ರಾಜ್ಯ

ಕಾಂಗ್ರೆಸ್‌ ಜೀವಂತವಾಗಿದ್ದರೇ ಶಾಮನೂರು ಶಿವಶಂಕರಪ್ಪನನ್ನು ಸಸ್ಪೆಂಡ್‌ ಮಾಡಿ ಪಕ್ಷದಿಂದ ಹೊರಗೆಹಾಕಿ : ಹೆಚ್‌.ವಿಶ್ವನಾಥ್‌ !

ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಜೀವಂತವಾಗಿದ್ದರೆ ಶಾಮನೂರು ಶಿವಶಂಕರಪ್ಪನನ್ನು ಪಕ್ಷದಿಂದ ಸಸ್ಪೆಂಡ್‌ ಮಾಡಿ ಹೊರಗೆ ಹಾಕಿ ಎಂದು ಬಿಜೆಪಿ ಎಂಎಲ್‌ಸಿ ʼಹಳ್ಳಿ ಹಕ್ಕಿʼ ಹೆಚ್‌.ವಿಶ್ವನಾಥ್‌ ಏಕವಚನದಲ್ಲೇ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ ಪಕ್ಷದಿಂದ ಗೆದ್ದಿದ್ದಾರೆ. ಜೀವನದುದ್ದಕ್ಕೂ ಕಾಂಗ್ರೆಸ್‌ನಿಂದ ಸಹಾಯ ಪಡೆದುಕೊಂಡು ಬಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಎಂದು ಜಗತ್ತಿಗೆ ತೋರಿಸಿದವರು ದೇವರಾಜ ಅರಸು. ಅವರನ್ನು ಒಂದು ದಿನವಾದರೂ ನೆನಿತಾನ ಇವನು ಎಂದರು.

ಆತನ ಸಂಪೂರ್ಣ ಬೆಳವಣಿಗೆಗೆ ದೇವರಾಜ ಅರಸು ಕಾರಣ. ನಾವಾದರು ಅರಸು ಅವರನ್ನು ನೆನೆಯುತ್ತೇವೆ ಆದರೆ ಅವರೆಂದು ನೆನೆಯುವುದಿಲ್ಲ. ಕೃತಜ್ಞತೆಯೇ ಇಲ್ಲದವರು. ಚೆನ್ನಾಗಿ ದುಡ್ಡು ಮಾಡಿದ್ದಾನೆ. ಯಾರನ್ನ ಬೇಕಾದರೂ ಕೊಂಡುಕೊಳ್ಳುತ್ತೇನೆ ಎನ್ನುತ್ತಾನೆ ಎಂದು ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವನಿಲ್ಲದಿದ್ದರೆ ಪಕ್ಷ ನಡೆಯಲ್ವೇ? ಪಕ್ಷ ನಡೆಯುವುದು ಜನರಿಂದ ಎಂದು ಹೇಳಿದರು.

ನಮ್ಮವರಿಗೂ ಬುದ್ದಿ ಇಲ್ಲ : ನಮ್ಮ ಯಾವುದೇ ಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ದಾವಣಗೆರೆಗೆ ಹೋದರೆ ಅವರ ಗೆಸ್ಟ್‌ಹೌಸ್‌ನಲ್ಲೇ ಮಲಗುತ್ತಾರೆ. ಅವನ ಮನಗೆ ಉಣ್ಣಲಿಕ್ಕೆ ಹೋಗುತ್ತಾರೆ. ಯಾರಾದರು ಕಾರ್ಯಕರ್ತರ ಮನೆಗೆ ಹೋಗಿ ಅಂಥಾ ನಾನು ಬಹಳಾ ಸತಿ ಹೇಳೀದ್ದೇನೆ. ನೀವೆಲ್ಲಾ ಅವನ ಮನಗೆ ಹೋದರೆ ನಿಮಗೆ ತಿರುಗಿಸಿ ಮಾತನಾಡುತ್ತಾನೆ. ನಮ್ಮ ಕಾಂಗ್ರೆಸ್‌ ಪಕ್ಷದ ಬಂಡೆ ಡಿಕೆಶಿ ನಿಜವಾದ ಬಂಡೆಯಾಗಿದ್ದರೆ, ಪಕ್ಷದಿಂದ ಅವನನ್ನು ಹೊರಗೆಹಾಕಿ ಎಂದು ಹೆಚ್‌.ವಿಶ್ವನಾಥ್‌ ಸವಾಲು ಹಾಕಿದ್ದಾರೆ.

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

12 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

13 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

14 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

15 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

20 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

20 hours ago