Andolana originals

ಓದುಗರ ಪತ್ರ: ಹೇಳುವುದು ಒಂದು.. ಮಾಡುವುದು ಇನ್ನೊಂದು…

ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಮೈಸೂರು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ನಾಯಕರ ದೊಡ್ಡ ದೊಡ್ಡ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದನ್ನು ಗಮನಿಸಿದರೆ ಇದು ಸಂವಿಧಾನ ದಿನಾಚರಣೆಯೇ ಅಥವಾ ಫ್ಲೆಕ್ಸ್, ಬ್ಯಾನರ್ ಹಾಕಲು ನಡೆದ ಸಮಾರಂಭವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಸಮಾರಂಭ ನಡೆಯುವ ಮೈದಾನದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿಕೊಳ್ಳಲಿ. ಆದರೆ ದಸರಾ ವೇಳೆ ರಸ್ತೆ, ವೃತ್ತಗಳಲ್ಲಿ ದೀಪಾಲಂಕಾರ ಮಾಡುವಂತೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವ ಅಗತ್ಯವೇನು? ಈ ಹಿಂದೆ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ಕಾರ್ಯಕರ್ತರಾಗಲಿ ಅಥವಾ ನಾಯಕರಾಗಲಿ ಸಾರ್ವಜನಿಕ ರಸ್ತೆಗಳಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸಂವಿಧಾನ ದಿನಾಚರಣೆ ಹೆಸರಿನಲ್ಲಿ ಹಿಂದಿನ ದಿನವೇ ರಾಜಕಾರಣಿಗಳ ಬೃಹತ್ ಫ್ಲೆಕ್ಸ್ , ಬ್ಯಾನರ್‌ಗಳನ್ನೇ ಹೆಚ್ಚಾಗಿ ರಾಜಜಿಸುವಂತೆ ನಗರದಲ್ಲಿ ಮಾಡಿರುವುದಕ್ಕೆ ಕ್ರಮವಿಲ್ಲವೇ…? ಸಂಬಂಧಪಟ್ಟ ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತನ್ನು ಗೌರವಿಸಲು ಫ್ಲೆಕ್ಸ್, ಬ್ಯಾನರ್, ಅಳವಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

ಆಂದೋಲನ ಡೆಸ್ಕ್

Recent Posts

ನಿರಾಶ್ರಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಭಾರತಿ ಸಜ್ಜನ್ ರಾಜ್ಯದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ; ಮೈಸೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ೩೭೬ಕ್ಕೂ ಹೆಚ್ಚು ಜನರಿಗೆ ಆಶ್ರಯ ಭಿಕ್ಷಾಟನೆಗೆ…

3 mins ago

ಓದುಗರ ಪತ್ರ: ನ್ಯಾಯಾಂಗದ ಸದೃಢತೆಯ ಪುಷ್ಟೀಕರಣ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲೆಯ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ…

14 mins ago

ಓದುಗರ ಪತ್ರ: ಸುರಕ್ಷತೆ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳಲಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ…

17 mins ago

ಪ್ರಗತಿಯ ಮೆಟ್ಟಿಲೇರುತ್ತಿರುವ ಮಂಡ್ಯ ಕರ್ನಾಟಕ ಸಂಘ

ಹೊಳಲು ಶ್ರೀಧರ್,  ಪತ್ರಕರ್ತಕರು ಹಾಗೂ ನಿವೃತ್ತ ಅಧ್ಯಾಪಕರು, ಮಂಡ್ಯ ದತ್ತಿನಿಧಿಗಳ ಮೂಲಕ ೩೯ ಮಂದಿ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನ …

19 mins ago

ಗೋವಾದ ಉತ್ಸವವೂ ಗಂಧದ ಗುಡಿಯ ಮಿನಿ ಸಿನಿ ಹಬ್ಬಗಳೂ

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಸಾವಿರಕ್ಕೂ ಹೆಚ್ಚು ಚಿತ್ರಕಥೆಗಳಲ್ಲಿ ಅಂತಿಮ ಹಂತಕ್ಕೆ ೩೦ ಮಂದಿ ಆಯ್ಕೆ  ನವೆಂಬರ್…

25 mins ago