ಕ್ರೀಡೆ

ಮೈಸೂರು ವಾರಿಯರ್ಸ್‌ಗೆ ವೀರೋಚಿತ ಸೋಲು, ಅಗ್ರ ಸ್ಥಾನಕ್ಕೆ ಗುಲ್ಬರ್ಗ

ಬೆಂಗಳೂರು: ಮಳೆಯಿಂದಾಗಿ ಕಠಿಣ ಸವಾಲನ್ನು ಎದುರಿಸಿದ ಮೈಸೂರು ವಾರಿಯರ್ಸ್‌ ತಂಡ ಶ್ರೇಯಸ್‌ ಗೋಪಾಲ್‌ ಅವರ ಆಲ್ರೌಂಡ್‌ ಪ್ರದರ್ಶನದ ನಡುವೆಯೂ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 7 ರನ್‌ಗಳ ವೀರೋಚಿತ ಸೋಲನುಭವಿಸಿದೆ.

ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ಮನೀಶ್‌ ಪಾಂಡೆ ಪಡೆ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ.
11 ಓವರ್‌ಗಳಲ್ಲಿ 110 ರನ್‌ ಗಳಿಸಬೇಕಾಗಿದ್ದ ಮೈಸೂರು ವಾರಿಯರ್ಸ್‌ 102 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.
ಗುಲ್ವರ್ಗ ಮೈಸ್ಟಿಕ್ಸ್‌ 17.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿತ್ತು. ಮಳೆಯಿಂದಾಗಿ ಮೈಸೂರಿಗೆ 11 ಓವರ್‌ಗಳಲ್ಲಿ 110 ರನ್‌ ಜಯದ ಗುರಿ ನೀಡಲಾಗಿತ್ತು. ಬೌಲಿಂಗ್‌ನಲ್ಲಿ ಮಿಂಚಿದ್ದ ಶ್ರೇಯಸ್‌ ಗೋಪಾಲ್‌, ಬ್ಯಾಟಿಂಗ್‌ನಲ್ಲಿ 32 ರನ್‌ ಸಿಡಿಸಿದರೂ ಜಯ ದಕ್ಕಲಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಮಿಂಚುತ್ತಿದ್ದ ಪವನ್‌ ದೇಶಪಾಂಡೆ ಈ ಪಂದ್ಯದಲ್ಲೂ 25 ರನ್‌ ಗಳಿಸಿದರು. ಭರತ್‌ ಧುರಿ 7 ರನ್‌ ಗಳಿಸಲು 8 ಎಸೆತಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ ಮೈಸೂರು ವಾರಿಯರ್ಸ್‌ 7 ವಿಕೆಟ್‌ ನಷ್ಟಕ್ಕೆ 102 ರನ್‌ ಗಳಿಸಿತು.
ಮೈಸೂರಿಗೆ 110 ರನ್‌ ಗುರಿ:
ನಾಯಕ ಮನೀಶ್‌ ಪಾಂಡೆ ಅವರ ಅಜೇಯ 57 ರನ್‌ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಮೈಸೂರು ವಾರಿಯರ್ಸ್‌ಗೆ 110 ರನ್‌ಗಳ ಗುರಿ ನೀಡಿದೆ. ಟಾಸ್‌ ಗೆದ್ದ ಮೈಸೂರು ವಾರಿಯರ್ಸ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿದ್ದ ಗುಲ್ಬರ್ಗ ಮಿಸ್ಟಿಕ್ಸ್‌ 17.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿತ್ತು. ಈ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿತು. ನಿರಂತರವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ವಿಜೆಡಿ ನಿಯಮಕ್ಕೆ ಅಳವಡಿಸಲಾಯಿತು. ಇದರಿಂದ ಮೈಸೂರಿಗೆ 11 ಓವರ್‌ಗಳಲ್ಲಿ 110 ರನ್‌ಗಳ ಗುರಿ ಸಿಕ್ಕಿತು.
ಗುಲ್ಬರ್ಗ ಮಿಸ್ಟಿಕ್ಸ್‌ನ ಆರಂಭ ಉತ್ತಮವಾಗಿರಲಿಲ್ಲ, ಆರಂಭಿಕ ಆಟಗಾರ ರೋಹನ್‌ ಪಾಟೀಲ್‌ ಕೇವಲ 6 ರನ್‌ ಗಳಿಸುತ್ತಲೇ ವಿಕೆಟ್‌ ಕಳದುಕೊಂಡರು. ದೇವದತ್ತ ಪಡಿಕ್ಕಲ್‌ ಅವರಿಗೂ ಈ ದಿನ ಉತ್ತಮವಾಗಿರಲಿಲ್ಲ. 14ರನ್‌ ಗಳಿಸಿ ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸಿದರು. ಜೆಸ್ವತ್‌ ಆಚಾರ್ಯ (34) ಹಾಗೂ ಕೃಷ್ಣನ್‌ ಶ್ರೀಜಿತ್‌ (30) ಅವರು ಉತ್ತಮ ಜೊತೆಯಾಟವಾಡಿದರು. ಆದರೆ ನಾಯಕ ಮನೀಶ್‌ ಪಾಂಡೆ ಕೇವಲ 27 ಎಸೆತಗಳನ್ನೆದುರಿಸಿ 3 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ ಗಳಿಸಿದ ಅಜೇಯ 57 ರನ್‌ನಲ್ಲಿ ನಾಯಕನ ಜವಾಬ್ದಾರಿ ಎದ್ದುಕಾಣುತ್ತಿತ್ತು. ಇದುವರೆಗಿನ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ್ದ ಶ್ರೇಯಸ್‌ ಗೋಪಾಲ್‌ 2 ವಿಕೆಟ್‌ ಗಳಿಸಿದರೂ 45 ರನ್‌ ನೀಡಿ ದುಬಾರಿ ಬೌಲರ್‌ ಎನಿಸಿದರು. ಆದಿತ್ಯ ಗೋಯಲ್‌ ಹಾಗೂ ಶುಭಾಂಗ್‌ ಹೆಗ್ಡೆ ತಲಾ 1 ವಿಕೆಟ್‌ ಗಳಿಸಿದರು.
ಸಂಕ್ಷಿಪ್ತ ಸ್ಕೋರ್‌:
ಗುಲ್ಬರ್ಗ ಮಿಸ್ಟಿಕ್ಸ್‌: 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 148 (ಮನೀಶ್‌ ಪಾಂಡೆ 57* ಜಸ್ವತ್‌ ಆಚಾರ್ಯ 34, ಕೃಷ್ಣನ್‌ ಶ್ರೀಜಿತ್‌ 30 ಶ್ರೇಯಸ್‌ ಗೋಪಾಲ್‌ 45ಕ್ಕೆ 2)
ಮೈಸೂರು ವಾರಿಯರ್ಸ್‌: 11 ಓವರ್‌ಗಳಲ್ಲಿ 7 ವಿಕೆಟ್‌ಗೆ 102 (ಶ್ರೇಯಸ್‌ ಗೋಪಾಲ್‌ 32, ಪವನ್‌ ದೇಶಪಾಂಡೆ 25, ಕಾರ್ತಿಕ್‌ 19ಕ್ಕೆ 2, ರಿತೇಶ್‌ ಭಟ್ಕಳ್‌ 8ಕ್ಕೆ 2)

