ಓದುಗರ ಪತ್ರ
ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಬಾರಿ ಚಲನಚಿತ್ರೋತ್ಸವವನ್ನು ಕೈಬಿಡಲಾಗಿದೆ ಎಂದು ಕೇಳಿಬಂದಿದೆ. ಆದರೆ, ಇದು ಸೂಕ್ತ ನಿರ್ಧಾರವಲ್ಲ ಎಂಬುದು ನನ್ನ ಅನಿಸಿಕೆ.
ನಾನು ಸುಮಾರು ೧೨ ದಸರಾ ಚಲನ ಚಿತ್ರೋತ್ಸವಗಳಲ್ಲಿ ವಿವಿಧ ರೀತಿಯಲ್ಲಿ ಭಾಗಿಯಾಗಿದ್ದೇನೆ. ಹಿಂದೆ ಚಿತ್ರಮಂದಿರಗಳಲ್ಲಿ ಕೇವಲ ಬೆಳಗಿನ ಪ್ರದರ್ಶನಗಳಿಗೆ ಸೀಮಿತವಾ ಗಿದ್ದ ಈ ಚಿತ್ರೋತ್ಸವ, ಕ್ರಮೇಣ ಒಂದು ಪೂರ್ಣ ಪ್ರಮಾಣದ ಚಲನ ಚಿತ್ರೋತ್ಸವವಾಗಿ ರೂಪುಗೊಂಡಿದೆ.
ಇದು ಒಂದೇ ದಿನದಲ್ಲಿ ಸಂಭವಿಸಿದ ಬದಲಾವಣೆಯಲ್ಲ. ಇದರ ಹಿಂದೆ ಹಲವು ವರ್ಷಗಳ ನಿರಂತರ ಪ್ರಯತ್ನ, ಯೋಜನೆ, ಅನುಭವ ಮತ್ತು ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಶ್ರಮವಿದೆ. ಒಂದು ಚಲನಚಿತ್ರೋತ್ಸವವನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ವರ್ಷದಿಂದ ವರ್ಷಕ್ಕೆ ಬೆಳೆಸಿ, ಒಂದು ಪೂರ್ಣ ಪ್ರಮಾಣದ ಉತ್ಸವವಾಗಿ ರೂಪಿಸುವುದು ಸುಲಭದ ಕೆಲಸವಲ್ಲ.
ಈ ಬೆಳವಣಿಗೆಯ ಹಿಂದೆ ದುಡಿದ ಅನೇಕ ಅಧಿಕಾರಿಗಳ ಪರಿಶ್ರಮ ಮತ್ತು ಸಮಯವನ್ನು ನಾವು ಮರೆಯಬಾರದು. ಪ್ರೇಕ್ಷಕರ ಭಾಗವಹಿ ಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಇಡೀ ಪ್ರಯತ್ನವನ್ನೇ ಒಂದು ಕ್ಷಣದಲ್ಲಿ ರದ್ದುಪಡಿಸುವುದು ಬೇಸರ ತರಿಸುತ್ತದೆ.
ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾದರೆ, ಚಿತ್ರೋತ್ಸವವನ್ನೇ ರದ್ದುಪಡಿಸುವ ಬದಲು ಅದರ ಸ್ವರೂಪವನ್ನು ಹೇಗೆ ಬದಲಾಯಿಸಬೇಕು, ಜನರನ್ನು ಹೇಗೆ ಹೆಚ್ಚು ಸೆಳೆಯಬೇಕು, ಹೊಸ ಪ್ರೇಕ್ಷಕರನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಯೋಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ೫೦ ವರ್ಷಗಳ ಪರಂಪರೆಯನ್ನು ಹೊಂದಿರುವ ದಸರಾ ಚಲನ ಚಿತ್ರೋತ್ಸವ ಕೇವಲ ಸಿನಿಮಾ ಪ್ರದರ್ಶನವಲ್ಲ; ಅದು ಮೈಸೂರಿನ ಸಾಂಸ್ಕೃತಿಕ ಬದುಕಿನ ಒಂದು ಭಾಗವಾಗಿದೆ. ಅದನ್ನು ಉಳಿಸುವುದರ ಜೊತೆಗೆ, ಕಾಲಕ್ಕೆ ತಕ್ಕಂತೆ ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಪ್ರಯತ್ನ ನಡೆಯಬೇಕಿದೆ.
-ಮನು, ಮೈಸೂರು
ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…
ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…
ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…
ಎಚ್.ಎಸ್.ದಿನೇಶ್ ಕುಮಾರ್ ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ ವಾಹನ ಸವಾರರಿಗೆ ಮುನ್ನೆಚ್ಚರಿಕೆ * ವಾಹನ…
ನವೀನ್ ಡಿಸೋಜ ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಧ್ವನಿವರ್ಧಕ, ಡಿಜೆ ಬಳಕೆಗೆ ನಿರ್ಬಂಧ; ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ…
ಭೇರ್ಯ ಮಹೇಶ್ ಕೆ.ಆರ್.ನಗರ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡದ ದುಸ್ಥಿತಿ; ಸಾರ್ವಜನಿಕರ ಅಸಮಾಧಾನ ಕೆ.ಆರ್.ನಗರ: ಬಿರುಕುಬಿಟ್ಟ ಗೋಡೆಗಳು, ಉದುರಿ ಬೀಳುವ…