Andolana originals

ಬಸವಣ್ಣನವರ ಅವಹೇಳನ ಖಂಡನೀಯ

ಜಗಜ್ಯೋತಿ ಬಸವೇಶ್ವರರನ್ನು ಅವಮಾನಿಸುವ ಕೃತಿ ‘ಬಸವ ಮಂಟಪ’ ಈಗ ವಿವಾದವನ್ನು ಎಬ್ಬಿಸಿದೆ. ಈ ಕೃತಿಯ ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರವಿ ಹಂಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದಾರೆ. ಸಮಾನತೆಯ ಹರಿಕಾರ, ವಿಶ್ವ ಗುರು, ದಾರ್ಶನಿಕ ಬಸವೇಶ್ವರರನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯವಾದುದು. ಈ ಕೃತಿಯ ವಿರುದ್ಧ ನಾಡಿನ ಜನರು, ಬಸವ ಭಕ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹವರ ವಿರುದ್ಧ ಸರ್ಕಾರ ಕಟ್ಟುನಿಟ್ಟಾಗಿ ವರ್ತಿಸಬೇಕು. ಕಾನೂನಿನ ಕುಣಿಕೆಯನ್ನು ಬಿಗಿಗೊಳಿಸಬೇಕು.

ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರು ೧೨ನೇ ಶತಮಾನದ ದಾರ್ಶನಿಕರು. ಸಮಾಜ ಸುಧಾರಕರು. ಸಾಂಸ್ಕೃತಿಕ ನಾಯಕರು. ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರಗಳನ್ನು ಇಟ್ಟು ಗೌರವಿಸಲಾಗಿದೆ. ಇಡೀ ವಿಶ್ವವೇ ಬಸವಣ್ಣನವರ ವಿಚಾರಧಾರೆಗಳನ್ನು ಒಪ್ಪಿ ಆಚರಿಸುತ್ತಿರುವಾಗ ಸಂಶೋಧನೆಯ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಅತ್ಯಂತ ಖಂಡನೀಯವಾದುದು. ವಿವಾದಾತ್ಮಕ ಕೃತಿ ‘ಬಸವ ಮಂಟಪ’ವನ್ನು ಮುಟ್ಟುಗೋಲು ಹಾಕಿಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹವಾದುದು.

ಬಸವಣ್ಣನವರಿಗೆ ಅವಮಾನ ಆಗುವುದನ್ನು ಸರ್ಕಾರ ಸಹಿಸುವುದಿಲ್ಲ. ‘ಬಸವ ಮಂಟಪ’ ಪುಸ್ತಕದ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದು ಮೆಚ್ಚುವಂತಹದ್ದು. ಸರ್ಕಾರ ತನ್ನ ಈ ಮಾತನ್ನು ಕಾರ್ಯ ರೂಪಕ್ಕೆ ತರಬೇಕು.

ಶೋಷಿತರ ಧ್ವನಿ, ಮಹಾಮಾನವ ತಾವಾದಿ ಬಸವಣ್ಣ ಅವರನ್ನು ಅವಮಾನಿಸಿರುವ ಈ ಕೃತಿ ರಚನೆಯ ಹಿಂದೆ ಷಡ್ಯಂತ್ರಗಳು ನಡೆದಿರುವ ಅನುಮಾನಗಳು ಬಲವಾಗಿವೆ. ರವಿ ಹಂಜ್ ಹಿಂದಿರುವ ಶಕ್ತಿಗಳು ಯಾವುವು ಎಂಬುದನ್ನು ಪೊಲೀಸರು ತನಿಖೆ ನಡೆಸಿ ಬಯಲಿಗೆಳೆಯಬೇಕು.

ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣ ಭೇದಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಒತ್ತಾಯಿಸಿರುವುದು ಸರಿಯಾಗಿಯೇ ಇದೆ. ‘ಬಸವ ಮಂಟಪ’ ಕೃತಿ ಸಮಾಜ, ಬಸವ ಭಕ್ತರು, ವೀರಶೈವ, ಲಿಂಗಾಯತ ಸಮುದಾಯದವರ ಭಾವನೆಗಳಿಗೆ ತೀವ್ರ ಘಾಸಿ ಉಂಟುಮಾಡಿದೆ. ಸ್ವಯಂಘೋಷಿತ ಸಂಶೋಧಕರು ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಆಗಾಗ್ಗೆ ಹೀಗೆ ಮಾಡುತ್ತಿರುವುದು ಕಂಡುಬರುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು. ಬಸವಣ್ಣನವರು ಇಡೀ ಸಮಾಜದ ಆಸ್ತಿ. ಇಂತಹ ಮಹಾಪುರುಷರನ್ನು ಅವಹೇಳನ ಮಾಡಿದರೆ ಸಮಾಜವೇ ಖಂಡಿಸಬೇಕು.

” ಬಸವಣ್ಣನವರಿಗೆ ಅವಮಾನ ಆಗುವುದನ್ನು ಸರ್ಕಾರ ಸಹಿಸುವುದಿಲ್ಲ. ‘ಬಸವ ಮಂಟಪ’ ಪುಸ್ತಕದ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದು ಮೆಚ್ಚುವಂತಹದ್ದು. ಸರ್ಕಾರ ತನ್ನ ಈ ಮಾತನ್ನು ಕಾರ್ಯರೂಪಕ್ಕೆ ತರಬೇಕು.”

 

 

ಆಂದೋಲನ ಡೆಸ್ಕ್

Recent Posts

ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಯುವ ದಸರಾ

ಎ.ಬಿ.ಇಬ್ರಾಹಿಂ, ಮೈಸೂರು ನಗರಪಾಲಿಕೆ ಮಾಜಿ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ದಸರಾ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಿ ಮೈಸೂರಿನ ಬ್ರಾಂಡ್…

5 mins ago

ರಾಜ್ಯದ ರಾಜಕೀಯ ಬೆಳವಣಿಗೆ: ಇನ್ನಷ್ಟು ಸಮಯ ಕಾದು ನೋಡಿ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯದ ಎನ್‌ಡಿಎ ನಾಯಕರಿಗೆ ದಿಲ್ಲಿಯ ಬಿಜೆಪಿ ಪಾಳೆಯದಿಂದ ಸಂದೇಶ ದಿಲ್ಲಿಯ ಬಿಜೆಪಿ…

12 mins ago

ಟಾಪರ್ ಮಕ್ಕಳ ಒಳಿತಿಗಾಗಿ ಕೈಪಿಡಿ!

ಗಿರೀಶ್ ಹುಣಸೂರು ‘ವಿದ್ಯಾರ್ಥಿಗಳ ಖಾಸಗಿತನ, ಸಮ್ಮತಿ ಮತ್ತು ಡೇಟಾ ಸಂರಕ್ಷಣೆ’ ಕುರಿತು ಕನ್ನಡದ ಮೊದಲ ಪ್ರಾಯೋಗಿಕ ಕೈಪಿಡಿ ರಚನೆ ಮೈಸೂರು:…

16 mins ago

ಕೈಕೊಟ್ಟ ಮಳೆ; ಮೀನು ಉತ್ಪಾದನೆ ಕುಂಠಿತ

ಕೇಶವ್ ಎಂ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ…

28 mins ago

ಮಳೆ ಕೊರತೆ ನಡುವೆಯೂ ಭತ್ತ ಬೆಳೆದ ರೈತರು

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಸಂಕಷ್ಟದಲ್ಲೂ ಧೈರ್ಯ ತೋರಿದ ರೈತರಿಗೆ ಉತ್ತಮ ಬೆಲೆಯ ನಿರೀಕ್ಷೆ  ಕೆ.ಆರ್.ನಗರ: ಜಿಲ್ಲೆಯಲ್ಲಿ ಮಳೆಯಕೊರತೆಯಿಂದಾಗಿ ಈ…

33 mins ago