಾಳೆ ಸಸಿಗಳು ಲಭ್ಯವಿರುವುದ ರಿಂದ ಸಾವಯವ ಪದ್ಧತಿಯಲ್ಲಿ ಬಾಳೆ ತೋಟ ಮಾಡಲು, ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆಯ ಸಹಾಯ ಧನ, ಮಾರ್ಗದರ್ಶನವೂ ಸಿಗುವುದರಿಂದ ಕೃಷಿಕರ ಚಿತ್ತ ಸಾವಯವ ಬಾಳೆ ಬೆಳೆಯುತ್ತಾ ಸಾಗಬೇಕು.

ಅಂಗಾಂಶ ಕೃಷಿ ಬಾಳೆ ಸಸಿಗಳ ಅನುಕೂಲಗಳು

1. ಒಂದೇ ವಯಸ್ಸಿನ ರೋಗನಿರೋಧಕ ಗಿಡಗಳನ್ನು ನಾಟಿ ಮಾಡಬಹುದು.
2.ಎಲ್ಲ ಗಿಡಗಳಲ್ಲೂ ಬಾಳೆ ಒಟ್ಟಿಗೆ ಕಟಾವಿಗೆ ಬರುತ್ತದೆ.
3. ಬೇಡಿಕೆಗೆ ಅನುಗುಣವಾಗಿ ಬೆಳೆಯಬಹುದು.
4. ಹನಿ ನೀರಾವರಿ ಪದ್ಧತಿಯಲ್ಲಿ ಬೇಸಾಯ ಸುಲಭ. 5. ಅಧಿಕ ಇಳುವರಿ, ಲಾಭ ಪಡೆಯಬಹುದು. 6. ತೋಟಗಾರಿಕಾ ಇಲಾಖೆಯಿಂದ ಸಹಾಯ, ಮಾರ್ಗದರ್ಶನ ಪಡೆಯಬಹುದು.

ಹೊಸ ಉದ್ಯಮಗಳ ಅವಕಾಶ ಸೃಷ್ಟಿಸುವಲ್ಲಿ ಬಾಳೆ
ಕರ್ನಾಟಕ ಸರ್ಕಾರದ ಜಿಲ್ಲಾ ಪ್ರಾತಿನಿಧಿಕ ಬೆಳೆಗಳನ್ನು ಗುರುತಿಸಿದ್ದು, ಅದರಲ್ಲಿ ಬಾಳೆ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸುತ್ತದೆ. ಆದರಿಂದ ಬಾಳೆ ಬೆಳೆಗಾರರನ್ನು ಉದ್ಯಮಿಗಳನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.

1 ಬಾಳೆಯ ಮೋತೆ, ಹೂ, ದಿಂಡು, ದಿಂಡಿನೊಳಗಿನ ನೀರು ಕಿಡ್ನಿ ರಕ್ಷಕವಾಗಿದ್ದು, ಒಂದು ಲೀಟರ್‌ಗೆ 100 ರೂ.ಗಳಿಂದ 150 ರೂ.ಗಳವರೆಗೂ ಬೆಲೆ ಇದೆ. ಒಂದು ಬಾಳೆ ದಿಂಡಿನೊಳಗೆ 3-4 ಲೀ. ನೀರು ಸಿಗಲಿದೆ

2 ಬಾಳೆ ನಾರಿನಿಂದ ವಿವಿಧ ಚೀಲಗಳನ್ನು ತಯಾರಿಸಬಹುದು.

3 ಹಿರೇ ಗೊಬ್ಬರವನ್ನು ತಯಾರಿಸಲು ಸೂಕ್ತ. ಒಣ ಬಾಳೆ ಎಲೆಗಳನ್ನು ಹೊದಿಕೆಯಾಗಿ ತೋಟಕ್ಕೆ ಮುಚ್ಚಿದರೆ  ಕ್ರಮೇಣ ಕರಗಿ ನೈಸರ್ಗಿಕ ಪೊಟ್ಯಾಶ್ ತಯಾರಾಗುತ್ತದೆ.
4 ಬಾಳೆ ಎಲೆ ಮಾರಾಟ ಮಾಡಿ ಲಾಭ ಪಡೆಯಬಹುದು.
5 ಬಾಳೆಕಾಯಿ ಪೌಡರ್ ಅನ್ನು ಮೈದಾಗೆ ಪರ್ಯಾಯವಾಗಿ ಬಳಸಬಹುದು.
6 ಒಣಗಿಸಿದ ಬಾಳೆಹಣ್ಣಿನಿಂದ ತಿಂಡಿಗಳನ್ನು ತಯಾರಿಸಬಹುದು.
7 ಬಾಳೆ ಅತಿವೃಷ್ಟಿ-ಅನಾವೃಷ್ಠಿಗಳಲ್ಲಿ ಆಹಾರದ ಕೊರತೆ ನೀಗಿಸುವ ಹಣ್ಣಾಗಿದೆ.

ಬಾಳೆಯ ತಳಿಗಳು: ರೂಬಸ್ಟ್, ಕ್ಯಾವೆಂಡಿಸ್, ಗ್ರಾಂಡ್ ನೇನ್, ಮಧುಕರ, ರಸಬಾಳೆ, ಏಲಕ್ಕಿ ಬಾಳೆ, ಜೀರಿಗೆ ಬಾಳೆ, ಪುಟ್ಟ ಬಾಳೆ, ಪೂಜೆ ಬಾಳೆ, ಕರಿ ಬಾಳೆ, ಕಂದುಬಾಳೆ, ಬೂದುಬಾಳೆ, ಕೆಂಪು ಬಾಳೆ, ಜವರಿ ಬಾಳೆ

ಸಾವಯವ ಬೇಸಾಯ ಕ್ರಮಗಳು

1. ಒಂದು ಎಕರೆಗೆ 8-10 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಉಳುಮೆ ಮಾಡಿಕೊಳ್ಳಬೇಕು.

