ರಾಜ್ಯ

ರಾಮನನ್ನು ದಕ್ಷಿಣ ಭಾರತದಲ್ಲಿ ಪೂಜಿಸಲ್ಲ; ಸ್ಪಷ್ಟನೆ ನೀಡಿದ ಡಿಕೆಸು

ಖಾಸಗಿ ಚಾನೆಲ್‌ ನಡೆಸಿದ ಸಂದರ್ಶನವೊಂದರಲ್ಲಿ ʼರಾಮನನ್ನು ದೇವರು ಅಂತ ಹೇಳಿ ನಮ್ಮ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪೂಜೆ ಮಾಡುವುದಿಲ್ಲ. ನೀವು ಹಳ್ಳಿಗಳಲ್ಲಿ ಹೋಗಿ ನೋಡಿ. ಮನೆಗಳಲ್ಲಿ ಕೆಲವರು ಫೋಟೊಗಳನ್ನು ಸಹ ಇಡುವುದಿಲ್ಲʼ ಎಂದು ಡಿಕೆ ಸುರೇಶ್‌ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ವಿಡಿಯೊ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಆರ್‌ ಅಶೋಕ್‌ ʼದಕ್ಷಿಣ ಭಾರತದಲ್ಲಿ ಯಾರೂ ರಾಮನನ್ನ ಪೂಜಿಸುವುದಿಲ್ಲವಂತೆ. ಡಿಕೆ ಸುರೇಶ್ ಅವರ ನುಡಿಮುತ್ತುಗಳನ್ನ ಒಮ್ಮೆ ಕೇಳಿಸಿಕೊಳ್ಳಿ. ಅವರ ದೇಶ ವಿಭಜನೆಯ ಮಾತು ಬಾಯಿ ತಪ್ಪಿ ಬಂದಿದ್ದಲ್ಲ. ಅದರ ಹಿಂದೆ ಬಹಳ ದೊಡ್ಡ ಮಸಲತ್ತು ಇದೆ. ಹಿಂದೂ ಧರ್ಮ ಒಡೆದರೆ ಮಾತ್ರ ದೇಶ ಒಡೆಯಲು ಸಾಧ್ಯ ಅಂತ ಬ್ರಿಟಿಷರಿಂದ, ಮೊಘಲರಿಂದ, ಟಿಪ್ಪುವಿನಿಂದ ಚೆನ್ನಾಗಿ ಕಲಿತಿರುವ ಕಾಂಗ್ರೆಸ್ ನಾಯಕರು, ಅದನ್ನ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಎಕ್ಸ್‌ನಲ್ಲಿಯೇ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್‌ ʼಇಂದಿಗೂ ನಮ್ಮ ಹಳ್ಳಿಯ ಜನ ತಮ್ಮ ಜಾನಪದ ಪರಂಪರೆಯ ಮಾರಮ್ಮ, ಚೌಡಮ್ಮ, ಹುಲಿಗೆಮ್ಮ, ಯಲ್ಲಮ್ಮ, ಕಬ್ಬಾಳಮ್ಮ, ಮದ್ದೂರಮ್ಮ, ಮಾದಪ್ಪ, ಮುನೇಶ್ವರ, ಸಿದ್ದೇಶ್ವರ, ಭೂತ, ವರ್ತೆ, ಪಂಜುರ್ಲಿ ದೈವಗಳನ್ನೇ ತಮ್ಮ ಮನೆದೇವರಾಗಿ ಆರಾಧಿಸಿಕೊಂಡು ಬಂದವರು. ನಮ್ಮದು ಮೂಲ ದ್ರಾವಿಡ ಪರಂಪರೆ. ನಮ್ಮ ಹಳ್ಳಿಯ ಜನರ ಮನೆಗಳಲ್ಲಿ ಸಿಗುವುದು ನಮ್ಮ ಪರಂಪರೆಯ ದೈವಗಳು ನನ್ನ ಮಾತಿನ ಅರ್ಥವನ್ನು ತಿರುಚಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹರಿಬಿಡುವುದು, ಜನರನ್ನು ಭಾವನಾತ್ಮಕವಾಗಿ ಕೆಣಕುವುದು ಬಿಜೆಪಿ ಪಕ್ಷದ ಹಳಸಲು ಸಿದ್ಧಾಂತ. ಅಭಿವೃದ್ಧಿ, ಸಿದ್ಧಾಂತದ ಅಡಿಯಲ್ಲಿ ನಮ್ಮನ್ನು ಎದುರಿಸಲಾಗದ ನಿಮಗೆ ಸಿಗುವುದು ಇಂತವೇ ಪುರಾವೆಗಳು. ಜನ ದಡ್ಡರಲ್ಲ. ಈ ಚುನಾವಣೆ ನಿಮಗೆ ತಕ್ಕ ಪಾಠ ಕಲಿಸಲಿದೆ! ನೆನಪಿರಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಶ್ರೀನಿವಾಸ ಎ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಡಿ ಬನುಮಯ್ಯ ಕಾಲೇಜಿನಲ್ಲಿ ಪದವಿ ಮುಗಿಸಿದ ನಾನು ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಒನ್‌ಇಂಡಿಯಾ ಕನ್ನಡದಲ್ಲಿ ಸೋಷಿಯಲ್‌ ಮೀಡಿಯಾ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಆರಂಭಿಸಿ ಮೈಖೇಲ್‌ ಕನ್ನಡ ಹಾಗೂ ಕನ್ನಡ ಫಿಲ್ಮಿಬೀಟ್‌ನಲ್ಲಿ ಮೂರು ವರ್ಷಗಳ ಕಾಲ ಸಬ್‌ಎಡಿಟರ್‌ ಆಗಿ ಕೆಲಸ ನಿರ್ವಹಿಸಿದ್ದೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯ ಡಿಜಿಟಲ್‌ ಟೀಮ್‌ ಲೀಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳಾಗಿದ್ದು, ಪ್ರವಾಸ ಮತ್ತು ಫೋಟೋಗ್ರಫಿ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಹೊಣೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ…

6 hours ago

ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಾಟ : ಇಬ್ಬರ ಬಂಧನ

ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…

8 hours ago

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

16 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

16 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

16 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

16 hours ago