ರಾಜ್ಯ

ನನಗೆ ಎಲ್ಲಾ ದಿನಗಳು ಒಂದೆ, ಯುಗಾದಿ, ಶಿವರಾತ್ರಿ ದಿನವೂ ಮಾಂಸ ತಿನ್ನುತ್ತೇವೆ : ಮುಖ್ಯಮಂತ್ರಿ

ಬೆಂಗಳೂರು : ಯುಗಾದಿ, ಶಿವರಾತ್ರಿಯ ಹಬ್ಬದ ದಿನವೂ ನಾನು ಮಾಂಸ ತಿನ್ನುತ್ತೇನೆ. ಅದರಲ್ಲಿ ತಪ್ಪೇನು? ಎಲ್ಲಾ ದಿನಗಳು ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ಮ ಸಿದ್ದಾಂತವನ್ನು ತಾವು ನಂಬುವುದಿಲ್ಲ. ರಾಹುಕಾಲ ಗುಳಿಕಕಾಲ, ಯಮಗಂಡಕಾಲ ಯಾವುದರ ಮೇಲೂ ನಂಬಿಕೆ ಇಲ್ಲ, ದೇವರನ್ನು ನಂಬುತ್ತೇನೆ. ಆದರೆ ಮೂಢನಂಬಿಕೆಗಳಿಗೆ ಜೋತು ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಹಳಷ್ಟು ಜನ ತಮ್ಮ ಈಗಿನ ಸ್ಥಿತಿ ಅಥವಾ ದುಃಸ್ಥಿತಿಗೆ ಹಿಂದಿನ ಜನ್ಮದ ಕರ್ಮ ಎಂದು ನಂಬುತ್ತಾರೆ. ನಾನು ಅದನ್ನು ನಂಬುವುದಿಲ್ಲ ಮೂಢ ನಂಬಿಕೆಗಳಿಂದ ದೂರ ಇದ್ದೇನೆ ಎಂದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳುವುದು ಒಂದು, ಮಾಡುವುದು ಇನ್ನೊಂದು. ರಾಹುಕಾಲ ಕಳೆದ ಬಳಿಕ ಈ ಬಾರಿಯ ಬಜೆಟ್ ಮಂಡಿಸಿದ್ದೀರಾ, ಅಂಬೇಡ್ಕರ್ ಬಸವಣ್ಣ ಸೇರಿದಂತೆ ಹಲವಾರು ಸಿದ್ಧಾಂತಗಳನ್ನು ಹೇಳುತ್ತೀರಾ. ಆದರೆ ನಿಮ್ಮ ಸಿದ್ಧಾಂತ ಯಾವುದು ಎಂದರು.

ರಾಜಕೀಯವಾಗಿ ಅಧಿಕಾರಕ್ಕಾಗಿ ನಾವೆಲ್ಲ ಕಾಯುತ್ತಿದ್ದೇವೆ. ಆದರೆ ನಿಮಗೆ ಎಲ್ಲಾ ಕಡೆ ಬಾಗಿಲು ತೆರೆದುಕೊಂಡು ಅವಕಾಶಗಳು ಸಿಕ್ಕವು. ಜನತಾದಳದಲ್ಲಿ ಉಪಮುಖ್ಯಮಂತ್ರಿಯಾಗಿದ್ದೀರಿ. ಕಾಂಗ್ರೆಸ್‍ಗೆ ಬಂದು ಮುಖ್ಯಮಂತ್ರಿಯಾಗಿದಿರಾ. ನೀವು ಎಲ್ಲಿಗೆ ಹೋದರೂ ಅವಕಾಶ ಒದಗಿ ಬರುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ನೋಡಿ, ಪಾಪ ದೇವಸ್ಥಾನ ಸುತ್ತುತ್ತಿದ್ದಾರೆ. ಕಾಮಾಖ್ಯದಲ್ಲಿ ಪೂಜೆ ಮಾಡಿಸಿದ್ದಾರೆ ಎಂದು ಹೇಳುತ್ತಿದ್ದಂತೆ ಖುದ್ದು ಶಿವಕುಮಾರ್ ಆಗಮಿಸಿದರು.

ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ನಾನು ಹಿಂದೆ ರಾಹುಕಾಲದಲ್ಲೂ ಬಜೆಟ್ ಮಂಡಿಸಿದ್ದೇನೆ. ಈ ಬಾರಿ ರಾಹುಕಾಲ ಕಳೆದ ಬಳಿಕ ಬಜೆಟ್ ಮಂಡಿಸಿದ್ದು ನಿಜ. ಅಧಿಕಾರಿಗಳು ಮತ್ತು ಮನೆಯವರು ಹೇಳಿದಂತೆ ಕೇಳಬೇಕಲ್ಲವೇ ಎಂದರು. ಆಗ ಅಶೋಕ್ ಅವರು, ಈ ಹಿಂದೆ ರಾಹುಕಾಲದಲ್ಲಿ ಬಜೆಟ್ ಮಂಡಿಸಿದ ಸಂದರ್ಭವೇ ಬೇರೆ, ಈಗ ಮುಂದಿನ ಬಜೆಟ್ ಅನ್ನು ನೀವು ಮಂಡಿಸುತ್ತೀರೋ, ಇಲ್ಲವೋ ಎಂಬ ಗೊಂದಲದ ವಾತಾವರಣ ಇದೆ. ಅದಕ್ಕಾಗಿ ಕಾಲ ನೋಡಿ ಬಜೆಟ್ ಮಂಡಿಸಿ, ಮುಂದಿನ ಬಜೆಟ್ ಪೀಠಿಕೆ ಹಾಕಿಕೊಂಡಿದ್ದೀರಾ ಎಂದರು. ಆಗ ಸಿದ್ದರಾಮಯ್ಯ ಅವರು ನನಗೆ ಯಾವ ಕಾಲದ ಮೇಲೂ ನಂಬಿಕೆ ಇಲ್ಲ. ಹಬ್ಬದ ದಿನವೂ ಕೂಡ ಮಾಂಸ ತಿನ್ನುತ್ತೇನೆ. ಎಲ್ಲವೂ ಅವರ ನಂಬಿಕೆ ಎಂದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

3 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

3 hours ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

3 hours ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

3 hours ago

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ  ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…

4 hours ago

ಚಾ.ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜೆ.ಯೋಗೇಶ್ ನೇಮಕ

ರಾಜೇಶ್ ಬೆಂಡರವಾಡಿ ಪ್ರಥಮ ಬಾರಿಗೆ ಇತರೆ ಹಿಂದುಳಿದ ವರ್ಗಕ್ಕೆ ಒಲಿದ ಡಿಸಿಸಿ ಅಧ್ಯಕ್ಷ ಸ್ಥಾನ  ಚಾಮರಾಜನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…

4 hours ago