Andolana originals

ಮೈಸೂರು ಹಸಿರು ; ಆತಂಕದ ಮೊಹರು

  • ಚಿರಂಜೀವಿ ಸಿ. ಹುಲ್ಲಹಳ್ಳಿ

ಮೈಸೂರು: ಇತ್ತೀಚೆಗೆ ನಗರಪಾಲಿಕೆಯು ನಜರ್ ಬಾದ್‌ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಎದುರಿನ ರಸ್ತೆಯ ಅಗಲೀಕರಣಕ್ಕಾಗಿ 40 ಮರಗಳನ್ನು ಕತ್ತರಿಸಿ ಹಾಕಿದೆ. ಸಾಮಾನ್ಯವಾಗಿ 10, 20, 30. . . ಹೀಗೆ ಮರಗಳನ್ನು ಕಡಿಯಲಾಗುತ್ತದೆ. ಯಾವುದೇ ಕಾರಣಕ್ಕೂ 5೦ ಅಥವಾ ಅದಕ್ಕಿಂತ ಹೆಚ್ಚು ವೃಕ್ಷಗಳನ್ನು ಒಂದೇ ಬಾರಿಗೆ ಧರೆಗೆ ಉರುಳಿಸುವುದಿಲ್ಲ. ಇದರ ಹಿಂದೆ ಸಾರ್ವ ಜನಿಕರಿಂದ ಎದುರಿಸಬಹುದಾದ ಪ್ರತಿರೋಧವನ್ನು ತಡೆಯುವ ಹುನ್ನಾರ ಇದೆ ಎನ್ನಬಹುದು.

ಕೆಲ ವರ್ಷಗಳಿಂದಲೂ ಅಭಿವೃದ್ಧಿಯ ಹೆಸರಿನಲ್ಲಿ ನಗರದ ನಾನಾ ಕಡೆಗಳಲ್ಲಿ ಹಸಿರು ಮರಗಳನ್ನು ಕಡಿದು ಹಾಕಲಾಗಿದೆ. ಆದರೆ, ಎಲ್ಲಿಯೂ ಒಂದೇ ಬಾರಿಗೆ 50ಕ್ಕಿಂತ ಹೆಚ್ಚು ಮರಗಳನ್ನು ಕಡಿದಿಲ್ಲ. ಅದಕ್ಕೊಂದು ಮುಖ್ಯವಾದ ಕಾರಣ ಇದೆ. ಅದೆಂದರೆ ಒಂದೇ ಬಾರಿಗೆ 50 ಅಥವಾ ಅದಕ್ಕಿಂತ ಹೆಚ್ಚು ಮರಗಳನ್ನು ತೆರವುಗೊಳಿಸ ಬೇಕೆಂದರೆ, ಜನರ ಅಭಿಪ್ರಾಯ ಸಂಗ್ರಹಿಸುವುದು ಕಡ್ಡಾಯ ಎಂಬುದಾಗಿ ನ್ಯಾಯಾಲಯದ ಆದೇಶ ಇದೆ. ಹಾಗಾಗಿ ನಗರಪಾಲಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು 30-40 ಮರ ಗಳನ್ನು ಕಡಿಯುವ ಮೂಲಕ ಚಾಣಾಕ್ಷತನವನ್ನು ಪ್ರದರ್ಶಿ ಸುತ್ತಿದ್ದಾರೆ ಎಂಬುದು ಕೆಲ ಪರಿಸರವಾದಿಗಳ ಆಕ್ಷೇಪವಾಗಿದೆ.

ಕರ್ನಾಟಕ ಪೊಲೀಸ್ ಅಕಾಡೆಮಿಯ ಪಕ್ಕದಲ್ಲಿರುವ ರಸ್ತೆಯ ಎರಡು ಬದಿಗಳಲ್ಲಿದ್ದ 60 ವರ್ಷಕ್ಕೂ ಹೆಚ್ಚು ಹಳೆಯ ಸುಮಾರು 4೦ ಮರಗಳನ್ನು ರಾತ್ರೋರಾತ್ರಿ ಧರೆಗುರುಳಿಸಿರುವುದು ಪರಿಸರ ಪ್ರೇಮಿಗಳನ್ನು ಕೆರಳಿಸಿದೆ. ಇನ್ನೆಲ್ಲಿ, ಇನ್ಯಾವಾಗ ದಿಢೀರ್ ಮರಗಳ ಹನನವಾಗುತ್ತದೋ ಎಂಬ ಆತಂಕವೂ ಮನೆಮಾಡಿದೆ.

