Andolana originals

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ ನೀಟ-ಯುಜಿಯಂತಹ ಪ್ರಮುಖ ಪರೀಕ್ಷೆಗಳಿಗೆ ೩೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆದರೆ, ಪದೇಪದೇ ಸಂಭವಿಸುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಯುವಜನರ ಭವಿಷ್ಯವನ್ನು ಹಾಗೂ ಶೈಕ್ಷಣಿಕ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ತೀವ್ರವಾಗಿ ಕುಸಿಯುವಂತೆ ಮಾಡಿವೆ.

ತಂತ್ರeನದ ಬಳಕೆಯು ಭದ್ರತೆಯನ್ನು ಹೆಚ್ಚಿಸಬಹುದಾದರೂ, ಕೇವಲ ಡಿಜಿಟಲ್ ಮೂಲಸೌಕರ್ಯದಿಂದಲೇ ಸಂಪೂರ್ಣ ಪರಿಹಾರ ಸಿಗಲಾರದು. ವ್ಯವಸ್ಥೆಯಲ್ಲಿ ಪಾರದರ್ಶಕತೆ, ಕಠಿಣ ಆಡಳಿತಾತ್ಮಕ ಹೊಣೆಗಾರಿಕೆ ಮತ್ತು ತಪ್ಪಿತಸ್ಥರ ವಿರುದ್ಧ ಶಾಸನಾತ್ಮಕ ಕ್ರಮಗಳು ಅತ್ಯಗತ್ಯ. ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಮತ್ತು ದೇಶದ ಮೆರಿಟ್ ವ್ಯವಸ್ಥೆಯನ್ನು ರಕ್ಷಿಸಲು ಆಮೂಲಾಗ್ರ ಸುಧಾರಣೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ನವೆಂಬರ್.‌15ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು: ನವೆಂಬರ್‌ 15ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, ಪಿಂಕ್‌ ಲೈನ್‌ ಮೆಟ್ರೋದ 7.5 ಕಿಲೋಮೀಟರ್‌ ಎತ್ತರಿಸಿದ ಮಾರ್ಗವನ್ನು…

7 hours ago

ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಬಿಸಿ ಮುಟ್ಟಿಸಿದೆ. ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ…

9 hours ago

ನವೆಂಬರ್.‌1ರಿಂದ ಎಲ್‌ಪಿಜಿ ಗ್ಯಾಸ್‌ ನಿಯಮಗಳಲ್ಲಿ ಬಿಗ್‌ ಚೇಂಜ್‌

ಬೆಂಗಳೂರು: ಎಲ್‌ಪಿಜಿ ಗ್ರಾಹಕರೇ ಗಮನಿಸಿ. ನವೆಂಬರ್‌ 1ರಿಂದ ಗ್ಯಾಸ್‌ ವಿತರಣೆಯ ನಿಯಮಗಳು ಮತ್ತಷ್ಟು ಬಿಗಿಯಾಗಲಿವೆ ಎಂದು ವರದಿಯಾಗಿದೆ. ಆಧಾರ್‌ ಆಧಾರಿತ…

9 hours ago

ಓದುಗರ ಪತ್ರ: ಒಂದು ‘ರೂಪ’, ಎರಡು ಗುಣ!

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು…

13 hours ago

ಓದುಗರ ಪತ್ರ: ಹಗುರ ಮಾತು ಬೇಡ

ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ…

13 hours ago

ಓದುಗರ ಪತ್ರ: ಇ – ಖಾತಾ: ಹೊಸ ಸಮಸ್ಯೆಯ ಅರಿವಿದೆಯೇ?

ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ…

13 hours ago