ಭಾರತೀಯ ರೈಲ್ವೆ ಇಲಾಖೆ ವಿವಿಧೆಡೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣದಿಂದಾಗಿ ಕೆಲ ರೈಲುಗಳ ಸಂಚಾರ ವಿಳಂಬವಾಗಲಿದೆ ಹಾಗೂ ಕೆಲ ರೈಲುಗಳು ಭಾಗಶಃ ರದ್ದಾದರೆ, ಇನ್ನೂ ಕೆಲ ರೈಲುಗಳು ಸಂಪೂರ್ಣವಾಗಿ ರದ್ದಾಗಲಿವೆ. ಇನ್ನು ಮೈಸೂರು ರೈಲ್ವೆ ವ್ಯಾಪ್ತಿಯ ಮಂದಗೆರೆ ನಿಲ್ದಾಣದಲ್ಲಿ ಸಿಗ್ನಲಿಂಗ್ ಕಾಮಗಾರಿ ನಡೆಯುವುದರಿಂದ ಜನವರಿ 20ರಂದು ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಇರಲಿದೆ. ಈ ಕುರಿತಾದ ಮಾಹಿತಿಯನ್ನು ರೈಲ್ವೆ ಇಲಾಖೆ ಹಂಚಿಕೊಂಡಿದ್ದು, ಕೆಳಕಂಡಂತಿದೆ..
* ರೈಲು ಸಂಖ್ಯೆ 16207 ಯಶವಂತಪುರ – ಮೈಸೂರು ಎಕ್ಸ್‌ಪ್ರೆಸ್ ಜನವರಿ 20ರಂದು ಹಾಸನ ಹಾಗೂ ಮೈಸೂರು ನಡುವೆ ಭಾಗಶಃ ರದ್ದಾಗಲಿದೆ.
* ರೈಲು ಸಂಖ್ಯೆ 06267 ಅರಸಿಕೆರೆ – ಮೈಸೂರು ವಿಶೇಷ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ಜನವರಿ 20ರಂದು 90 ನಿಮಿಷ ತಡವಾಗಿ ಅರಸಿಕೆರೆ ನಿಲ್ದಾಣದಿಂದ ಹೊರಡಲಿದೆ.
* ರೈಲು ಸಂಖ್ಯೆ 06269 ಮೈಸೂರು – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 20ರಂದು ಮೈಸೂರು ನಿಲ್ದಾಣದಿಂದ 90 ನಿಮಿಷ ತಡವಾಗಿ ಹೊರಡಲಿದೆ.
* ರೈಲು ಸಂಖ್ಯೆ 06214 ಮೈಸೂರು – ಅರಸಿಕೆರೆ ವಿಶೇಷ ಎಕ್ಸ್‌ಪ್ರೆಸ್ ಜನವರಿ 20ರಂದು ಸಂಚರಿಸುವ ವೇಳೆಯೇ ನಿಯಂತ್ರಿಸಲ್ಪಡುವುದರಿಂದ ಸಂಚಾರದಲ್ಲಿ 45 ನಿಮಿಷ ತಡವಾಗಲಿದೆ.
ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…
ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…
ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…
ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…
‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…