ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ ಹಿರಿಯರು, ಕಿರಿಯರು, ಮುದುಕರು, ಮಕ್ಕಳು ಎಲ್ಲರೂ ಗಾಂಧಿಯೇ ಎಂದು!
ಈ ಒಂದು ಕತೆಯನ್ನು ಪದೇ ಪದೇ ನನಗೆ ಹೇಳುತ್ತಿದ್ದರು. ನಾನೂ ಇದನ್ನು ಅವಕಾಶ ಸಿಕ್ಕಿದಾಗಲೆ ನೂರಾರು ಸಲ ಮರು ಪ್ರಸಾರ ಮಾಡಿರುವೆ. ಮಂಗಳೂರಿಗೆ ಗಾಂಧಿ ಬಂದಾಗ ಹದಿಹರೆಯದ ಹುಡುಗಿಯಾಗಿದ್ದ ಗುಲಾಬಿ (ನನ್ನ ಅಜ್ಜಿ) ಗಾಂಧಿಯನ್ನು ನೋಡಲು ದೇಯಿ(ಮನೆಗೆಲಸದ ಸಹಾಯಕಿ)ಯನ್ನು ಜತೆಗೆ ಕರೆದುಕೊಂಡು ಹೋಗಿದ್ದರಂತೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ ಸ್ವರಾಜ್ಯ ಪಡೆಯಲು ಕೈ ಜೋಡಿಸಿ ಎಂದು ಎಲ್ಲರಿಗೆ ಮನವಿ ಮಾಡಿ ಅನುಕೂಲ ಇದ್ದವರು ಹಣ, ವಸ್ತು, ಒಡವೆ ನೀಡಿದರೆ ಅದು ಸದ್ವಿನಿಯೋಗ ಆಗುವುದು ಎಂದರಂತೆ.
ಗಾಂಧಿಯಿಂದ ಪ್ರಭಾವಿತರಾದ ಗುಲಾಬಿ (ಅಜ್ಜಿ) ತನ್ನ ಕುತ್ತಿಗೆಯಿಂದ ಸರ ಬಿಚ್ಚಿ ಕೊಟ್ಟಳಂತೆ. ಗುಲಾಬಿಯಿಂದ ಪ್ರೇರಿತರಾಗಿ ಅವರ ಮನೆಗೆಲಸದ ಸಹಾಯಕಿ ದೇಯಿ ತಾನೂ ಕಿವಿಯೋಲೆ ಬಿಚ್ಚಿ ಗಾಂಧಿಯವರಿಗೆ ನೀಡಿದಳಂತೆ. ಗಾಬರಿಯಾದ ಗುಲಾಬಿ, ‘ಅಯ್ಯೋ ನಿನ್ನ ಬಳಿ ಇದ್ದದೊಂದೇ ಒಡವೆ, ನೀನೇಕೆ ನೀಡಿದೆ? ನಿನ್ನ ಆಪತ್ಕಾಲಕ್ಕೆ ಆಗುತ್ತಿತ್ತು ಎಂದಳಂತೆ’. ಕೊಡಬೇಕು ಅಂತ ಮನಸ್ಸಿಗೆ ಬಂತು, ಆತ ನೋಡಿದರೆ ನನಗಿಂತ ಬಡವನಂತೆ ಕಾಣುತ್ತಿರುವನು ಎಂದು ದೇಯಿ ನುಡಿದಳಂತೆ!
ಅದಾದ ಹಲವು ವರುಷಗಳ ನಂತರ ದೇಶ ಸ್ವತಂತ್ರವಾಯಿತು ಎಂದು ಸುದ್ದಿ ಬಂದಾಗ ಗುಲಾಬಿ ಹೇಳದಿದ್ದರೂ, ದೇಯಿ ತಾನೇ ಮುಂದಾಗಿ ಪಾಯಸ ಮಾಡಿ ಸಡಗರದಿಂದ ಗುಲಾಬಿಗೆ ತಂದು ಕೊಟ್ಟಳಂತೆ. ಅಷ್ಟೇ ಅಲ್ಲ, ಗುಲಾಬಿಗೆ ಹಿಂದೆ ಗಾಂಽಗೆ ಒಡವೆ ಕೊಟ್ಟದ್ದನ್ನು ನೆನಪಿಸಿ ‘ಆ ಮುದುಕನಿಗೆ ಓಲೆ ಕೊಟ್ಟದ್ದು ಸಾರ್ಥಕವಾಯಿತು. ಮೋಸ ಮಾಡಲಿಲ್ಲ, ಮಾತು ತಪ್ಪಲಿಲ್ಲ, ಸ್ವಾತಂತ್ರ್ಯ ತಂದುಕೊಟ್ಟ’ ಎಂದು ಹೇಳಿದಳಂತೆ.
ನನ್ನ ಅಜ್ಜಿ ಸದಾ ಬಿಳಿಯ ಹತ್ತಿ ಸೀರೆ ಉಡುತ್ತಿದ್ದರು. ಕಿವಿ, ಕತ್ತು, ಕೈ ಬೋಳು ಬೋಳು. ಒಡವೆ ಧರಿಸುತ್ತಿರಲಿಲ್ಲ. ಅಯ್ಯೋ, ಗಾಂಧಿಗೆ ಒಡವೆ ಕೊಟ್ಟು ಈ ಪರಿಸ್ಥಿತಿ ಬಂತು ಎಂದು ನಾನು ಮನದಲ್ಲಿ ನೊಂದುಕೊಳ್ಳುತ್ತಿz. ಈಗ ಎ ಕಡೆ, ನನ್ನ ಅಜ್ಜಿ ಹಿಂದೆ ಗಾಂಧಿಗೆ ಒಡವೆ ಕೊಟ್ಟಿದ್ದಳು ಎಂದು ಹೇಳಿಕೊಂಡು ಹೆಮ್ಮೆಪಡುತ್ತಿರುವೆ!
-ಸವಿತಾ ನಾಗಭೂಷಣ, ಕವಯಿತ್ರಿ
ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…
ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…
ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…
ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ…
ಎಚ್.ಎಸ್.ದಿನೇಶ್ ಕುಮಾರ್ ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ ವಾಹನ ಸವಾರರಿಗೆ ಮುನ್ನೆಚ್ಚರಿಕೆ * ವಾಹನ…
ನವೀನ್ ಡಿಸೋಜ ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಧ್ವನಿವರ್ಧಕ, ಡಿಜೆ ಬಳಕೆಗೆ ನಿರ್ಬಂಧ; ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ…