ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ ನಡೆದಿದೆ.
ಗುರುವಾರ ತಾಲೂಕಿನ ಉಸ್ಗೂರಿನ ಚಂದ್ರಕಾಂತ ವ್ಯವಹಾರದ ನಿಮ್ಮಿತ್ತ ನಗರದ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹಣವನ್ನು ಸ್ಕೂಟಿಯಲ್ಲಿಟ್ಟುಕೊಂಡು ತಾಲೂಕು ಆಡಳಿತ ಸೌಧದ ಸಮೀಪದ ಸದಾ ಜನಸಂಚಾರವಿರುವ ಪತ್ರಬರಹಗಾರರ ಕಾರ್ಯಾಲಯದ ಬಾಗಿಲಲ್ಲಿ ವಾಹನ ನಿಲ್ಲಿಸಿ ಒಳಗಿದ್ದ ಹಣದಲ್ಲಿ ೫೦.೦೦೦ ರೂಗಳನ್ನು ಸ್ಕೂಟಿಯಲ್ಲಿಟ್ಟು ಲಾಕ್ ಮಾಡಿ ಉಳಿದ ಹಣವನ್ನು ಎತ್ತಿಕೊಂಡು ಪತ್ರ ಬರೆಸಲು ಒಳಗೆ ತೆರಳಿದ್ದರು.
ಕಾರ್ಯಾಲಯದ ಒಳ ಹೋಗಿ ಅವರು ಹೊರಬರುವ ವೇಳೆಗೆ ಸ್ಕೂಟಿಯ ಡಿಕ್ಕಿ ತೆರದು ಹಣ ಕಳವು ಮಾಡಲಾಗಿತ್ತು ಈ ಘಟನೆಯಿಂದ ಕಂಗಾಲದ ಚಂದ್ರು ಹಾಗೂ ಪತ್ರ ಬರಹಗಾರ ನಾಗರಾಜ ಅರಸು ಅದೇ ಕಟ್ಟಡದಲ್ಲಿದ್ದ ಸಿ ಸಿ ಟಿ ವಿ ಯನ್ನು ಪರಿಶಿಲನೆಗೆ ಒಳಪಡಿಸಿದಾಗ ಮೂವರು ಚೋರರು ಸ್ಕೂಟಿ ಬಳಿ ಬಂದು ಅದರ ಅಕ್ಕಪ್ಪಕ್ಕ ನಿಂತು ಕೆಲವೇ ಕ್ಷಣದಲ್ಲಿ ಡಿಕ್ಕಿ ಎತ್ತಿ ಕೈಬೆರಳುಗಳನ್ನು ಒಳಗೆ ತೂರಿಸಿ ಹಣ ಕದ್ದು ಪರಾರಿಯಾದ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ . ನಂತರ ಚಂದ್ರು ಪಟ್ಟಣ ಠಾಣೆಗೆ ಹೋಗಿ ಹಣಕಳ್ಳತನವಾದ ಕುರಿತು ದೂರು ನೀಡಿದ್ದೂ ಅಲ್ಲದೆ ಸಿ ಸಿ ಟಿ ವಿಯ ದೃಶ್ಯವಳಿಗಳ ನೀಡಿದ್ದಾರೆ. ಕಳ್ಳರ ಪತ್ತೆಗೆ ನಂಜನಗೂಡು ಪೊಲೀಸರೀಗ ಬಲೆ ಬೀಸಿದ್ದಾರೆ.
ವರದಿ : ಎಸ್.ಎಸ್.ಭಟ್
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…
ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…
‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…
ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …
ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…