2. 1.5X1.5X1.5 ಅಡಿ ಆಳದ ಗುಂಡಿಗಳನ್ನು ಮಾಡಿಕೊಂಡು, ಪ್ರತಿ ಗುಂಡಿಯೊಳಗೆ 1/2 ಕೆ.ಜಿ. ಬೇವಿನ ಹಿಂಡಿ, 20 ಕೆಜಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಮರಳು ಮತ್ತು ಕೆಂಪು ಮಣ್ಣಿನೊಂದಿಗೆ 1:1:1 ಪ್ರಮಾಣದಲ್ಲಿ ಮಿಶ್ರಣ ಮಾಡಿ ಗುಂಡಿಗೆ ತುಂಬಿ, 6X6 ಅಡಿ ಅಂತರದಲ್ಲಿ ಪ್ರತಿ ಎಕರೆಗೆ 1,200 ಗಿಡಗಳಂತೆ ನೆಡಬೇಕು.

3. ಅಂತರ ಬೆಳೆಯಾಗಿ ನೆಲಮಟ್ಟದಲ್ಲಿಯೇ ಬೆಳೆಯುವ ಬೆಳೆಗಳನ್ನು ಬೆಳೆದುಕೊಳ್ಳಬಹುದು.

ಸಾವಯವ ಪದ್ಧತಿಯ ಅಂಶಗಳು

1. ರಾಸಾಯನಿಕಗಳನ್ನು ಬಳಸಬಾರದು

2. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಹಿಂಡಿಗಳು, ಎರೆಹುಳು ಗೊಬ್ಬರ ಹಾಗೂ ಜೀವಾಮೃತ ರಸಸಾರ ಪಂಚಗವ್ಯ ಹಾಗೂ ಸಾವಯವ ಕಷಾಯಗಳು ಬಳಸಬೇಕು.

3. ಗೊಬ್ಬರಕ್ಕಾಗಿ ಹಸು, ಕುರಿ, ಮೇಕೆ, ಕೋಳಿ, ಕತ್ತೆ ಇತ್ಯಾದಿ ಪ್ರಾಣಿಗಳನ್ನು ಸಾಕಬೇಕು.

4. ಶಿಫಾರಸು ಮಾಡಿದ ಅಂತರಕ್ಕಿಂತ ಹೆಚ್ಚು ಹೊತ್ತಾಗಿ ಗಿಡಗಳನ್ನು ನೆಡಬಾರದು.

5. ಸಾರಜನಕ, ರಂಜಕ, ಪೋಷಕಾಂಶಗಳನ್ನು ಪೂರೈಸಲು ಅಜಟೋ ಬ್ಯಾಕ್ಟರ್ 50 ಗ್ರಾಂ ಪಿಎಸ್‌ಬಿ 50 ಗ್ರಾಂ ಮತ್ತು ವ್ಯಾನ್ 100 ಗ್ರಾಂ ಜೈವಿಕ ಗೊಬ್ಬರವನ್ನು ಪ್ರತಿ ಗಿಡಕ್ಕೆ ಪ್ರತಿವರ್ಷ
ಕೊಡಬೇಕು.

6. ಕಳೆಗಳನ್ನು ನಿಯಂತ್ರಿಸಲು ತೋಟಕ್ಕೆ ಹೊದಿಕೆ ಯಾಗಿ ಒಣ ಬಾಳೆ ಎಲೆಗಳನ್ನು ಮುಚ್ಚಬೇಕು ಮತ್ತು ಕೈಗಳಿಂದ ಕಳೆ ಕೀಳಿಸಬೇಕು.

7. ತೋಟದ ಮಧ್ಯೆ ಮಧ್ಯೆ ಚೆಂಡು ಹೂ ಗಿಡ ಗಳನ್ನು ಬೆಳೆಸಬೇಕು ಹಾಗೂ ಎರಡರಿಂದ ಮೂರು ಬಾರಿ ಬೇವಿನ ಎಣ್ಣೆ ಸಿಂಪಡಣೆ ಮಾಡಬೇಕು.

(ಟಿಶೂ ಕಲ್ಲ‌ ಬಾಳೆ ಸಸಿಗಳನ್ನು ತೋಟಗಾ ರಿಕಾ ಇಲಾಖೆ ಅಭಿವೃದ್ಧಿಪಡಿಸಿರುವ ಸಮಗ್ರ ಜೈವಿಕ ಕೇಂದ್ರ ರಂಗಸಮುದ್ರ, ಹುಳಿಮಾವು, ಬೆಂಗಳೂರುಹಾಗೂ ತೋಟಗಾರಿಕಾ ಇಲಾಖೆಯ ಶಿಫಾರಸ್ಸು ಮಾಡುವ ಕೇಂದ್ರಗಳಿಂದಲೇ ಆಯ್ಕೆ ಮಾಡಿಕೊಳ್ಳಬೇಕು.)

andolana

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

10 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

10 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

10 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

10 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

10 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

10 hours ago