ಕ್ರೀಡೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಭಾರತಕ್ಕೆ ಮೂರು ಕಂಚು

ಟಾಷ್ಕೆಂಟ್‌: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸಣ್ಣ ಪದಕಗಳಿಗೆ ಸಮಾಧಾನಪಟ್ಟಿದೆ. ಮೊಹಮ್ಮದ್‌ ಹುಸ್ಸಮುದ್ದೀನ್‌, ದೀಪಕ್‌ ಕುಮಾರ್‌ ಭೋರಿಯಾ ಮತ್ತು ನಿಶಾಂತ್‌ ದೇವ್‌ ಕಂಚಿನ ಪದಕ ಗೆದ್ದರು.

ಇದೇ ಮೊದಲ ಸಲ ವಿಶ್ವ ಬಾಕ್ಸಿಂಗ್‌ ಪಂದ್ಯಾವಳಿಯಲ್ಲಿ ಸ್ಪರ್ಧೆಗೆ ಇಳಿದ ಮೊಹಮ್ಮದ್‌ ಹುಸ್ಸಮುದ್ದೀನ್‌ ಗಾಯಾಳಾಗಿ ಸೈಮಿಫೈನಲ್‌ ಸ್ಪರ್ಧೆಯಿಂದ ಹಿಂದೆ ಸರಿದರು. ಕ್ವಾರ್ಟರ್‌ ಫೈನಲ್‌ ದಾಟಿದ ಸಾಧನೆಯಿಂದಾಗಿ ಅವರಿಗೆ ಕಂಚಿನ ಪದಕ ಒಲಿಯಿತು.

29 ವರ್ಷದ, ನಿಜಾಮಾಬಾದ್‌ ಮೂಲದ ಬಾಕ್ಸರ್‌ ಹುಸ್ಸಮುದ್ದೀನ್‌ ಸೆಮಿಫೈನಲ್‌ನಲ್ಲಿ (57 ಕೆಜಿ ವಿಭಾಗ) ಕ್ಯೂಬಾದ ಸೈದೆಲ್‌ ಹೋರ್ಟ ರಾಡ್ರಿಗೆಝ್ ಡೆಲ್‌ ರೇ ಅವರನ್ನು ಎದುರಿಸಬೇಕಿತ್ತು. ಆದರೆ ಕ್ವಾರ್ಟರ್‌ ಫೈನಲ್‌ ವೇಳೆ ಕಾಡಿದ ಮಂಡಿನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಮುಂದೆ ಸ್ಪರ್ಧಿಸದಂತೆ ಬಾಕ್ಸಿಂಗ್‌ ಫೆಡರೇಶನ್‌ ಆಫ್ ಇಂಡಿಯಾ ಕೂಡ ಅವರಿಗೆ ಸೂಚನೆ ನೀಡಿತ್ತು.

ಇನ್ನೊಂದು ಸೆಮಿಫೈನಲ್‌ನಲ್ಲಿ ದೀಪಕ್‌ ಭೋರಿಯಾ (51 ಕೆಜಿ) ಫ್ರಾನ್ಸ್‌ನ ಬಿಲಾಲ್‌ ಬೆನ್ನಮ ವಿರುದ್ಧ 3-4 ಅಂತರದ ಸೋಲುಂಡರು. ನಿಶಾಂತ್‌ ದೇವ್‌ (71 ಕೆಜಿ) ಕಜಾಕ್‌ಸ್ಥಾನದ ಅಸ್ಲಾಂಬೆಕ್‌ ಶಿಂಬರ್ಗೆನೋವ್‌ ವಿರುದ್ಧ ಎಡವಿದರು.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

2 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

3 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

3 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

3 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

3 hours ago