ಅಂಕಣಗಳು

ರಾಜ್ಯದ ರಾಜಕೀಯ ಬೆಳವಣಿಗೆ: ಇನ್ನಷ್ಟು ಸಮಯ ಕಾದು ನೋಡಿ

ಬೆಂಗಳೂರು ಡೈರಿ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ 

ರಾಜ್ಯದ ಎನ್‌ಡಿಎ ನಾಯಕರಿಗೆ ದಿಲ್ಲಿಯ ಬಿಜೆಪಿ ಪಾಳೆಯದಿಂದ ಸಂದೇಶ

ದಿಲ್ಲಿಯ ಬಿಜೆಪಿ ಪಾಳೆಯದಿಂದ ರಾಜ್ಯದ ಎನ್‌ಡಿಎ ನಾಯಕರಿಗೆ ಒಂದು ಕುತೂಹಲಕಾರಿ ಸಂದೇಶ ಬಂದಿದೆ.

ಅಂದ ಹಾಗೆ ಇಂತಹ ಸಂದೇಶ ಕೆಲ ಕಾಲದ ಹಿಂದೆಯೂ ಎನ್‌ಡಿಎ ನಾಯಕರಿಗೆ ತಲುಪಿತ್ತು. ಆದರೆ ಆಗ ತಲುಪಿದ ಸಂದೇಶಕ್ಕೂ, ಈಗ ತಲುಪಿರುವ ಸಂದೇಶಕ್ಕೂ ಇರುವ ಮುಖ್ಯ ಸಾಮ್ಯತೆ ಎಂದರೆ ಇನ್ನಷ್ಟು ಕಾಲ ಕಾಯಿರಿ ಎಂಬುದು.

ಇನ್ನಷ್ಟು ಕಾಲ ಕಾಯಿರಿ ಎಂಬ ಈ ಸಂದೇಶದ ರೂಪವನ್ನು ವಿಸ್ತ ತವಾಗಿ ನೋಡಬೇಕು ಎಂದರೆ ಕೆಲ ಕಾಲದ ಹಿಂದೆ ಬಂದ ಮೊದಲ ಸಂದೇಶವನ್ನು ಗಮನಿಸಬೇಕು. ಅದರ ಪ್ರಕಾರ,ಅವತ್ತು ರಾಜ್ಯದ ಎನ್‌ಡಿಎ ಅರ್ಥಾತ್, ಬಿಜೆಪಿ-ಜಾ.ದಳ ಮಿತ್ರ ಕೂಟದ ನಾಯಕರಿಗೆ ತಲುಪಿದ ಸಂದೇಶ ಅವತ್ತು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿತ್ತು.

ಮೂಲಗಳ ಪ್ರಕಾರ,ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಬ್ಬರು ನಾಯಕರ ಮಧ್ಯೆ ಅಧಿಕಾರ ಹಂಚಿಕೆಗಾಗಿಮ ಸಂಘರ್ಷ ಶುರುವಾಗಿತ್ತಲ್ಲ ಅರ್ಥಾತ್, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಅಧಿಕಾರ ಹಂಚಿಕೆಯ ಸಂಘರ್ಷ ಶುರುವಾಗಿತ್ತಲ್ಲ ಈ ಸಂದರ್ಭದಲ್ಲಿ ರಾಜ್ಯದ ಕೆಲ ಎನ್‌ಡಿಎ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯ. ಏಕೆಂದರೆ,ಸರ್ಕಾರದಲ್ಲಿ ದುಡ್ಡಿಲ್ಲ. ಹೀಗಾಗಿ ಶಾಸಕರು ಬಯಸುವ ರೀತಿಯಲ್ಲಿ ಕ್ಷೇತ್ರವಾರು ಅನುದಾನ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್‌ನ ಹಲವು ಶಾಸಕರಿಗೆ ಅಸಮಾಧಾನವಾಗಿದೆ. ಮತ್ತು ದಿಲ್ಲಿಯ ಬಿಜೆಪಿ ವರಿಷ್ಠರು ಸೂಕ್ತ ಸಂದೇಶ ನೀಡಿದರೆ ಅವರು ಕಾಂಗ್ರೆಸ್ ತೊರೆಯಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿಯನ್ನು ವರಿಷ್ಠರಿಗೆ ರವಾನಿಸಿದ್ದರು.

