Andolana originals

ಓದುಗರ ಪತ್ರ: ಸುರಕ್ಷತೆ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳಲಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಸುರಕ್ಷತೆಯ ಕ್ರಮವೆನಿಸಿದರೂ ಇದರ ಹಿಂದೆ ಸಾವಿರಾರು ಬಡ ಯುವಕರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ ಅಡಗಿದೆ.

ರಾಜ್ಯದಲ್ಲಿರುವ ಸುಮಾರು ೬ ಲಕ್ಷ ಬೈಕ್ ಟ್ಯಾಕ್ಸಿಗಳು ಪ್ರತಿದಿನ ೫ ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಅಗ್ಗದ ಸೇವೆ ನೀಡುತ್ತಿವೆ. ಏಕಾಏಕಿ ಹಳದಿ ಬೋರ್ಡ್, ವಿಮೆ, ಎಫ್ಸಿ ಎಂದು ಕಠಿಣ ಷರತ್ತುಗಳನ್ನು ಹೇರಿದರೆ ಈ ವಾಹನಗಳ ಸಂಖ್ಯೆ ಸಾವಿರಗಳಿಗೆ ಕುಸಿಯಲಿದೆ.

ಇದು ಕೇವಲ ನಿರುದ್ಯೋಗ ಸೃಷ್ಟಿಸುವುದಷ್ಟೇ ಅಲ್ಲ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಆಟೋ ಮಾಫಿಯಾಗಳಿಗೆ ಪರೋಕ್ಷವಾಗಿ ನೆರವಾಗುವ ತಂತ್ರವಾಗಿದೆ. ಸರ್ಕಾರ ಅಗ್ರಿಗೇಟರ್‌ಗಳ ಮೇಲೆ ನಿಯಂತ್ರಣ ಹೇರಲಿ ಸವಾರರ ದಾಖಲೆಗಳನ್ನು ಡಿಜಿಟಲೀಕರಿಸಲಿ. ಆದರೆ ನಿಯಮಗಳ ಹೆಸರಿನಲ್ಲಿ ಬಡ ಸವಾರರ ಬದುಕನ್ನು ಬೀದಿಪಾಲು ಮಾಡುವುದು ಅಕ್ಷಮ್ಯ. ಸುರಕ್ಷತೆ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿವೇಚನೆಯನ್ನು ಸರ್ಕಾರ ತೋರಲಿ.

-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹೇಳುವುದು ಒಂದು.. ಮಾಡುವುದು ಇನ್ನೊಂದು…

ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಮೈಸೂರು ನಗರದ…

4 mins ago

ಓದುಗರ ಪತ್ರ: ನ್ಯಾಯಾಂಗದ ಸದೃಢತೆಯ ಪುಷ್ಟೀಕರಣ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲೆಯ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ…

6 mins ago

ಪ್ರಗತಿಯ ಮೆಟ್ಟಿಲೇರುತ್ತಿರುವ ಮಂಡ್ಯ ಕರ್ನಾಟಕ ಸಂಘ

ಹೊಳಲು ಶ್ರೀಧರ್,  ಪತ್ರಕರ್ತಕರು ಹಾಗೂ ನಿವೃತ್ತ ಅಧ್ಯಾಪಕರು, ಮಂಡ್ಯ ದತ್ತಿನಿಧಿಗಳ ಮೂಲಕ ೩೯ ಮಂದಿ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನ …

11 mins ago

ಗೋವಾದ ಉತ್ಸವವೂ ಗಂಧದ ಗುಡಿಯ ಮಿನಿ ಸಿನಿ ಹಬ್ಬಗಳೂ

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಸಾವಿರಕ್ಕೂ ಹೆಚ್ಚು ಚಿತ್ರಕಥೆಗಳಲ್ಲಿ ಅಂತಿಮ ಹಂತಕ್ಕೆ ೩೦ ಮಂದಿ ಆಯ್ಕೆ  ನವೆಂಬರ್…

17 mins ago

ಮಡಿಕೇರಿ ಓಂಕಾರೇಶ್ವರ ದೇವಾಲಯಕ್ಕೆ ಸುರೇಶ್‌ ರೈನಾ ಭೇಟಿ!

ಮಡಿಕೇರಿ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಅವರು ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ…

15 hours ago