ಕ್ರೀಡೆ

WPL final: ಚಾಂಪಿಯನ್‌ ಪಟ್ಟಕ್ಕಾಗಿ ಮುಂಬೈ v/s ಡೆಲ್ಲಿ ಹೋರಾಟ

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಟಿ20 ಕ್ರಿಕೆಟ್‌ ಟೂನಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಚಾಂಪಿಯನ್‌ ಪಟ್ಟಕ್ಕಾಗಿ ಸೆಣಸಲಿವೆ.

ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎರಡು ತಂಡಗಳ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.

ಸತತ ಮೂರನೇ ಬಾರಿ ಫೈನಲ್‌ ತಲುಪಿರುವ ಡೆಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ ಮುಂಬೈ ತಂಡ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಶೆಫಾಲಿ ವರ್ಮಾ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌ ಬ್ಯಾಟಿಂಗ್‌ನಲ್ಲಿ ಡೆಲ್ಲಿಗೆ ಶಕ್ತಿ ತುಂಬಿದರೆ, ಕಾಶ್ವೀ ಗೌತಮ್‌ ಮತ್ತು ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಬಲ ತುಂಬಲಿದ್ದಾರೆ.

ಇತ್ತ ಮುಂಬೈ ತಂಡದ ಪರ ಅಮೋಘ ಫಾರ್ಮ್‌ನಲ್ಲಿರುವ ನ್ಯಾಟ್‌ ಶಿವರ್‌ ಹಾಗೂ ಹೇಯ್ಲಿ ಮ್ಯಾಥ್ಯೂಸ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಶಕ್ತಿಯಾಗಿದ್ದಾರೆ.

ತಂಡಗಳು ಇಂತಿವೆ:

ಡೆಲ್ಲಿ ಕ್ಯಾಪಿಟಲ್ಸ್‌: ಮೆಗ್‌ ಲ್ಯಾನಿಂಗ್‌ (ನಾಯಕಿ), ಸಾರಾ ಬ್ರೈಸ್‌ (ವಿಕೆಟ್‌ ಕೀಪರ್‌), ಶಫಾಲಿ ವರ್ಮಾ, ಜೆಸ್‌ ಜೊನಾಸ್ಸೆನ್‌, ಜೆಮಿಮಾ ರೋಡ್ರಿಗಸ್‌, ಅನ್ನಾಬೆಲ್‌ ಸದರ್ಲ್ಯಾಂಡ್‌, ಮರಿಜಾನ್ನೆ ಕಪ್ಪ್‌, ನಿಕ್ಕಿ ಪ್ರಸಾದ್‌, ಮಿನ್ನು ಮಾಣಿ, ಶಿಖಾ ಪಾಂಡೆ, ಟೈಟಾಸ್‌ ಸಾಧು, ರಾಧಾ ಯಾದವ್‌, ಅರುಂಧತಿ ರೆಡ್ಡಿ, ಆಲಿಸ್‌ ಕ್ಯಾಪ್ಸಿ, ತಾನಿಯಾ ಭಾಟಿಯಾ, ಸ್ನೇಹ ದೀಪ್ತಿ, ನಂದಿನಿ ಕಶ್ಯಪ್‌, ನಲ್ಲಪುರ ರೆಡ್ಡಿ.

ಮುಂಬೈ ಇಂಡಿಯನ್ಸ್‌: ಯಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಹೇಲಿ ಮ್ಯಾಥ್ಯೂಸ್‌, ನಾಟ್‌ ಶಿವರ್‌ಬ್ರಂಟ್‌, ಸಜೀವನ್‌ ಸಜನಾ, ಅಮೆಲಿಯಾ ಕೆರ್‌, ಅಮಂಜೋತ್‌ ಕೌರ್‌, ಜಿ. ಕಮಲಿನಿ, ಸಂಸ್ಕೃತಿ ಗುಪ್ತಾ, ಶಬ್ನಿಮ್‌ ಇಸ್ಮಾಯಿಲ್‌, ಸೈಕಾ ಇಸಾಕ್‌, ಕೋಯ್ಲ್‌ ಟ್ರಯಾನ್‌, ನಾಡಿನ್‌ ಡಿ ಕ್ಲರ್ಕ್‌, ಕೀರ್ತನಾ ಬಾಲಕೃಷ್ಣನ್‌, ಜಿಂತಿಮಣಿ ಕಲಿತಾ, ಬ್ಯಾರನೆಸ್‌ ಸಿಸೋಡಿಯಾ, ಅಮಂದೀಪ್‌ ಕೌರ್‌, ಅಕ್ಷಿತಾ ಮಹೇಶ್ವರಿ.

ಪಂದ್ಯದ ಸಮಯ: ರಾತ್ರಿ 8 ಗಂಟೆ

ಸ್ಥಳ: ಬ್ರೆಬೋರ್ನ್‌ ಸ್ಟೇಡಿಯಂ, ಮುಂಬೈ

ನೇರ ಪ್ರಸಾರ: ಜಿಯೊ ಹಾಟ್‌ಸ್ಟಾರ್‌, ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ಆಂದೋಲನ ಡೆಸ್ಕ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

7 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

8 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

10 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

12 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

12 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

13 hours ago