ಪೆನ್ನಿಸ್ ಅಥವಾ ಶಿಶ್ನದ ಮೂತ್ರ ದ್ವಾರದ ಸುತ್ತಲಿನ ಗುಂಡನೆಯ ನುಣುಪಾದ ಭಾಗವನ್ನು ಗ್ಲ್ಯಾನ್ಸ್ ಪೆನ್ನಿಸ್ ಎನ್ನುತ್ತೇವೆ. ಗ್ಲ್ಯಾನ್ಸ್ ಪೆನ್ನಿಸ್ ಅನ್ನು ಸುತ್ತುವರಿದಿರುವ ಶಿಶ್ನದ ಮುಂಭಾಗದ ಚರ್ಮವನ್ನು ಪ್ರೆಪ್ಯೂಸ್ ಅಥವಾ ಪೋರ್ ಸ್ಕಿನ್ ಅರ್ಥಾತ್ ಮುಂತೊಗಲು ಎನ್ನುತ್ತೇವೆ. ಪ್ರೆಪ್ಯೂಸ್ ಮೃದುವಾಗಿ ಚಲನಶೀಲವಾಗಿದ್ದು, ಗ್ಲ್ಯಾನ್ಸ್ ಪೆನ್ನಿಸ್‌ಗೆ ಭದ್ರತೆಯನ್ನೊದಗಿಸಿ ಯಾವಾಗಲೂ ಮುಚ್ಚಿರುತ್ತದೆ. ಸ್ನಾನ ಮಾಡುವಾಗ ಶಿಶ್ನದ ಮುಂಭಾಗದ ಚರ್ಮವನ್ನು ಮೇಲೆಳೆದು ಶುಭ್ರವಾದ ನೀರಿನಲ್ಲಿ ತೊಳೆದು ಒಳಭಾಗದ ನೈರ್ಮಲ್ಯವನ್ನು ಕಾಪಾಡಬೇಕು.
ಪ್ರೆಪ್ಯೂಸ್ ಅಥವಾ ಶಿಶ್ನದ ಮುಂತೊಗಲು ಕಿರಿದಾಗಿ ಮತ್ತು ಬಿಗಿಯಾಗಿ ಗ್ಲ್ಯಾನ್ಸ್ ಪೆನ್ನಿಸ್‌ಗೆ ಅಂಟಿಕೊಂಡಂತೆ ಇದ್ದು, ಮೂತ್ರ ದ್ವಾರದಿಂದ ಹಿಂದೆ ಸರಿಸಲು ಅಥವಾ ಎಳೆಯಲು ಸಾಧ್ಯವಾಗುವುದಿಲ್ಲ. ಶಿಶ್ನದ ಬಿಗಿಯಾದ ಮತ್ತು ಕಿರಿದಾದ ಮುಂತೊಗಲು ಅಥವಾ ಟೈಟ್ ಸ್ಕಿನ್ ಅನ್ನು ಪೈಮೋಸಿಸ್ ಎನ್ನುತ್ತೇವೆ.
ಮಕ್ಕಳಲ್ಲಿ ಅಲ್ಪ ಪ್ರಮಾಣದಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಪ್ರೆಪ್ಯೂಸ್ ಹಿಂದೆ ಸರಿದು ಗ್ಲ್ಯಾನ್ಸ್ ಪೂರ್ಣ ಕಾಣುತ್ತದೆ. ಆದರೆ ಹಲವರಲ್ಲಿ ಮಧ್ಯಮ ಅಥವಾ ತೀವ್ರತರದಲ್ಲಿ ಪೈಮೋಸಿಸ್ ಇದ್ದಾಗ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಬೇಕಾಗುತ್ತದೆ.
ಪೈಮೋಸಿಸ್ ಅಲ್ಪ ಪ್ರಮಾಣದಲ್ಲಿ ಇದ್ದರೆ ಮೂತ್ರ ದ್ವಾರ ಮತ್ತು ಸೊಲ್ವ ಗ್ಲ್ಯಾನ್ಸ್ ಕಾಣಿಸುತ್ತದೆ. ಪೂರ್ಣ ಪ್ರಮಾಣದ ಪೈಮೋಸಿಸ್ ಇರುವವರಲ್ಲಿ ಶಿಶ್ನದ ಮುಂಭಾಗ ಚರ್ಮದಿಂದ ಮುಚ್ಚಿಕೊಂಡಿರುತ್ತದೆ. ಮೂತ್ರ ದ್ವಾರದ ರಂಧ್ರ ಮಾತ್ರ ಕಾಣಿಸುತ್ತದೆ. ಚರ್ಮವನ್ನು ಹಿಂದೆ ಎಳೆಯಲು ಸಾಧ್ಯವಾಗುವುದಿಲ್ಲ. ಪೈಮೋಸಿಸ್ ಇರುವ ವ್ಯಕ್ತಿಗಳ ಮೂತ್ರ ದ್ವಾರದ ಸುತ್ತ ಇರುವ ಚರ್ಮವು ಉಂಗುರ ಅಥವಾ ರಬ್ಬರ್ ಬ್ಯಾಂಡ್‌ನಂತೆ ಕಾಣುತ್ತದೆ. ಮೂತ್ರ ವಿಸರ್ಜಿಸುವಾಗ ಮುಂಭಾಗ ಬೆಲೂನ್‌ನಂತೆ ಸಲ್ಪ ಊದಿಕೊಳ್ಳಬಹುದು. ಪ್ರಾಯದವರಲ್ಲಿ ಶಿಶ್ನ ನಿಮಿರಿದಾಗ ನೋವು ಕಾಣಿಸಿಕೊಳ್ಳಬಹುದು. ತೀವ್ರ ತರದ ಪೈಮೋಸಿಸ್ ಇದ್ದ ಹಲವರಲ್ಲಿ ಮೂತ್ರ ನಾಳದ ಪ್ಯಾರಪೈಮೋಸಿಸ್, ಬೆಲನೈಟಿಸ್ ಮುಂತದ ಸೋಂಕು ಬರಬಹುದು. ಶಿಶ್ನದ ಚರ್ಮದ ಒಳಭಾಗವನ್ನು ಎಳೆದು ತೊಳೆಯಲು ಸಾಧ್ಯವಾಗದೇ ಇರುವುದರಿಂದ ದುರ್ವಾಸನೆ ಬರಬಹುದು.
ದೊಡ್ಡವರಲ್ಲಿ ಸಕ್ಕರೆ ಕಾಯಿಲೆ, ಲೈಕೆಸ್‌ಸ್ಲೀರೋಸಿಸ್, ಇನ್ಫೆಕ್ಷನ್, ಗ್ಸಿರೋಸಿಸ್ ಬೆಲನೋಟಿಕ್ ಮುಂತಾದ ಕಾಯಿಲೆಗಳು ಇರುವವರಲ್ಲಿ ಪೈಮೋಸಿಸ್ ಕಾಣಿಸಿಕೊಳ್ಳಬಹುದು.
ಪೈಮೋಸಿಸ್‌ಗೆ ಕಾರಣವಾಗುವ ಅಂಶಗಳನ್ನು ನಿವಾರಿಸುವುದು, ಪೈಮೋಸಿಸ್ ಮುಂದುವರಿದು ತೊಂದರೆಯಾಗುತ್ತಿದ್ದರೆ ಪೈಮೋಸಿಸ್ ಚರ್ಮದ ಒಳಭಾಗದ ಸ್ಕೃಪಿಂಗ್ ಅಥವಾ ಸರ್‌ಕಮ್‌ಸಿಷನ್ (ಮುಂಜಿ) ಮಾಡಿಸುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…