ಮೈಸೂರು ನಗರ

ಮೈಸೂರು ಮಹಾನಗರ ಪಾಲಿಕೆ : 10.20ಕೋಟಿ ಉಳಿತಾಯ ಬಜೆಟ್‌ಗೆ ಅನುಮೋದನೆ

ಮೈಸೂರು : ಮೈಸೂರು ಮಹಾನಗರ ಪಾಲಿಕೆಯು 2026-27ನೇ ಸಾಲಿನ 1,311.13 ಕೋಟಿ ಗಾತ್ರದ ಬಜೆಟ್‌ಗೆ ಬುಧವಾರ ಅನುಮೋದನೆ ನೀಡಲಾಗಿದೆ. ಇದು 10.20 ಕೋಟಿ ಉಳಿತಾಯ ಬಜೆಟ್ ಆಗಿದೆ.

ಪ್ರಾದೇಶಿಕ ಆಯುಕ್ತ ಹಾಗೂ ಆಡಳಿತಾಧಿಕಾರಿ ನಿತೇಶ್ ಪಾಟೀಲ ಅವರು ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿದರು. ಒಟ್ಟು ಖರ್ಚು 1,300.92 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಯಾವುದೇ ಚರ್ಚೆ ನಡೆಯಲಿಲ್ಲ.  ಪಾಲಿಕೆ ಆಯುಕ್ತ ಶೇಕ್‌ ತನ್ವೀರ್‌ ಆಸಿಫ್‌ ಅವರು ಇದ್ದರು.

ಆದಾಯ ಮೂಲಗಳು:
ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ಕರ, ವಿವಿಧ ಶುಲ್ಕಗಳು, ಬಾಡಿಗೆ, ಜಾಹೀರಾತು ಶುಲ್ಕ ಮತ್ತು ಕೇಂದ್ರ-ರಾಜ್ಯ ಅನುದಾನಗಳು.

ಏಲ್ಲೆಲ್ಲಿಗೆ ಏನೇನು?
1. ಕುಂಬಾರಕೊಪ್ಪಲಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 50ಲಕ್ಷ ರೂಪಾಯಿಗಳು ಅನುದಾನ

2. ಟೌನ್ ಹಾಲ್ ಅಭಿವೃದ್ಧಿಗೆ 30 ಲಕ್ಷ ರೂಪಾಯಿಗಳು

3.ಕೃಷ್ಣರಾಜ, ಚಾಮರಾಜ, ನರಸಿಂಹ ರಾಜ ಕ್ಷೇತ್ರದಲ್ಲಿ ಈಜು ಕೊಳ ನಿರ್ಮಾಣ

4. ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ಅನುದಾನ

5. ಜೆಪಿ ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣ ಅಭಿವೃದ್ಧಿಗೆ 1.10 ಕೋಟಿ ಮೀಸಲು

6. ಚಾಮರಾಜ, ಕೃಷ್ಣರಾಜ, ನರಸಿಂಹ ರಾಜ ಕ್ಷೇತ್ರದ ವೃತ್ತಗಳ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನ

7. ಪಾಲಿಕೆ ವ್ಯಾಪ್ತಿಯ ಚರಂಡಿ ರಸ್ತೆಗಳ ಅಭಿವೃದ್ಧಿಗೆ 30 ಕೋಟಿ

8. ಪ್ರವಾಸಿ ತಾಣ ಜನನಿಬಿಡ ಪ್ರದೇಶಗಳಲ್ಲಿ ಪಾರಂಪರಿಕ ಶೈಲಿಯ ಶೌಚಾಲಯ ನಿರ್ಮಾಣ

ಆಂದೋಲನ ಡೆಸ್ಕ್

Recent Posts

ಮಳೆ ಕೊರತೆ: ಭತ್ತದ ಬೆಳೆ ಉಳಿಸಿಕೊಳ್ಳಲು ಹರಸಾಹಸ

ಕಾಂಗೀರ ಬೋಪಣ್ಣ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕ  ವಿರಾಜಪೇಟೆ: ತಾಲ್ಲೂಕಿನಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಭತ್ತದ ಬೆಳೆಗೆ…

4 mins ago

ಬೇಲದಕುಪ್ಪೆ ದೇಗುಲದಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ

ದಾಸೇಗೌಡ ಸರಗೂರು ಮುಜರಾಯಿ ಇಲಾಖೆ ವಿರುದ್ಧ ಭಕ್ತಾದಿಗಳ ಆಕ್ರೋಶ ಸರಗೂರು: ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ವತಿಯಿಂದ…

11 mins ago

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…

20 hours ago

ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು!

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…

20 hours ago

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ!

ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…

21 hours ago