ಮಂಡ್ಯ

ಮಂಡ್ಯ ಜಿಲ್ಲೆಯ ಸಪ್ತ ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ?

ಮಂಡ್ಯ : ಮಂಡ್ಯ ರಾಜಕೀಯ ಅಂದ್ರೇ ಇಂಡಿಯಾನೇ ತಿರುಗಿ ನೋಡುತ್ತೆ ಎಂಬ ಮಾತಿದೆ. ರಾಜಕೀಯ ಪ್ರಜ್ಞಾವಂತಿಕೆಯಿಂದ ಗಮನ ಸೆಳೆದಿರುವ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಒಟ್ಟು 7 ಕ್ಷೇತ್ರಗಳಿವೆ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಕೆಆರ್‌ಪೇಟೆ ಕ್ಷೇತ್ರಗಳು ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ. ಈ ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ವಿವರ ಇಲ್ಲಿದೆ.

ಮಳವಳ್ಳಿ  -ಕೆ ಅನ್ನದಾನಿ -ಜೆಡಿಎಸ್‌- ಮುನ್ನಡೆ
ಮದ್ದೂರು- ಡಿಸಿ ತಮ್ಮಣ್ಣ -ಜೆಡಿಎಸ್‌ -ಮುನ್ನಡೆ
ಮೇಲುಕೋಟೆ -ದರ್ಶನ್‌ -ಪುಟ್ಟಣ್ಣಯ್ಯ- ಸರ್ವೋದಯ ಪಕ್ಷ -ಮುನ್ನಡೆ
ಮಂಡ್ಯ- ರವಿಕುಮಾರ್‌- ಗಾಣಿಗ- ಕಾಂಗ್ರೆಸ್‌- ಮುನ್ನಡೆ
ಶ್ರೀರಂಗಪಟ್ಟಣ- ರವೀಂದ್ರ ಶ್ರೀಕಂಠಯ್ಯ- ಜೆಡಿಎಸ್‌- ಮುನ್ನಡೆ
ನಾಗಮಂಗಲ- ಸುರೇಶ್‌- ಗೌಡ- ಜೆಡಿಎಸ್‌- ಮುನ್ನಡೆ
ಕೆಆರ್‌ ಪೇಟೆ- ಎಚ್‌ಟಿ ಮಂಜು- ಜೆಡಿಎಸ್‌- ಮುನ್ನಡೆ

ಈ ಬಾರಿಯ ಚುನಾವಣೆಯಲ್ಲಿ ಮೇಲುಕೋಟೆ, ನಾಗಮಂಗಲ, ಶ್ರೀರಂಗಪಟ್ಟಣ, ಕೆಆರ್‌ ಪೇಟೆ ಕ್ಷೇತ್ರಗಳು ಇಡೀ ರಾಜ್ಯದಲ್ಲೇ ಗಮನ ಸೆಳೆದಿವೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಮಂಡ್ಯ ಚುನಾವಣೆ ಕಣ ಗಮನ ಸೆಳೆದಿದೆ. ಪ್ರಮುಖವಾಗಿ ಮಂಡ್ಯ ಜಿಲ್ಲೆಯಲ್ಲಿ ಸಚಿವ ಕೆಸಿ ನಾರಾಯಣಗೌಡ, ಮಾಜಿ ಸಚಿವ ಸಿಎಸ್‌ ಪುಟ್ಟರಾಜು, ಸರ್ವೋದಯ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ, ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ ಕೆಎಸ್‌ ವಿಜಯಾನಂದ, ಡಾ ಕೆ ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಅಶೋಕ್‌ ಜಯರಾಂ, ಎಸ್‌ ಸಚ್ಚಿದಾನಂದ ಕಣದಲ್ಲಿದ್ದಾರೆ.

ಮತದಾನದ ಪ್ರಮಾಣ : ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅಂಚೆ ಮತಗಳು ಸೇರಿ ಶೇ.85.15ರಷ್ಟು ಮತದಾನವಾಗಿದೆ. 15,33,831 ಮತದಾರರಲ್ಲಿ 13,06,053 ಮಂದಿ (ಶೇ.85.15) ಮತ ಚಲಾಯಿಸಿದ್ದಾರೆ. ಇವರಲ್ಲಿ 12,95,319 ಮಂದಿ ವಿದ್ಯುನ್ಮಾನ ಮತಯಂತ್ರದ ಮೂಲಕ 12,95,319 ಮತದಾರರು ಹಾಗೂ 10,734 ಮಂದಿ ಅಂಚೆ ಮತದಾರರು ಮತದಾನ ಮಾಡಿದ್ದಾರೆ.

lokesh

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

3 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

3 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

3 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

3 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

4 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

4 hours ago