Andolana originals

ಟಾಪರ್ ಮಕ್ಕಳ ಒಳಿತಿಗಾಗಿ ಕೈಪಿಡಿ!

ಗಿರೀಶ್ ಹುಣಸೂರು

‘ವಿದ್ಯಾರ್ಥಿಗಳ ಖಾಸಗಿತನ, ಸಮ್ಮತಿ ಮತ್ತು ಡೇಟಾ ಸಂರಕ್ಷಣೆ’ ಕುರಿತು ಕನ್ನಡದ ಮೊದಲ ಪ್ರಾಯೋಗಿಕ ಕೈಪಿಡಿ ರಚನೆ

ಮೈಸೂರು: ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಕರ್ಷಿಸಲು, ಹಣಕ್ಕಾಗಿ ‘ಟಾಪರ್’ ವಿದ್ಯಾರ್ಥಿಗಳನ್ನು ಬ್ರ್ಯಾಂಡ್ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ವಿದ್ಯಾರ್ಥಿಗಳ ಸಾಧನೆಯನ್ನು ಹೊಗಳುವ ಹೆಸರಿನಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ನೈತಿಕ ಮತ್ತು ಕಾನೂನಾತ್ಮಕವಾಗಿ ಗಂಭೀರ ವಿಷಯವಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಅವರ ಸುರಕ್ಷತೆಯೊಂದಿಗೆ ಗಟ್ಟಿಯಾದ ಸಂಬಂಧ ಹೊಂದಿರುತ್ತದೆ ಎಂಬುದನ್ನು ಮರೆಯಬಾರದು.

ಮಕ್ಕಳ ಫೋಟೋಗಳನ್ನು ಶಾಲೆಗಳ ಬ್ಯಾನರ್‌ಗಳಲ್ಲಿ ಬಳಸಲು ಪೋಷಕರ ಅನುಮತಿ ಕಡ್ಡಾಯ. ಪ್ರಸ್ತುತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶ ದಾಖಲೆಗಳು, ಆಧಾರ್ ಮತ್ತು ಗುರುತಿನ ವಿವರಗಳು, ಭಾವಚಿತ್ರಗಳು, ಹಾಗೂ ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಡಿಜಿಟಲ್ ಕಲಿಕಾ ವೇದಿಕೆಗಳು, ಆನ್‌ಲೈನ್ ಪರೀಕ್ಷೆಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿದ್ಯಾರ್ಥಿಗಳ ಮಾಹಿತಿ ನಿರ್ವಹಣಾ ವ್ಯವಸ್ಥೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯ ಸಂರಕ್ಷಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ಕೈಪಿಡಿಯನ್ನು ರಚಿಸಿರುವ ಡಾ.ಡಿ.ಸಿ.ನಂಜುಂಡ.

ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಮಾಹಿತಿಯನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಬೇಕು, ಅದನ್ನು ಹೇಗೆ ಬಳಸಬೇಕು, ಯಾರೊಂದಿಗೆ ಹಂಚಿಕೊಳ್ಳಬಹುದು ಮತ್ತು ಎಷ್ಟು ಸುರಕ್ಷಿತವಾಗಿ ಸಂಗ್ರಹಿಸಿಡಬೇಕು ಎಂಬುದರ ಕುರಿತು ಕೈಪಿಡಿಯಲ್ಲಿ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗಿದೆ.

ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವಾಗ ಸಮ್ಮತಿ ಪಡೆಯುವ ವಿಧಾನ, ಮಕ್ಕಳ ವೈಯಕ್ತಿಕ ದತ್ತಾಂಶದ ಸಂಸ್ಕರಣೆಯಲ್ಲಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರ ಸಮ್ಮತಿಯ ಮಹತ್ವ, ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆಗಳನ್ನೂ ಕೈಪಿಡಿಯಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಅನಗತ್ಯವಾಗಿ ಸಂಗ್ರಹಿಸುವುದು, ಅನುಮತಿಯಿಲ್ಲದೆ ಹಂಚಿಕೊಳ್ಳುವುದು ಹಾಗೂ ತಂತ್ರಜ್ಞಾನದ ಮೂಲಕ ದುರ್ಬಳಕೆ ಮಾಡುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿಗಳು, ಕಾಲೇಜುಗಳ ಮುಖ್ಯಸ್ಥರು, ಕೋಚಿಂಗ್ ಸಂಸ್ಥೆಗಳ ನಿರ್ವಹಣಾಧಿಕಾರಿಗಳು, ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಕ್ಷೇತ್ರದ ನೀತಿ ನಿರೂಪಕರಿಗೆ ಈ ಕೈಪಿಡಿ ಉಪಯುಕ್ತ ಎನ್ನುತ್ತಾರೆ ಡಾ.ಡಿ.ಸಿ.ನಂಜುಂಡ. ಇತ್ತೀಚೆಗೆ ಭಾರತ ಸರ್ಕಾರವು, ದೇಶದ ಎಲ್ಲ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸುವ ಉದ್ದೇಶದಿಂದ, ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ ೨೦೨೩, (ಡಿಪಿಡಿಪಿ ಆಕ್ಟ್ ೨೦೨೩) ಅನ್ನು ಜಾರಿಗೆ ತಂದಿದೆ. ಭಾರತದಲ್ಲಿ, ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವ್ಯವಸ್ಥೆ, ಅಥವಾ ಸರ್ಕಾರ, ನಾಗರಿಕರಿಂದ ಸಂಗ್ರಹಿಸಿದ ವೈಯಕ್ತಿಕ ಮಾಹಿತಿಗಳನ್ನು, ವೈಯಕ್ತಿಕ ಮಾಹಿತಿಗಳಿಗೆ ಸಂಬಂಧಪಟ್ಟ ಹಾಗೆ, ಸಂಗ್ರಹಣೆ, ಬಳಕೆ, ಸಂರಕ್ಷಣೆ ಮತ್ತು ಹಂಚಿಕೆಗೆ ಸಂಬಂಧಿಸಿದ ಪ್ರಮುಖ ಕಾನೂನಾಗಿದೆ. ಇದರ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಅರಿವು ಬೇಕು.

ಯಾವುದೇ ಶಿಕ್ಷಣ ಸಂಸ್ಥೆಯಾಗಿರಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡುವುದು ಕೇವಲ ಕಾನೂನಿನ ಕರ್ತವ್ಯವಲ್ಲ. ಬದಲಾಗಿ, ಅದು ನೈತಿಕ ಜವಾಬ್ದಾರಿಯಾಗಿರುತ್ತದೆ. ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳು ಅತ್ಯುನ್ನತ ನಂಬಿಕೆಗೆ ಅರ್ಹವಾದ ಸಂಸ್ಥೆಗಳಾಗಿರುವುದರಿಂದ, ವೈಯಕ್ತಿಕ ಮಾಹಿತಿಗಳನ್ನು ಸಂರಕ್ಷಿಸುವುದರ ಕುರಿತು ಪೋಷಕರು ಅಪಾರ ಕಾಳಜಿಯನ್ನು ಹೊಂದಿರುತ್ತಾರೆ. ವಿದ್ಯಾರ್ಥಿಯ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಸಮಯದಲ್ಲಿ, ಶಾಲೆ-ಕಾಲೇಜುಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯತೆಯ ಕುರಿತು ಸ್ಪಷ್ಟಪಡಿಸಬೇಕು.

” ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯ ಗೌಪ್ಯತೆ, ಖಾಸಗಿತನ ಮತ್ತು ದತ್ತಾಂಶದ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು-೨೦೨೫ರ ಆಧಾರದಲ್ಲಿ ಕನ್ನಡದಲ್ಲಿ ಮೊದಲ ಪ್ರಾಯೋಗಿಕ ಕೈಪಿಡಿಯೊಂದನ್ನು ಸಿದ್ಧಪಡಿಸಲಾಗಿದೆ. ಮೈಸೂರು ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಅವರು ಕನ್ನಡದ ಮೊದಲ ಪ್ರಾಯೋಗಿಕ ಕೈಪಿಡಿಯನ್ನು ಹೊರ ತಂದಿದ್ದು, ‘ವಿದ್ಯಾರ್ಥಿಗಳ ಖಾಸಗಿತನ, ಸಮ್ಮತಿ ಮತ್ತು ಡೇಟಾ ಸಂರಕ್ಷಣೆ’ ಎಂಬ ಶೀರ್ಷಿಕೆಯ ಈ ಕೈಪಿಡಿಯು ಕರ್ನಾಟಕದ ಶಾಲಾ-ಕಾಲೇಜುಗಳು ಹಾಗೂ ಕೋಚಿಂಗ್ ಸಂಸ್ಥೆಗಳ ಆಡಳಿತ ಮಂಡಳಿ ಗಳು, ಮುಖ್ಯಸ್ಥರು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಇತರ ಸಿಬ್ಬಂದಿಗೆ ಉಪಯುಕ್ತವಾಗುವಂತೆ ‘ಆಂದೋಲನ’ ‘ದಿನಪತ್ರಿಕೆಯ ಮೇ ತಿಂಗಳ ೨೧ರ ಸಂಚಿಕೆಯಲ್ಲಿ ಪ್ರಕಟವಾದ ‘ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಪ್ರಚಾರದ ಸರಕಲ್ಲ!’ ಎಂಬ ವಿಶೇಷ ವರದಿಯಿಂದ ಪ್ರೇರಿತರಾಗಿ ಈ ಕೈಪಿಡಿಯನ್ನು ರೂಪಿಸಲಾಗಿದೆ.”