ರಸ್ತೆ ಅಗಲೀಕರಣ, ಸುಗಮ ಸಂಚಾರ, ಸಾರ್ವಜನಿಕ ಹಿತದೃಷ್ಟಿ ಸೇರಿದಂತೆ ಅಭಿವೃದ್ಧಿಯ ಹೆಸರಿನಲ್ಲಿ 50-60 ವರ್ಷಗಳ ಹಿಂದೆ ನೆಟ್ಟಿದ್ದ ಬೃಹತ್ ಮರಗಳನ್ನು ಕತ್ತರಿಸಲಾಗಿದೆ. ನಗರದಲ್ಲಿ ನೆರಳು ನೀಡುವ ಮರಗಳ ಪ್ರಮಾಣ ಕಡಿಮೆಯಾಗುತ್ತಿದೆ, ಉಸಿರಾಡುವ ಗಾಳಿ ಕಲುಷಿತಗೊಳ್ಳುತ್ತಿದೆ ಎಂಬ ಪರಿಸರವಾದಿಗಳ ಆತಂಕದ ನಡುವೆಯೇ ಮರಗಳ ಒಡಲಿಗೆ ಕೊಡಲಿ ಹಾಕಲಾಗಿದೆ.

ಇದಲ್ಲದೇ ವಾಣಿಜ್ಯ ಕಟ್ಟಡ, ಮನೆ ನಿರ್ಮಾಣ, -ಟ್ ಪಾತ್ ನಿರ್ಮಾಣದ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಕೆಲ ವರ್ಷಗಳ ಹಿಂದೆ ನಗರದ ಸರಸ್ವತಿಪುರಂ ಈಜುಕೊಳದ ಬಳಿ, ಜೆಎಸ್‌ಎಸ್ ಮಹಿಳಾ ಕಾಲೇಜು ರಸ್ತೆ, ವಿಜಯನಗರ ೧ನೇ ಹಂತ, ಕನಕದಾಸ ರಸ್ತೆ, ಹೊಸ ಜಿಲ್ಲಾಽಕಾರಿ ಕಚೇರಿ, ಕಾವಾ ಕಾಲೇಜು ರಸ್ತೆ, ಬೋಗಾದಿ ಜೋಡಿ ರಸ್ತೆ ನಿರ್ಮಾಣದ ವೇಳೆ ನೂರಾರು ಮರಗಳನ್ನು ಬುಡ ಸಮೇತ ಕತ್ತರಿಸಿ ಹಾಕಿರುವುದನ್ನು ಪರಿಸರ ಪ್ರಿಯರ ಬೇಸರದಿಂದ ಹೇಳುತ್ತಾರೆ.

ಮಾಲ್ ಆಫ್ ಮೈಸೂರು ಮತ್ತು ರೇಸ್ ಕೋರ್ಸ್ ಮುಂಭಾಗದ ರಸ್ತೆಯಲ್ಲಿ ಮರಗಳನ್ನು ಕಡಿಯಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ರಸ್ತೆಯಲ್ಲಿ ಮರಗಳು ಉಳಿದುಕೊಂಡಿವೆ. ‌

ಮಾಹಿತಿ ನೀಡದೆ ಮರ ಕಡಿಯುತ್ತಾರೆ: 50ಕ್ಕೂ ಹೆಚ್ಚು ಮರಗಳನ್ನು ಕಡಿಯುವುದು ಅನಿವಾರ್ಯ ಎಂದಾದರೆ, ಆಗಲೂ ಸಾರ್ವಜನಿಕರನ್ನು ದೂರವಿಡಲು ಅಧಿಕಾರಿ ಗಳು ಒಂದು ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಮರ ಕಡಿಯುವುದನ್ನು ವಿರೋಧಿಸುವ ಸಾರ್ವಜನಿಕರಿಗಿಂತ ಹೆಚ್ಚಿನ ಸಂಖ್ಯೆಯಲಿ ಬಿಲ್ಡಿಂಗ್ ಮತ್ತು ನಿವೇಶನ ಡೆವಲಪರ್ಸ್‌ಗಳು, ರಸ್ತೆ ಅಗಲೀಕರಣದಿಂದ ಜಮೀನಿನ ಬೆಲೆ ಹೆಚ್ಚಾ ಗಲಿದೆ ಎಂಬುದಾಗಿ ರೈತರನ್ನು ಸಭೆಗೆ ಕರೆದುಕೊಂಡು ಬಂದುಬಿಡುತ್ತಾರೆ. ಅಧಿಕಾರಿಗಳ ಊಹೆಯಂತೆ ಹೆಚ್ಚಿನ ಸಂಖ್ಯೆಯಲ್ಲಿರುವವರು ‘ಮರ ಕಡಿಯಿರಿ’ ಎನ್ನುತ್ತಾರೆ. ಆಗ ಮರ ಕಡಿಯಲು ಬಹುಮತ ಸಿಕ್ಕಿತು ಎಂದು ದಾಖಲಿಸಿ, ಮರಗಳ ಹನನ ನಡೆಸುತ್ತಾರೆ ಎಂದು ಪರಿಸರವಾದಿ ಶೈಲಜೇಶ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಿರುವ ಸ್ಥಳದಲ್ಲಿ ನೂರಾರು ಮರಗಳಿದ್ದವು. ಅವುಗಳನ್ನು ಕಡಿದು ಬಿಸಾಕಿ ಕಟ್ಟಡ ನಿರ್ಮಿಸಿದರು. ಈ ಸಂದರ್ಭದಲ್ಲಿ ನಮ್ಮ ಹೋರಾಟ ಜೋರಾಗಿಯೇ ನಡೆಯಿತು. ಆದರೆ, ಹತ್ತಿಕ್ಕಿದರು. ಸಾರ್ವಜನಿಕರು ಧ್ವನಿಯಾಗಲಿಲ್ಲ ಎಂದು ಅವರು ಹತಾಶೆಯಿಂದ ನುಡಿದರು.

