Andolana originals

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಕೆಎಸ್‌ಆರ್‌ಟಿಸಿ ಬಸ್‌ಗಳು ಸೂಕ್ತ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ಬಸ್‌ಗಳಂತೂ ಸಂಚರಿಸುವಾಗ ಚಕ್ರವೇ ಕಳಚಿಹೋದರೆ, ಕೆಲವು ಬಸ್‌ಗಳಲ್ಲಿ ಸ್ಟೇರಿಂಗ್, ಅಕ್ಸಲ್ ತುಂಡರಿಸಿವೆ. ಕೆಲವು ಬಸ್‌ಗಳು ಲೈಟ್ ಇಲ್ಲದೆಯೇ ಸಂಚರಿಸುತ್ತಿವೆ. ಮತ್ತೆ ಕೆಲವು ಬಸ್‌ಗಳು ಸೆಲ್ಛ್ ಸ್ಟಾರ್ಟ್ ಆಗದೆ ತಳ್ಳುವಂತಾಗಿದೆ.

ಗುಂಡ್ಲುಪೇಟೆ ಪಟ್ಟಣದ ಪೆಟ್ರೋಲ್ ಬಂಕ್ ಒಳಗೆ ಬಸ್‌ನ ಚಕ್ರ ಕಳಚಿ ನುಗ್ಗಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಶಿವಪುರ ಬಳಿ ಬಸ್ ಕೆಟ್ಟು ನಿಂತು ಬಾಚಹಳ್ಳಿ ಮಾರ್ಗದ ಜನರು ಪರದಾಡಿದರು. ಮೈಸೂರು, ಚಾ.ನಗರ ಮಾರ್ಗಗಳಲ್ಲಿ ಸಂಚರಿಸುವ ಸಾಕಷ್ಟು ಬಸ್‌ಗಳು ಸಂಚರಿಸುವಾಗಲೇ ತಾಂತ್ರಿಕ ಸಮಸ್ಯೆಯಿಂದ ಕೆಟ್ಟುನಿಂತು ಪರದಾಡುವಂತಾಗಿದೆ. ಆದರೆ, ನಿಗಮದ ಅಧಿಕಾರಿಗಳು ಬಸ್‌ಗಳ ದೋಷಗಳನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ರಸ್ತೆಯಲ್ಲಿ ಸಣ್ಣಪುಟ್ಟ ಸಮಸ್ಯೆಯಾದರೆ ಪರಿಹರಿಸಬಹುದು. ಆದರೆ ಟೈರ್ ಬ್ಲಾಸ್ಟ್, ಸ್ಟೇರಿಂಗ್ ಕಟ್, ಲೈಟ್ ಸಮಸ್ಯೆ ಮತ್ತಿತರರ ತಾಂತ್ರಿಕ ಸಮಸ್ಯೆಯಿಂದ ಅಪಘಾತಗಳು ನಡೆದು ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂಬ ಪ್ರಶ್ನೆ ಪ್ರಯಾಣಿಕರನ್ನು ಕಾಡುತ್ತಿದೆ. ಈಗಂತೂ ಪ್ರಯಾಣದ ದರ ಏರಿಕೆಯಾಗಿದೆ. ಜೊತೆಗೆ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಶಕ್ತಿ ಯೋಜನೆಯಿಂದ ಬಸ್ಸುಗಳಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಸೀಟು ಸಿಗದೆ ನಿಂತುಕೊಂಡೇ ಹೋಗಬೇಕು ಎಂದು ಪ್ರಯಾಣಿಕರೊಬ್ಬರು ಬೇಸರ ಹೊರಹಾಕಿದರು.