ಅಂದರೆ? ಈಗಾಗಲೇ ಸರ್ಕಾರದಿಂದ ಬಯಸಿದ ಪ್ರಮಾಣದ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡ ಹಲ ಶಾಸಕರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ನಡೆಯುತ್ತಿರುವ ಅಧಿಕಾರ ಸಂಘರ್ಷದ ನೆವದಲ್ಲಿ ಹೊರಗೆ ಬರಲು ಸಜ್ಜಾಗಿದ್ದಾರೆ ಎಂಬುದು ಅವರ ಮಾಹಿತಿ. ಹೀಗೆ ಮಾಹಿತಿ ಕೊಟ್ಟವರಿಗೆ ಅಷ್ಟರಲ್ಲಾಗಲೇ ಒಂದು ಬೆಳವಣಿಗೆ ನಡೆಯುತ್ತಿರುವುದು ಖಚಿತವಾಗಿತ್ತು. ಅದೆಂದರೆ ಬಿಜೆಪಿ ನಾಯಕ,ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಸಚಿವರೊಬ್ಬರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮತ್ತು ಮೂವತ್ತಕ್ಕೂ ಹೆಚ್ಚು ಶಾಸಕರು ಆ ಸಚಿವರ ಬೆನ್ನ ಹಿಂದಿದ್ದಾರೆ ಎಂಬುದು ಈ ಬೆಳವಣಿಗೆ.

ಅಂದ ಹಾಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, ಆ ಸರ್ಕಾರದ ಬಲವನ್ನು ನಿಯಂತ್ರಣದಲ್ಲಿಡಲು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರ ಮುಂದೆ ಒಂದು ಪ್ರಸ್ತಾವವನ್ನಿಟ್ಟಿದ್ದರು. ಅದೆಂದರೆ,ರಾಜ್ಯದಲ್ಲಿ ಬಲಿಷ್ಠವಾಗಿ ತಲೆ ಎತ್ತಿರುವ ಕಾಂಗ್ರೆಸ್ ಪಕ್ಷವನ್ನು ಎದುರಿಸಬೇಕೆಂದರೆ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ಮಧ್ಯೆ ಮಿತ್ರತ್ವ ಸಾಧ್ಯವಾಗಬೇಕು ಎಂಬುದು. ಹೀಗೆ ಅಮಿತ್ ಶಾ ಅವರ ಮುಂದೆ ಇಂತಹ ಪ್ರಸ್ತಾಪವನ್ನು ಮಂಡಿಸುವ ಕಾಲಕ್ಕೆ ೨೦೨೩ರ ವಿಧಾನಸಭೆ ಚುನಾವಣೆಯ ಇಂಚಿಂಚೂ ವಿವರವನ್ನು ಪ್ರಮೋದ್ ಸಾವಂತ್ ಸಂಗ್ರಹಿಸಿದ್ದರು.

ಮತ್ತು ಇಂತಹ ಮಾಹಿತಿಯ ಪ್ರಕಾರ,ಬಿಜೆಪಿ -ಜಾ.ದಳ ಮಧ್ಯೆ ಹೊಂದಾಣಿಕೆ ಸಾಧ್ಯವಾದರೆ ಕರ್ನಾಟಕದ ಶೇಕಡಾ ಅರವತ್ತೆ ದಕ್ಕೂ ಹೆಚ್ಚು ಮತಗಳನ್ನು ಕಬಳಿಸಲು ಅದಕ್ಕೆ ಸಾಧ್ಯ ಎಂಬುದು ಪ್ರಮೋದ್ ಸಾವಂತ್ ಅವರ ಸ್ಪಷ್ಟ ಮಾಹಿತಿಯಾಗಿತ್ತು. ಅವತ್ತು ಪ್ರಮೋದ್ ಸಾವಂತ್ ಅವರು ಕೊಟ್ಟ ಮಾಹಿತಿಯ ಅನ್ವಯ ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಮಧ್ಯೆ ಮಿತ್ರತ್ವ ಸಾಧ್ಯವಾಯಿತು ಮತ್ತು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಅದರ ಫಲಶ್ರುತಿಯೂ ದಕ್ಕಿತು. ಹೀಗಾಗಿ ಈಗ ಪ್ರಮೋದ್ ಸಾವಂತ್ ಅವರು ರಾಜ್ಯದ ಕಾಂಗ್ರೆಸ್ ನಾಯಕರು, ಶಾಸಕರ ಜತೆ ಸಂಪರ್ಕದಲ್ಲಿರುವುದನ್ನು ಗಮನಿಸಿದ್ದ ರಾಜ್ಯದ ಬಿಜೆಪಿ-ಜಾ.ದಳ ನಾಯಕರು ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಲುಗಾಡಿಸಲು ಕೈ ಹಾಕಬಹುದೇ? ಎಂಬ ಪ್ರಶ್ನೆಯೊಂದಿಗೆ ಉತ್ತರ ಕೋರಿದ್ದರು.

