ರಾಜ್ಯ

ಕಮಲ್‌ ಹಾಸನ್‌ಗೆ ಕನ್ನಡದ ಇತಿಹಾಸ ಏನೂ ಗೊತ್ತಿಲ್ಲ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿ

ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಉಗಮವಾಯಿತು ಎಂಬ ಕಾಲಿವುಡ್‌ ನಟ ಕಮಲ್‌ ಹಾಸನ್‌ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಮಲ್‌ ಹಾಸನ್‌ ಹೇಳಿಕೆ ದುರುದ್ದೇಶಪೂರಿತ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಈ ಹೇಳಿಕೆ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಂದಿದೆ.

ಇದನ್ನೂ ಓದಿ:- ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು

ಕನ್ನಡ ಭಾಷೆಗೆ ಸುಮಾರು 4600-5000 ವರ್ಷಗಳ ಇತಿಹಾಸವಿದೆ. ಕಮಲ್‌ ಹಾಸನ್‌ ಅವರ ಹೇಳಿಕೆಯಿಂದ ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟುಹಾಕುವ ಕೆಲಸವಾಗುತ್ತಿದೆ. ಅವರು ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಕನ್ನಡಿಗರ ಭಾವನೆಗಳಿಗೆ ಗೌರವ ತೋರಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಹನೂರು | ಅರಣ್ಯದಲ್ಲಿ 292 ಗಾಂಜಾ ಗಿಡಗಳು ಪತ್ತೆ ; 213 ಕೆಜಿ ಗಾಂಜಾ ವಶ

ಹನೂರು : ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಸಂಪಿಗೆ ಅರಣ್ಯ ಪ್ರದೇಶದ ಕೂಳಿಹಟ್ಟಿ ಭಾಗದ ಬೆಳ್ಳಾಜಿ…

53 mins ago

ಉತ್ತರ ಪ್ರದೇಶದಲ್ಲಿ ಮುಂದುವರಿದ ಮಳೆಯ ಆರ್ಭಟ

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ…

5 hours ago

ರಾಜ್ಯದಲ್ಲಿ ಬರ ತಾಂಡವ: ಪರಿಶೀಲನೆಗೆ ಕೇಂದ್ರದ ತಂಡ ರಾಜ್ಯಕ್ಕೆ ಆಗಮನ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ…

5 hours ago

ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌ ಪ್ರಶ್ನೆ ಇಲ್ಲ: ಸಚಿವ ಕೆ.ಜೆ.ಜಾರ್ಜ್

ಮೈಸೂರು: ವಿದ್ಯುತ್‌ ಕೊರತೆ ಹಾಗೂ ರಾಜ್ಯದ ವಿದ್ಯುತ್‌ ಪರಿಸ್ಥಿತಿ ಕುರಿತು ಮಾತನಾಡಿರುವ ಸಚಿವ ಕೆ.ಜೆ.ಜಾರ್ಜ್‌ ರಾಜ್ಯದಲ್ಲಿ ಸದ್ಯಕ್ಕೆ ಲೋಡ್‌ ಶೆಡ್ಡಿಂಗ್‌…

5 hours ago

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

12 hours ago

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

12 hours ago