” ಸಿಬ್ಬಂದಿಗಳ ಕೊರತೆ, ತಾಂತ್ರಿಕ ದೋಷಗಳಿಂದ ಒಂದಷ್ಟು ಸಮಸ್ಯೆಯಾಗುತ್ತಿದೆ. ನಮಗೆ ೫೦ ಮಂದಿ ಮೆಕಾನಿಕ್‌ಗಳು ಬೇಕಾಗಿದ್ದಾರೆ. ಆದರೆ ಗುತ್ತಿಗೆ ಆಧಾರದಲ್ಲಿ ೨೫ ಮಂದಿ ಇದ್ದಾರೆ. ಡಿಪೋದಲ್ಲಿ ೧೪೦ ಬಸ್‌ಗಳಿವೆ. ೨೮ ಬಸ್‌ಗಳು ಹೊಸದಾಗಿ ಬಂದಿವೆ. ೧೫ ವರ್ಷ ಆಗಿರುವ ಬಸ್‌ಗಳು ಬಳಕೆಗೆ ಅನುಪಯುಕ್ತವಾಗಿವೆ. ಚಾಲಕ, ನಿರ್ವಾಹಕರ ಕೊರತೆಯೂ ಇದೆ.”

ಕುಮಾರ್ ನಾಯಕ್, ಘಟಕ ವ್ಯವಸ್ಥಾಪಕರು

” ಸರ್ಕಾರ ಬಸ್‌ಗಳ ನಿರ್ವಹಣೆಗೆ ಹಣ ನೀಡುತ್ತಿಲ್ಲ, ಹೊಸ ಬಸ್‌ಗಳನ್ನು ಒದಗಿಸುತ್ತಿಲ್ಲ. ಬಸ್‌ಗಳ ಕೊರತೆ ನಡುವೆ, ಇರುವ ಬಸ್ ಗಳು ಕೆಟ್ಟು ನಿಲ್ಲುತ್ತಿವೆ. ಸಮಯಕ್ಕೆ ಬಸ್ ಬರದೆ ವಿದ್ಯಾರ್ಥಿಗಳು, ಉದ್ಯೋಗಿಗಳು ಪರದಾಡುತ್ತಿದ್ದಾರೆ.”

ಮಣಿಕಂಠ ನಾಯಕ, ಪ್ರಯಾಣಿಕ 

 

 

ಆಂದೋಲನ ಡೆಸ್ಕ್

Recent Posts

ಮೈಸೂರು ಸೇರಿ 8 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ | ನವೆಂಬರ್ 29, 30ರಂದು ರಾಜ್ಯಾದ್ಯಂತ ಒಣಹವೆ

ಬೆಂಗಳೂರು: ಮೈಸೂರು ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಯಿದೆ. ಎಲ್ಲೆಲ್ಲಿ ಮಳೆಯ ಮುನ್ಸೂಚನೆ ಇದೆ…

49 seconds ago

ನಿರಾಶ್ರಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಭಾರತಿ ಸಜ್ಜನ್ ರಾಜ್ಯದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ; ಮೈಸೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ೩೭೬ಕ್ಕೂ ಹೆಚ್ಚು ಜನರಿಗೆ ಆಶ್ರಯ ಭಿಕ್ಷಾಟನೆಗೆ…

10 mins ago

ಓದುಗರ ಪತ್ರ: ಹೇಳುವುದು ಒಂದು.. ಮಾಡುವುದು ಇನ್ನೊಂದು…

ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಮೈಸೂರು ನಗರದ…

19 mins ago

ಓದುಗರ ಪತ್ರ: ನ್ಯಾಯಾಂಗದ ಸದೃಢತೆಯ ಪುಷ್ಟೀಕರಣ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲೆಯ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ…

21 mins ago

ಓದುಗರ ಪತ್ರ: ಸುರಕ್ಷತೆ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳಲಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ…

23 mins ago

ಪ್ರಗತಿಯ ಮೆಟ್ಟಿಲೇರುತ್ತಿರುವ ಮಂಡ್ಯ ಕರ್ನಾಟಕ ಸಂಘ

ಹೊಳಲು ಶ್ರೀಧರ್,  ಪತ್ರಕರ್ತಕರು ಹಾಗೂ ನಿವೃತ್ತ ಅಧ್ಯಾಪಕರು, ಮಂಡ್ಯ ದತ್ತಿನಿಧಿಗಳ ಮೂಲಕ ೩೯ ಮಂದಿ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನ …

26 mins ago