ಆದರೆ ಇದಕ್ಕೆ ಪ್ರತಿಯಾಗಿ ಅವತ್ತು ಮೋದಿ-ಶಾ ಜೋಡಿ ಕರ್ನಾಟಕದ ನಾಯಕರಿಗೆ ಕಳಿಸಿದ ಸಂದೇಶವೆಂದರೆ,ಸಿದ್ದರಾಮಯ್ಯ-ಡಿಕೆಶಿ ನಡುವಣ ಸಂಘರ್ಷವೇ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲಿದೆ. ಹೀಗಾಗಿ ನಾವು ಕೈ ಹಾಕಿ ಅದನ್ನು ದುರ್ಬಲಗೊಳಿಸುವುದಕ್ಕಿಂತ ಅದು ತಾನಾಗಿಯೇ ದುರ್ಬಲಗೊಳ್ಳಲು ಬಿಡೋಣ ಎಂಬುದು. ವರಿಷ್ಠರ ಇಂತಹ ಮಾತಿನ ಒಳ ಮರ್ಮವೆಂದರೆ, ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದರೂ ಸರಿ ಇಲ್ಲದಿದ್ದರೂ ಸರಿ ಎಂಬುದು. ಏಕೆಂದರೆ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಕೆಳಗಿಳಿಯದೆ ಇದ್ದರೆ ಡಿ.ಕೆ.ಶಿವಕುಮಾರ್ ಅವರು ಒಳಗಿನಿಂದಲೇ ಸರ್ಕಾರವನ್ನು ದುರ್ಬಲಗೊಳಿಸುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರಿಂದ ಅಧಿಕಾರ ಕಿತ್ತುಕೊಂಡು ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದರೆ ಸಿದ್ದರಾಮಯ್ಯ ಅವರೇ ಸರ್ಕಾರದ ಪಾಲಿಗೆ ಕಂಟಕವಾಗುತ್ತಾರೆ ಎಂಬುದು.

ಈ ಪೈಕಿ ಅನುಕೂಲವೆಂದರೆ ಸಿದ್ದರಾಮಯ್ಯ ನವರ ಕೈಲಿ ಅಧಿಕಾರ ಕಿತ್ತುಕೊಳ್ಳುವುದು. ಏಕೆಂದರೆ ಅವರಿಂದ ಅಧಿಕಾರ ಕಿತ್ತು ಡಿ.ಕೆ. ಶಿವಕುಮಾರ್ ಅವರಿಗೆ ಕೊಟ್ಟರೆ ಮೊದಲನೆಯದಾಗಿ ಸಿದ್ದರಾಮಯ್ಯನವರ ಒಳಏಟುಗಳನ್ನು ಕಾಂಗ್ರೆಸ್ ತಿನ್ನಬೇಕಾಗುತ್ತದೆ. ಮತ್ತು ಅದೇ ಕಾಲಕ್ಕೆ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಜಾರಿಯಲ್ಲಿರುವ ಕೇಂದ್ರದ ತನಿಖಾ ಸಂಸ್ಥೆಗಳು ಮತ್ತೆ ಫೀಲ್ಡಿಗಿಳಿದು ಅವರ ನೇತೃತ್ವದ ಸರ್ಕಾರವನ್ನು ದುರ್ಬಲಗೊಳಿಸುತ್ತವೆ ಎಂಬುದು ಬಿಜೆಪಿ ವರಿಷ್ಠರ ಮಾತು. ಅವರು ಈ ಮಾತನಾಡಿದ ಕೆಲ ಕಾಲದ ನಂತರ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದರು ಮತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದರು. ಆದರೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಕೇಂದ್ರದ ತನಿಖಾ ಸಂಸ್ಥೆಗಳು ಅವರ ವಿರುದ್ಧ ಮುಗಿಬೀಳುವ ಲಕ್ಷಣವೇ ಕಾಣುತ್ತಿಲ್ಲ.

ಇದರಿಂದಾಗಿ ಅನುಮಾನಗೊಂಡ ರಾಜ್ಯದ ಬಿಜೆಪಿ-ಜಾ.ದಳ ನಾಯಕರು ಮತ್ತೆ, ಸರ್ಕಾರವನ್ನು ದುರ್ಬಲಗೊಳಿಸಲು ಕೈ ಹಾಕಬಹುದೇ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಹಿಂದಿನಂತೆಯೇ ಬಿಜೆಪಿ ವರಿಷ್ಠರು: ಮತ್ತಷ್ಟು ಕಾಲ ಕಾಯೋಣ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಈಗಿನ ಅವರ ಲೆಕ್ಕಾಚಾರವೆಂದರೆ, ಸಿದ್ದರಾಮಯ್ಯ ಅವರ ಈಗಿನ ಸ್ಥಿತಿಯೇ ರಾಜ್ಯದಲ್ಲಿ ಬಿಜೆಪಿ-ಜಾ.ದಳ ಮಿತ್ರಕೂಟಕ್ಕೆ ಪ್ಲಸ್ ಆಗುತ್ತಿದೆ. ಇಂತಹ ಕಾಲದಲ್ಲಿ ಬಲವಂತವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಇಳಿಸುವ ಅಗತ್ಯವಿಲ್ಲ ಎಂಬುದು ವರಿಷ್ಠರ ಯೋಚನೆ. ಪರಿಣಾಮ ರಾಜ್ಯದ ಬಿಜೆಪಿ-ಜಾ.ದಳ ಪಾಳೆಯದಲ್ಲಿ ಈಗ ಸರ್ಕಾರವನ್ನು ದುರ್ಬಲಗೊಳಿಸುವುದಕ್ಕಿಂತ ತಾವು ಮತ್ತಷ್ಟು ಬಲಿಷ್ಠರಾಗುವುದು ಹೇಗೆ? ಎಂಬ ಯೋಚನೆ ಶುರುವಾಗಿದೆ. ಮುಂದೇನು ಕತೆಯೋ ಕಾದು ನೋಡಬೇಕು.