ಮರಗಳಿಗೆ ಸಂಚಕಾರ ಸಾರ್ವಜನಿಕ ವಲಯದಲ್ಲಿ ಆತಂಕ
ಮೈಸೂರಿನ ಬಹಳಷ್ಟು ಬಡಾವಣೆಯ ಎಲ್ಲ ರಸ್ತೆಗಳ ಇಕ್ಕೆಲಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಗುಲ್ ಮೊಹರ್, ಹೊಂಗೆ, ಟ್ಯಬೂಬಿಯ, ಬೇವು ಸೇರಿದಂತೆ ಹಲವಾರು ಜಾತಿಯ ಮರಗಳು ಗಾಳಿ, ನೆರಳನ್ನು ನೀಡುವ ಮೂಲಕ ಸಾಂಸ್ಕೃತಿಕ ನಗರಿಯನ್ನು ಹಸಿರಾಗಿಸುವ ಜೊತೆಗೆ ಅಂದವನ್ನು ಹೆಚ್ಚಿಸಿವೆ. ಆದರೆ, ಸದ್ಯದ ಪರಿಸ್ಥಿತಿ ಗಮನಿಸಿದರೆ, ಈ ಮರಗಳ ಜೀವಕ್ಕೂ ಯಾವಾಗ ಬೇಕಾದರೂ ಸಂಚಕಾರ ಬರಬಹುದು ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.

ಮೈಸೂರು ನಗರದಲ್ಲಿ ಮುಂದೆ ಈ ರೀತಿಯ ಘಟನೆ ನಡೆದಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಗೂಗಲ್ ಮೀಟ್‌ನಲ್ಲಿ ಸಭೆ ನಡೆಸಲಾಗಿದೆ. ಏ. ೧೮ರಂದು ಮೊಂಬತ್ತಿ ಬೆಳಗಿ ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗು ವುದು. ಏ. ೨೪ರಂದು ನಡೆಯುವ ಹನ್ನೊಂದನೇ ದಿನದ ಕಾರ್ಯಕ್ರಮದ ವೇಳೆ ಸರ್ಕಾರಕ್ಕೆ ಹಕ್ಕೊತ್ತಾಯ ಗಳನ್ನು ಸಲ್ಲಿಸಲಾಗುವುದು. ಇದಕ್ಕಾಗಿ ಮೇಜರ್ ಒಂಬತ್ಕೆರೆ, ಡಾ. ರಾಮಕೃಷ್ಣಪ್ಪ, ಭಾಮಿ ವಿ. ಶೆಣೈ ಅವರಂತಹ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಪರಶುರಾಮೇಗೌಡ, ಪರಿಸರವಾದಿ.

ಮೈಸೂರು ಟ್ರೀ ಕೌಂಟ್ ಹೊಸ ಯೋಜನೆ
ಸಾಂಸ್ಕೃತಿಕ ನಗರಿಯ ತಂಪಾದ ವಾತಾವರಣಕ್ಕೆ ಕಾರಣವಾಗಿರುವ ಮರಗಳನ್ನು ಉಳಿಸಿಕೊಳ್ಳುವ ಹಿತದೃಷ್ಟಿಯಿಂದ ಟ್ರೀ ಕೌಂಟ್ ಎಂಬ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ ಪರಿಸರ ಪ್ರೇಮಿಗಳು ಯೋಜನೆ ರೂಪಿಸಿ ಮರಗಳನ್ನು ರಕ್ಷಿಸಿಕೊಂಡಿದ್ದಾರೆ. ಇದನ್ನು ಇಲ್ಲಿಯೂ ಜಾರಿಗೆ ತರಲು ರೂಪುರೇಷೆಗಳನ್ನು ಚರ್ಚಿಸಲಾಗುತ್ತಿದೆ. ಮಂಗಳೂರಿನವರ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಸರ ಸಂರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಪರಿಸರವಾದಿ ಶೈಲಜೇಶ್ ಮಾಹಿತಿ ನೀಡಿದರು.

ಮೈಸೂರಿನಲ್ಲಿ ೪೦ ಮರಗಳ ಹನನ ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಅರಮನೆಗಳ ನಗರಿಯಲ್ಲಿ ಮುಂದೆ ಹಸಿರು ಮರಗಳ ಹನನದಂತಹ ಕೃತ್ಯ ನಡೆಯದಂತೆ ಬಿಗಿಕ್ರಮ ವಹಿಸುವುದು ಅಗತ್ಯ ಎಂಬುದು ಪರಿಸರವಾದಿಗಳ ಮನವಿ.

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

14 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

14 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

15 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

15 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

20 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

20 hours ago