ರಾಜ್ಯ

7ನೇ ದಿನಕ್ಕೆ ಆಶಾ ಕಾರ್ಯಕರ್ತೆಯರ ಧರಣಿ; 17 ಮಂದಿ ಆಸ್ಪತ್ರೆಗೆ ದಾಖಲು!

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ.

ನವೆಂಬರ್‌ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಕಾರ್ಯಕರ್ತೆಯರು ಹಗಲು–ರಾತ್ರಿ ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನೆಯ ನಡುವೆ ಅಸ್ವಸ್ಥಗೊಂಡ 17 ಮಂದಿಯನ್ನು ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿ ವ್ಯವಸ್ಥೆಗಳ ಕೊರತೆಯೂ ಸಂಕಷ್ಟ ಹೆಚ್ಚಿಸಿದೆ.

ಸರ್ಕಾರದ ಮೌಖಿಕ ಭರವಸೆಗೆ ಒಪ್ಪದ ಕಾರ್ಯಕರ್ತೆಯರು, ಬೇಡಿಕೆಗಳಿಗೆ ಸಂಬಂಧಿಸಿದ ಲಿಖಿತ ಆದೇಶ ಸಿಗುವವರೆಗೂ ಧರಣಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಬಂಡೀಪುರದ ಕುಂದುಕೆರೆ ವಲಯದಲ್ಲಿ ಗಂಡಾನೆ ಕಳೇಬರ ಪತ್ತೆ!

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಲ್ಲಿ ಗಂಡಾನೆಯ ಕಳೇಬರ ಪತ್ತೆಯಾಗಿದೆ. ಕುಂದುಕೆರೆ ಗಸ್ತಿನ ಬೂದಿಕಟ್ಟೆ ಅರಣ್ಯ ಪ್ರದೇಶದಲ್ಲಿ…

56 mins ago

ಬಸವಣ್ಣನವರ ಅವಹೇಳನ ಖಂಡನೀಯ

ಜಗಜ್ಯೋತಿ ಬಸವೇಶ್ವರರನ್ನು ಅವಮಾನಿಸುವ ಕೃತಿ ‘ಬಸವ ಮಂಟಪ’ ಈಗ ವಿವಾದವನ್ನು ಎಬ್ಬಿಸಿದೆ. ಈ ಕೃತಿಯ ಲೇಖಕ ರವಿ ಹಂಜ್ ಹಾಗೂ…

2 hours ago

ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಯುವ ದಸರಾ

ಎ.ಬಿ.ಇಬ್ರಾಹಿಂ, ಮೈಸೂರು ನಗರಪಾಲಿಕೆ ಮಾಜಿ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ದಸರಾ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಿ ಮೈಸೂರಿನ ಬ್ರಾಂಡ್…

2 hours ago

ರಾಜ್ಯದ ರಾಜಕೀಯ ಬೆಳವಣಿಗೆ: ಇನ್ನಷ್ಟು ಸಮಯ ಕಾದು ನೋಡಿ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯದ ಎನ್‌ಡಿಎ ನಾಯಕರಿಗೆ ದಿಲ್ಲಿಯ ಬಿಜೆಪಿ ಪಾಳೆಯದಿಂದ ಸಂದೇಶ ದಿಲ್ಲಿಯ ಬಿಜೆಪಿ…

2 hours ago

ಟಾಪರ್ ಮಕ್ಕಳ ಒಳಿತಿಗಾಗಿ ಕೈಪಿಡಿ!

ಗಿರೀಶ್ ಹುಣಸೂರು ‘ವಿದ್ಯಾರ್ಥಿಗಳ ಖಾಸಗಿತನ, ಸಮ್ಮತಿ ಮತ್ತು ಡೇಟಾ ಸಂರಕ್ಷಣೆ’ ಕುರಿತು ಕನ್ನಡದ ಮೊದಲ ಪ್ರಾಯೋಗಿಕ ಕೈಪಿಡಿ ರಚನೆ ಮೈಸೂರು:…

2 hours ago

ಕೈಕೊಟ್ಟ ಮಳೆ; ಮೀನು ಉತ್ಪಾದನೆ ಕುಂಠಿತ

ಕೇಶವ್ ಎಂ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ…

2 hours ago