ಅನ್ನದಾತರ ಅಂಗಳ

ಗೃಹಲಕ್ಷ್ಮಿಯ ಕಾಸಿನಿಂದ ಬಂಗಾರದಂತಹ ಬೆಳೆ

ಸುತ್ತೂರು ನಂಜುಂಡ ನಾಯಕ

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ  ಯೋಜನೆಯಡಿ ನೀಡಲಾಗುವ ಮಾಸಿಕ ೨,೦೦೦ ರೂ.ಗಳನ್ನು ಕೃಷಿಗೆ ವಿನಿಯೋಗಿಸಿ ಬಂಗಾರದಂತಹ ಬೆಳೆ ಬೆಳೆದು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ ನಂಜನಗೂಡಿನ ಮೂಡಳ್ಳಿ ಗ್ರಾಮದ ರೈತ ದಂಪತಿ ಬಸವಣ್ಣ ಮತ್ತು ಚಂದ್ರಮ್ಮ.

ನಂಜನಗೂಡು ತಾಲ್ಲೂಕಿನ ಮೂಡಳ್ಳಿ ಗ್ರಾಮದ ಬಸವಣ್ಣ ಮತ್ತು ಚಂದ್ರಮ್ಮ ದಂಪತಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷಿ  ಯೋಜನೆಯಡಿ ನೀಡುವ ಮಾಸಿಕ ೨,೦೦೦ ರೂ.ಗಳನ್ನು ಕೂಡಿಟ್ಟುಕೊಂಡ ಅದನ್ನು ಕೃಷಿಗೆ ಬಳಸಿಕೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.

ಬಸವಣ್ಣ ಮತ್ತು ಚಂದ್ರಮ್ಮ ದಂಪತಿ ತಮ್ಮ ಒಂದು ಎಕರೆ ಕೃಷಿ ಭೂಮಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಹಾಗೂ ಹನಿ ನೀರಾವರಿ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಯಾವುದೇ ರಾಸಾಯನಿಕವನ್ನು ಬಳಸದೆ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಮೂಲಕ ಕೃಷಿ ಮಾಡುವ ಇವರು, ಗುಣಮಟ್ಟದ ಬೆಳೆ ಬೆಳೆದು ಉತ್ತಮ ಲಾಭ ಗಳಿಸುವ ಮೂಲಕ ಆರ್ಥಿಕ ಸಬಲತೆ ಸಾಧಿಸಿದ್ದಾರೆ.

ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚಾಗಿ ಬಳಸಿಕೊಂಡು ಬಾಳೆ, ಪಪ್ಪಾಯ, ತೊಗರಿ, ರಾಗಿ ಮುಂತಾದ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುವತ್ತ ಹೆಜ್ಜೆ ಇಟ್ಟಿದ್ದು, ಮಾದರಿ ರೈತ ದಂಪತಿ ಎನಿಸಿಕೊಂಡಿದ್ದಾರೆ.

ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಬದುಕು ಉತ್ತಮಗೊಳ್ಳುತ್ತದೆ ಎಂಬುದಕ್ಕೆ ಈ ದಂಪತಿಯೇ ಸಾಕ್ಷಿಯಾಗಿದ್ದಾರೆ. ತಮ್ಮ ಪತ್ನಿಗೆ ಬರುವ ೨,೦೦೦ ರೂ.ಗಳನ್ನು ಕೃಷಿಗೆ ಬಂಡವಾಳವಾಗಿ ಬಳಸಿಕೊಂಡ ಬಸವಣ್ಣ ಈಗ ಕೃಷಿಯಲ್ಲಿ ಲಾಭ ಗಳಿಸುವ ಮೂಲಕ ಆರ್ಥಿಕ ಸಬಲತೆ ಸಾಧಿಸುವೆಡೆ ಮುಂದಡಿಯಿಟ್ಟು ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ೫೦,೦೦೦ ರೂ.ಗಳನ್ನು ಖರ್ಚು ಮಾಡಿ ಕೃಷಿ ಕಾಯಕ ಆರಂಭಿಸಿದೆ. ಸಂಪೂರ್ಣ ಸಾವಯವ ಕೃಷಿ ಪದ್ಧತಿಯಾಗಿ ರುವುದರಿಂದ ಬೆಳೆ ಕೈಸೇರುವವರೆಗೆ ೬ ಲಕ್ಷ ರೂ. ಗಳ ಆದಾಯ ಬರುತ್ತದೆ ಎಂದು ನಂಬಿದ್ದೇವೆ.

ಕಾಂಗ್ರೆಸ್ ಸರ್ಕಾರದ ಈ ಯೋಜನೆಯು ರೈತಾಪಿಗಳಾದ ನಮ್ಮ ಬದುಕನ್ನು ರೂಪಿಸಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗಿದೆ. ಎನ್ನುತ್ತಾರೆ ಈ ರೈತ ದಂಪತಿ. ಸರ್ಕಾರ ಇವರನ್ನು ಗುರುತಿಸಿ ಅಭಿನಂದಿಸಿದರೆ ಯೋಜನೆಯ ಫಲಾನುಭವಿಗಳಿಗೆ ಮತ್ತಷ್ಟು ಉತ್ಸಾಹ ಮೂಡುವುದಂತೂ ಸತ್ಯ. ಇವರ ಸಂಪರ್ಕ ಸಂಖ್ಯೆ ೯೫೯೧೦-೧೮೫೪೬

ನಮ್ಮ ಒಂದು ಎಕರೆ ಹೊಲದಲ್ಲಿ ಬಾಳೆ, ತೊಗರಿ, ಪಪ್ಪಾಯ ಬೆಳೆಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದೇವೆ. ಅವುಗಳನ್ನು ನಮ್ಮ ಜಮೀನಿನಲ್ಲಿಯೇ ಮಾರಾಟ ಮಾಡುತ್ತೇವೆ. ಸಾವಯವ ಪದ್ಧತಿಯಾದ್ದರಿಂದ ಬೆಳೆಗಳನ್ನು ನಮ್ಮ ಜಮೀನಿಗೇ ಬಂದು ಖರೀದಿ ಮಾಡುತ್ತಾರೆ. ಇದರಿಂದ ಉತ್ತಮ ಆದಾಯ ಗಳಿಸಲು ಸಾಧ್ಯವಾಗಿದ್ದು, ನಮ್ಮ ಬದುಕು ಸುಂದರವಾಗಲು ಗೃಹಲಕ್ಷಿ  ಯೋಜನೆಯೇ ಕಾರಣ. ಆ ಯೋಜನೆಯಿಂದ ಬಂದ ಹಣವೇ ಈಗ ಕೃಷಿಗೆ ಬಂಡವಾಳ ಆಗಿದೆ.

-ಬಸವಣ್ಣ, ರೈತ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

2 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

2 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

2 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

2 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

2 hours ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

2 hours ago