” ಬಿಜೆಪಿ ವರಿಷ್ಠರ ಲೆಕ್ಕಾಚಾರವೆಂದರೆ, ಸಿದ್ದರಾಮಯ್ಯ ಅವರ ಈಗಿನ ಸ್ಥಿತಿಯೇ ರಾಜ್ಯದಲ್ಲಿ ಬಿಜೆಪಿ-ಜಾ.ದಳ ಮಿತ್ರಕೂಟಕ್ಕೆ ಪ್ಲಸ್ ಆಗುತ್ತಿದೆ. ಇಂತಹ ಕಾಲದಲ್ಲಿ ಬಲವಂತವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಇಳಿಸುವ ಅಗತ್ಯವಿಲ್ಲ ಎಂಬುದು.”

 

 

ಆಂದೋಲನ ಡೆಸ್ಕ್

Recent Posts

ಟಾಪರ್ ಮಕ್ಕಳ ಒಳಿತಿಗಾಗಿ ಕೈಪಿಡಿ!

ಗಿರೀಶ್ ಹುಣಸೂರು ‘ವಿದ್ಯಾರ್ಥಿಗಳ ಖಾಸಗಿತನ, ಸಮ್ಮತಿ ಮತ್ತು ಡೇಟಾ ಸಂರಕ್ಷಣೆ’ ಕುರಿತು ಕನ್ನಡದ ಮೊದಲ ಪ್ರಾಯೋಗಿಕ ಕೈಪಿಡಿ ರಚನೆ ಮೈಸೂರು:…

5 mins ago

ಕೈಕೊಟ್ಟ ಮಳೆ; ಮೀನು ಉತ್ಪಾದನೆ ಕುಂಠಿತ

ಕೇಶವ್ ಎಂ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ…

16 mins ago

ಮಳೆ ಕೊರತೆ ನಡುವೆಯೂ ಭತ್ತ ಬೆಳೆದ ರೈತರು

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಸಂಕಷ್ಟದಲ್ಲೂ ಧೈರ್ಯ ತೋರಿದ ರೈತರಿಗೆ ಉತ್ತಮ ಬೆಲೆಯ ನಿರೀಕ್ಷೆ  ಕೆ.ಆರ್.ನಗರ: ಜಿಲ್ಲೆಯಲ್ಲಿ ಮಳೆಯಕೊರತೆಯಿಂದಾಗಿ ಈ…

22 mins ago

ಅಯ್ಯಪ್ಪ ಭಕ್ತರಿಗೆ ಅನುಕೂಲ: ವಿಮಾನದ ಕ್ಯಾಬಿನ್‌ನಲ್ಲಿ ಇರುಮುಡಿ ಸಾಗಿಸಲು ಅನುಮತಿ!

ನವದೆಹಲಿ: ಪವಿತ್ರ ಇರುಮುಡಿ ಕೆಟ್ಟನ್ನು ವಿಮಾನದ ಕ್ಯಾಬಿನ್‌ನಲ್ಲಿ ಕೈಚೀಲವಾಗಿ ಕೊಂಡೊಯ್ಯುವ ಅನುಮತಿಯನ್ನು ಸತತ ಮೂರನೇ ವರ್ಷವೂ ಮುಂದುವರಿಸಲಾಗಿದೆ ಎಂದು ನಾಗರಿಕ ವಿಮಾನಯಾನ…

20 hours ago

ನನ್ನ ಸಲಹೆ ಪಾಲಿಸಿ ಹಣ ಉಳಿಸಿದ್ದೇವೆ ಎನ್ನುತ್ತಿದ್ದಾರೆ ಜನ: ಚಿನ್ನದ ಬೆಲೆ ಬಗ್ಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಚಿನ್ನದ ಬೆಲೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅಗತ್ಯವಿಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು…

20 hours ago