Andolana originals

ನಿರಾಶ್ರಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಭಾರತಿ ಸಜ್ಜನ್

ರಾಜ್ಯದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ; ಮೈಸೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ೩೭೬ಕ್ಕೂ ಹೆಚ್ಚು ಜನರಿಗೆ ಆಶ್ರಯ

ಭಿಕ್ಷಾಟನೆಗೆ ಪ್ರಮುಖ ಕಾರಣಗಳು

* ಹೆತ್ತವರನ್ನು ಮಕ್ಕಳು ಗೌರವಯುತವಾಗಿ ನೋಡಿಕೊಳ್ಳದೇ ಇರುವುದು

* ಮನೆಯ ಆರ್ಥಿಕ ಪರಿಸ್ಥಿತಿಗಳು

* ಧೂಮಪಾನ, ಕುಡಿತದ ಚಟಕ್ಕೆ ಒಳಗಾದವರು

* ಅನಾಥವಾಗಿ ಬೆಳೆದು, ಕೆಲಸ ಮಾಡಲು ಶಕ್ತಿ ಇಲ್ಲದವರು

* ಅನ್ಯರಾಜ್ಯಗಳಿಂದ ಮನೆ ಬಿಟ್ಟು ಬಂದವರು

ಮೈಸೂರು: ಸ್ವಚ್ಛ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲಾ ಬಿರುದುಗಳನ್ನು ತೆಗೆದುಕೊಂಡಿರುವ ಮೈಸೂರಿನಲ್ಲಿ ಭಿಕ್ಷಾಟನೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಾನಸಿಕ ಅಸ್ವಸ್ಥರ ಸೇರ್ಪಡೆಯ ಸಂಖ್ಯೆ ಹೆಚ್ಚುತ್ತಾಸಾಗುದೆ.

ನಿರಾಶ್ರಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ೮೨೧ ನಿರಾಶ್ರಿತರನ್ನು ಹೊಂದಿದೆ. ಮೈಸೂರು ಕೇಂದ್ರವು ಎರಡನೇ ಸ್ಥಾನದಲ್ಲಿದೆ. ಮಾನಸಿಕ ಅಸ್ವಸ್ಥರನ್ನು ಗುಣಮುಖರನ್ನಾಗಿ ಮಾಡಬೇಕಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಸೇರಿದಂತೆ ಮೈಸೂರಿನ ಜ್ಯೋತಿ ನಗರದಲ್ಲಿ ನಿರ್ಮಾಣಗೊಂಡಿರುವ ನಿರಾಶ್ರಿತರ ಪರಿಹಾರ ಕೇಂದ್ರವು ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಮೈಸೂರಿನ ಕೇಂದ್ರದಲ್ಲಿ ೩೭೬ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದು, ಇದರಲ್ಲಿ ೩೪ ಮಂದಿ ಮಹಿಳೆಯರು, ಉಳಿದಂತೆ ಪುರುಷರು ಪ್ರತ್ಯೇಕವಾಗಿ ಆಶ್ರಯ ಪಡೆಯುತ್ತಿದ್ದಾರೆ.

ಇವರಲ್ಲಿ ೪೦ ವರ್ಷದಿಂದ ೮೦ ವರ್ಷದವರೆಗಿನವರೂ ಇದ್ದಾರೆ. ಕರ್ನಾಟಕದವರು ಮಾತ್ರವಲ್ಲದೇ, ತಮಿಳು ನಾಡು, ಕೇರಳ,ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದವರೂ ೧೭೪ ಮಂದಿ ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಕನಿಷ್ಠ ಒಂದು ವರ್ಷದಿಂದ ಗರಿಷ್ಟ ಮೂರು ವರ್ಷದವರೆಗೆ ಇಲ್ಲಿ ಆಶ್ರಯ ಪಡೆಯಬಹುದಾಗಿದೆ. ಊಟ, ವಸತಿ, ವೈದ್ಯಕೀಯ ಸೇವೆ, ಆಟೋಟಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳು ಇಲ್ಲಿ ಸಿಗಲಿವೆ.

ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ ಇತ್ಯಾದಿ ಪ್ರಸಿದ್ಧ ದೇವಸ್ಥಾನಗಳು, ಪ್ರಮುಖ ವ್ಯಾಪಾರ ಸ್ಥಳಗಳು, ಮಾಲ್‌ಗಳ ಮುಂದೆ ಸಾರ್ವಜನಿಕರಿಗೆ ತೊಂದರೆಕೊಡುತ್ತಾ, ಭಿಕ್ಷೆ ಬೇಡುವವರನ್ನು ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದ ಸಹಾಯವಾಣಿಗೆ ಬಂದಂತಹ ಕರೆಗಳ ಸಹಾಯದಿಂದಲೂ ಭಿಕ್ಷುಕರನ್ನು ಕೇಂದ್ರಕ್ಕೆ ಕಾನೂನಾತ್ಮಕವಾಗಿ ಕರೆತರಲಾಗುತ್ತದೆ.

೩೭೬ ನಿರಾಶ್ರಿತರ ಪೈಕಿ ೮೮ ಮಂದಿ ಸದೃಢರು, ೧೫೪ ಜನ ಮಾನಸಿಕ ಅಸ್ವಸ್ಥರು, ೧೦೯ ಮಂದಿ ವಯೋವೃದ್ಧರು, ೨೫ ಮಂದಿ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರಲ್ಲಿ ಶೇ.೬೦ರಷ್ಟು ಮಂದಿ ಮಾನಸಿಕ ಅಸ್ವಸ್ಥರಾಗಿರುತ್ತಾರೆ. ಅಂತಹವರಿಗೆ ಮಾನಸಿಕ ಕೌನ್ಸಿಲಿಂಗ್ ನೀಡಲಾಗುತ್ತದೆ ಎಂದು ಮೈಸೂರು ನಿರಾಶ್ರಿತರ ಪರಿಹಾರ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರಾಶ್ರಿತ ಕೇಂದ್ರಕ್ಕೆ ಕರೆತಂದ ನಂತರ ಅವರಿಗೆ ಮೊದಲು ಸ್ನಾನ, ತಲೆ ಕೂದಲು, ಗಡ್ಡವನ್ನು ತೆಗೆಸುವುದು, ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಇವರಲ್ಲಿ ಬಹುತೇಕರಿಗೆ ಚರ್ಮದ ಅಲರ್ಜಿ ಇರುವುದು ಕಂಡು ಬಂದಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ನಿರಾಶ್ರಿತರ ಆರೋಗ್ಯ ತಪಾಸಣೆಗಾಗಿ ಕೇಂದ್ರದಲ್ಲಿ ಓರ್ವ ವೈದ್ಯರು, ಮೂರು ಜನ ನರ್ಸ್‌ಗಳು ಇರುತ್ತಾರೆ. ಮಾನಸಿಕ ಅಸ್ವಸ್ಥರನ್ನು ಗುಣಮುಖರನ್ನಾಗಿಸಲು ಕೇಂದ್ರದ ಸಿಬ್ಬಂದಿ ನಿತ್ಯ ಹರಸಾಹಸಗಳನ್ನು ಪಡುತ್ತಿರುತ್ತಾರೆ ಎಂದು ಮಾಹಿತಿ ನೀಡಿದರು.

ತದನಂತರ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್, ಪೋಸ್ಟ್ ಆಫೀಸ್‌ನಲ್ಲಿ ಎಫ್ಡಿ ಖಾತೆಯನ್ನು ತೆರೆಯಲಾಗುತ್ತದೆ. ಮಾನಸಿಕವಾಗಿ ಸ್ಥಿರತೆ ಕಾಯ್ದುಕೊಂಡವರಿಗೆ ಅಗರಬತ್ತಿ ತಯಾರಿಕೆ, ಹೊಲಿಗೆ ತರಬೇತಿ, ಅಡುಗೆ ಸಹಾಯಕರ ತರಬೇತಿ, ಕೃಷಿ ಮಾಡುವುದು ಸೇರಿದಂತೆ ಇನ್ನಿತರೆ ತರಬೇತಿಗಳನ್ನು ನೀಡಲಾಗುತ್ತದೆ. ಗಂಟೆಗೆ ಇಂತಿಷ್ಟು ಎಂದು ಅವರ ಪೋಸ್ಟ್ ಆಫೀಸ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಅವರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕುವಾಗ ಅಥವಾ ಅವರ ಮನೆಯವರು ಬಂದು ಕರೆದುಕೊಂಡು ಹೋದ ನಂತರ ಆ ಹಣವನ್ನು ಅವರು ಪಡೆಯಬಹುದಾಗಿದೆ. ೩೭೬ ನಿರಾಶ್ರಿತರ ಪೈಕಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ೩೧ರವರೆಗೆ ೧೭೬ ಪುರುಷರು, ೬೮ ಮಹಿಳೆಯರು ಸೇರಿದಂತೆ ಒಟ್ಟು ೨೪೪ ಮಂದಿ ಅವರವರ ಮನೆಗಳಿಗೆ ವಾಪಸ್ಸಾಗಿದ್ದು, ಇನ್ನುಳಿದವರು ಮನೆಯವರಿಂದ ದೂರವೇ ಉಳಿದಿದ್ದಾರೆ.

