Andolana originals

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ ೧,೨೩೦ ಕೇಸ್‌ಗಳು ದಾಖಲಾಗಿ ೧೬೭ ಪ್ರಕರಣಗಳಲ್ಲಿ  ಶಿಕ್ಷೆ ಆಗಿದೆ ಅಂತೆ. ಜನಸಾಮಾನ್ಯರಿಗೂ ಗೊತ್ತಿದೆ ಭ್ರಷ್ಟಾಚಾರಿಗಳ ಸಂಖ್ಯೆ ದೊಡ್ಡದಾಗಿರುತ್ತದೆ, ಆದರೆ ಶಿಕ್ಷೆಗೊಳಗಾಗುವವರ ಸಂಖ್ಯೆ ಬಹಳ ಕಡಿಮೆ ಎಂಬುದು. ಹಲವಾರು ಸಂದರ್ಭಗಳಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರದಿಂದ ಅನುಮತಿ ಸಿಗುತ್ತಿಲ್ಲ ಎಂಬುದು ಮಾಧ್ಯಮಗಳ ವರದಿಯಿಂದಲೇ ಜನರಿಗೆ ಗೊತ್ತಾಗುತ್ತದೆ.

೧,೪೫೭ ಕೋಟಿ ರೂ. ಹಗರಣದಲ್ಲಿ  ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಲೋಕಾಯುಕ್ತರು ಸರ್ಕಾರಕ್ಕೆ ಬರೆದ ಪತ್ರಕ್ಕೆ ಅನುಮತಿ ದೊರೆತಿಲ್ಲ. ೪ರಿಂದ ೬ ಜ್ಞಾಪನಾ ಪತ್ರಗಳನ್ನು ಬರೆದರೂ ಉತ್ತರವಿಲ್ಲ ಎಂಬುದು ಮಾಧ್ಯಮಗಳಿಂದಲೇ ತಿಳಿದುಬಂದಿದೆ.  ಇದರಿಂದ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನಸ್ಸಿಲ್ಲವೆಂಬ ಅನುಮಾನ ಜನಸಾಮಾನ್ಯರಲ್ಲಿ ಬರುವುದರಲ್ಲಿ ಸಂಶಯವಿಲ್ಲ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಹರಿತವಾದ ಹೇಳಿಕೆಗಳನ್ನು ನೋಡಿದಾಗ ಭ್ರಷ್ಟಾಚಾರವನ್ನು ಬಗ್ಗುಬಡಿಯಲು ಮುಂದಾಗುತ್ತಾರೆಂದು ಆಶಾಭಾವನೆ ಇಟ್ಟುಕೊಳ್ಳಬಹುದೇನೋ?

-ಎ.ಎಸ್. ಗೋಪಾಲಕೃಷ್ಣ, ಮೈಸೂರು

ಆಂದೋಲನ ಡೆಸ್ಕ್

Recent Posts

ನವೆಂಬರ್.‌15ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು: ನವೆಂಬರ್‌ 15ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, ಪಿಂಕ್‌ ಲೈನ್‌ ಮೆಟ್ರೋದ 7.5 ಕಿಲೋಮೀಟರ್‌ ಎತ್ತರಿಸಿದ ಮಾರ್ಗವನ್ನು…

4 hours ago

ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಬಿಸಿ ಮುಟ್ಟಿಸಿದೆ. ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ…

6 hours ago

ನವೆಂಬರ್.‌1ರಿಂದ ಎಲ್‌ಪಿಜಿ ಗ್ಯಾಸ್‌ ನಿಯಮಗಳಲ್ಲಿ ಬಿಗ್‌ ಚೇಂಜ್‌

ಬೆಂಗಳೂರು: ಎಲ್‌ಪಿಜಿ ಗ್ರಾಹಕರೇ ಗಮನಿಸಿ. ನವೆಂಬರ್‌ 1ರಿಂದ ಗ್ಯಾಸ್‌ ವಿತರಣೆಯ ನಿಯಮಗಳು ಮತ್ತಷ್ಟು ಬಿಗಿಯಾಗಲಿವೆ ಎಂದು ವರದಿಯಾಗಿದೆ. ಆಧಾರ್‌ ಆಧಾರಿತ…

6 hours ago

ಓದುಗರ ಪತ್ರ: ಒಂದು ‘ರೂಪ’, ಎರಡು ಗುಣ!

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು…

10 hours ago

ಓದುಗರ ಪತ್ರ: ಹಗುರ ಮಾತು ಬೇಡ

ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ…

10 hours ago

ಓದುಗರ ಪತ್ರ: ಇ – ಖಾತಾ: ಹೊಸ ಸಮಸ್ಯೆಯ ಅರಿವಿದೆಯೇ?

ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…

10 hours ago