” ಅವಶ್ಯಕತೆಯಿಲ್ಲದ ಖಾಸಗಿ ಮಾಹಿತಿಗಳನ್ನು ಶಿಕ್ಷಣ  ಸಂಸ್ಥೆಗಳು ವಿದ್ಯಾರ್ಥಿಗಳಿಂದ ಪಡೆಯಬಾರದು. ಇಲ್ಲಿ ಸಮಸ್ಯೆಯಾದರೆ ಶಿಕ್ಷಣ ಸಂಸ್ಥೆಗಳು ೨೦೦ ಕೋಟಿ ರೂ.ಗಳಷ್ಟು ದಂಡ ತೆರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ , ೨೦೨೩ ಅನ್ನು ಆಧರಿಸಿ ಈ ಕೈಪಿಡಿಯನ್ನು ಕನ್ನಡದಲ್ಲಿ ರಾಜ್ಯದ ಎಲ್ಲಾ ಕೋಚಿಂಗ್ ಸಂಸ್ಥೆಗಳಿಗಾಗಿ ತಯಾರಿಸಲಾಗಿದೆ. ಇದನ್ನು ಎಲ್ಲಾ ಶಾಲಾ-ಕಾಲೇಜುಗಳು ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಬೇಕು.”

ಡಾ.ಡಿ.ಸಿ.ನಂಜುಂಡ, ಸಹ ಪ್ರಾಧ್ಯಾಪಕರು, ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ

” ‘ವಿದ್ಯಾರ್ಥಿಗಳ ಖಾಸಗಿತನ ಮತ್ತು ಮಕ್ಕಳ ಹಕ್ಕುಗಳು’, ‘ಭಾರತದಲ್ಲಿ ಖಾಸಗಿತನಕ್ಕೆ ಸಂಬಂಽಸಿದ ಕಾನೂನುಗಳು’, ‘ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯ ನಿರ್ವಹಣೆ’,‘ವಿದ್ಯಾರ್ಥಿಗಳ ಖಾಸಗಿತನ ಮತ್ತು ಡೇಟಾ ಸಂರಕ್ಷಣೆಯಲ್ಲಿ ಪೋಷಕರ ಪಾತ್ರ’, ‘ಸಮ್ಮತಿ ನೀತಿ’, ‘ವಿದ್ಯಾರ್ಥಿಗಳ ಫೋಟೋ, ಸಾಮಾಜಿಕ ಜಾಲತಾಣ ಮತ್ತು ಪ್ರಚಾರ’, ‘ಶಿಕ್ಷಣ ಸಂಸ್ಥೆಗಳಿಗಾಗಿ ಪ್ರಾಯೋಗಿಕ ಮಾರ್ಗಸೂಚಿಗಳು’, ‘ವಿದ್ಯಾರ್ಥಿಗಳ ಡಿಜಿಟಲ್ ಹಕ್ಕುಗಳು ಮತ್ತು ಜವಾಬ್ದಾರಿಗಳು’, ‘ಸಿದ್ಧ ನಮೂನೆಗಳು’ ಅನುಬಂಧಗಳು, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮ -೨೦೨೫ರ ಕನ್ನಡ ಅನುವಾದ ಸೇರಿದಂತೆ ಹತ್ತು ಅಧ್ಯಾಯಗಳನ್ನು ಒಳಗೊಂಡಿರುವ ೧೨೫ ಪುಟಗಳ ಕೈಪಿಡಿಯನ್ನು ಮೈಸೂರು ವಿಶ್ವ ವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ.ಡಿ.ಸಿ.ನಂಜುಂಡ ಅವರು ರಚಿಸಿದ್ದಾರೆ.”