” ಮೈಸೂರು, ಮಂಡ್ಯ, ಚಾ.ನಗರ, ಮಡಿಕೇರಿ ಸೇರಿದಂತೆ ದಿನ ಒಬ್ಬರು ಅಥವಾ ಇಬ್ಬರನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆತರಲಾಗುತ್ತದೆ. ಅವರಲ್ಲಿ ಕೆಲವರಿಗೆ ಶೌಚಕ್ಕೆ ಎಲ್ಲಿ ಹೋಗಬೇಕು ಎಂಬ ಸಣ್ಣ ಜ್ಞಾನವೂ ಇರುವುದಿಲ್ಲ. ಮಾನಸಿಕ ಅಸ್ವಸ್ಥರನ್ನು ಗುಣಮುಖರನ್ನಾಗಿಸುವುದು ಹರಸಾಹಸವಾಗಿರುತ್ತದೆ. ಮುಂದಿನ ದಿನಗಳಲ್ಲಿ ಚಾಮರಾಜ ನಗರದಲ್ಲಿಯೂ ಒಂದು ನಿರಾಶ್ರಿತರ ಪರಿಹಾರ ಕೇಂದ್ರ ಪ್ರಾರಂಭವಾಗಲಿದೆ.”

ಶ್ರೀನಿವಾಸ್, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಮೈಸೂರು

 

 

 

ಆಂದೋಲನ ಡೆಸ್ಕ್

Recent Posts

ಮೈಸೂರು ಸೇರಿ 8 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ | ನವೆಂಬರ್ 29, 30ರಂದು ರಾಜ್ಯಾದ್ಯಂತ ಒಣಹವೆ

ಬೆಂಗಳೂರು: ಮೈಸೂರು ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಯಿದೆ. ಎಲ್ಲೆಲ್ಲಿ ಮಳೆಯ ಮುನ್ಸೂಚನೆ ಇದೆ…

2 mins ago

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಕೆಎಸ್‌ಆರ್‌ಟಿಸಿ ಬಸ್‌ಗಳು ಸೂಕ್ತ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ಬಸ್‌ಗಳಂತೂ…

6 mins ago

ಓದುಗರ ಪತ್ರ: ಹೇಳುವುದು ಒಂದು.. ಮಾಡುವುದು ಇನ್ನೊಂದು…

ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಮೈಸೂರು ನಗರದ…

20 mins ago

ಓದುಗರ ಪತ್ರ: ನ್ಯಾಯಾಂಗದ ಸದೃಢತೆಯ ಪುಷ್ಟೀಕರಣ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲೆಯ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ…

23 mins ago

ಓದುಗರ ಪತ್ರ: ಸುರಕ್ಷತೆ ಮತ್ತು ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳಲಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಹಳದಿ ಬೋರ್ಡ್ ಮತ್ತು ಜಿಪಿಎಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ…

25 mins ago

ಪ್ರಗತಿಯ ಮೆಟ್ಟಿಲೇರುತ್ತಿರುವ ಮಂಡ್ಯ ಕರ್ನಾಟಕ ಸಂಘ

ಹೊಳಲು ಶ್ರೀಧರ್,  ಪತ್ರಕರ್ತಕರು ಹಾಗೂ ನಿವೃತ್ತ ಅಧ್ಯಾಪಕರು, ಮಂಡ್ಯ ದತ್ತಿನಿಧಿಗಳ ಮೂಲಕ ೩೯ ಮಂದಿ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನ …

27 mins ago