” ಇಂದಿನ ಎಲ್ಲಾ ಮಕ್ಕಳು ಸಾಮಾಜೀಕರಣದ ಭಾಗವಾಗಿ ಶಾಲೆಗಳಿಗೆ ಹೋಗುತ್ತಾರೆ. ಈ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಬೆಳಗಿನಿಂದ ಸಂಜೆವರೆಗೆ ಮಕ್ಕಳ ಜವಾಬ್ದಾರಿಯನ್ನು ಹೊತ್ತಿರುತ್ತವೆ. ಸುಪ್ರೀಂ ಕೋರ್ಟ್ ಕೂಡ ಶಾಲೆಯಿಂದ ಮಗು ಮನೆ ಸೇರುವವರೆಗೂ ಕೂಡ ಆ ಮಗುವಿನ ಸುರಕ್ಷತೆ ಶಾಲೆಯ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದೆ. ಇತ್ತೀಚೆಗೆ ಪೋಕ್ಸೊ ಪ್ರಕರಣಗಳೂ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.”

” ‘ಆಂದೋಲನ’ ‘ದಿನಪತ್ರಿಕೆಯಲ್ಲಿ ಪ್ರಕಟವಾದ ‘ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಪ್ರಚಾರದ ಸರಕಲ್ಲ!’ ವಿಶೇಷ ವರದಿಯಿಂದ ಪ್ರೇರಿತರಾಗಿ ಈ ಕೈಪಿಡಿ ರಚನೆ”

 

ಆಂದೋಲನ ಡೆಸ್ಕ್

Recent Posts

ರಾಜ್ಯದ ರಾಜಕೀಯ ಬೆಳವಣಿಗೆ: ಇನ್ನಷ್ಟು ಸಮಯ ಕಾದು ನೋಡಿ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯದ ಎನ್‌ಡಿಎ ನಾಯಕರಿಗೆ ದಿಲ್ಲಿಯ ಬಿಜೆಪಿ ಪಾಳೆಯದಿಂದ ಸಂದೇಶ ದಿಲ್ಲಿಯ ಬಿಜೆಪಿ…

16 seconds ago

ಕೈಕೊಟ್ಟ ಮಳೆ; ಮೀನು ಉತ್ಪಾದನೆ ಕುಂಠಿತ

ಕೇಶವ್ ಎಂ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ…

16 mins ago

ಮಳೆ ಕೊರತೆ ನಡುವೆಯೂ ಭತ್ತ ಬೆಳೆದ ರೈತರು

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಸಂಕಷ್ಟದಲ್ಲೂ ಧೈರ್ಯ ತೋರಿದ ರೈತರಿಗೆ ಉತ್ತಮ ಬೆಲೆಯ ನಿರೀಕ್ಷೆ  ಕೆ.ಆರ್.ನಗರ: ಜಿಲ್ಲೆಯಲ್ಲಿ ಮಳೆಯಕೊರತೆಯಿಂದಾಗಿ ಈ…

22 mins ago

ಅಯ್ಯಪ್ಪ ಭಕ್ತರಿಗೆ ಅನುಕೂಲ: ವಿಮಾನದ ಕ್ಯಾಬಿನ್‌ನಲ್ಲಿ ಇರುಮುಡಿ ಸಾಗಿಸಲು ಅನುಮತಿ!

ನವದೆಹಲಿ: ಪವಿತ್ರ ಇರುಮುಡಿ ಕೆಟ್ಟನ್ನು ವಿಮಾನದ ಕ್ಯಾಬಿನ್‌ನಲ್ಲಿ ಕೈಚೀಲವಾಗಿ ಕೊಂಡೊಯ್ಯುವ ಅನುಮತಿಯನ್ನು ಸತತ ಮೂರನೇ ವರ್ಷವೂ ಮುಂದುವರಿಸಲಾಗಿದೆ ಎಂದು ನಾಗರಿಕ ವಿಮಾನಯಾನ…

20 hours ago

ನನ್ನ ಸಲಹೆ ಪಾಲಿಸಿ ಹಣ ಉಳಿಸಿದ್ದೇವೆ ಎನ್ನುತ್ತಿದ್ದಾರೆ ಜನ: ಚಿನ್ನದ ಬೆಲೆ ಬಗ್ಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಚಿನ್ನದ ಬೆಲೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅಗತ್ಯವಿಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು…

20 hours ago