andolanait

Recent Posts

ರಾಮನಗರದ ರೈಲ್ವೆ ಪ್ರಯಾಣಿಕರಿಗೆ ಶುಭ ಸಮಾಚಾರ: ಏನದು ಗೊತ್ತಾ.?

ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಂಚರಿಸುವ ಒಡೆಯರ್‌ ಎಕ್ಸ್‌ಪ್ರೆಸ್‌ ರೈಲಿಗೆ ಈಗ ರಾಮನಗರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ…

11 hours ago

ಟಿವಿಕೆ ಶಾಸಕಾಂಗ ಪಕ್ಷದ ನಾಯಕನಾಗಿ ನಟ ವಿಜಯ್‌ ಆಯ್ಕೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಚೆನ್ನೈನ ಪಣಿಯೂರಿನಲ್ಲಿರುವ…

11 hours ago

ತಮಿಳುನಾಡು ಫಲಿತಾಂಶ ತುಂಬಾ ಆಶ್ವರ್ಯಕರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಈ ಫಲಿತಾಂಶ ತುಂಬಾ ಆಶ್ಚರ್ಯಕರವಾಗಿದೆ ಎಂದು ಸಿಎಂ…

12 hours ago

ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌ ರಾಜೀನಾಮೆ

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರಿಂದು ತಮಿಳುನಾಡು ಸಿಎಂ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಭವನದಲ್ಲಿರುವ…

12 hours ago

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಯುವಕನ ಕೊಲೆ

ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಮೈಸೂರಿನ ಉದಯಗಿರಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉದಯಗಿರಿ ಪೊಲೀಸ್‌ ಠಾಣೆಯಿಂದ ಕೇವಲ…

13 hours ago

ಹನೂರು: ಪಂಪ್‌ಸೆಟ್‌ ಮೋಟಾರ್‌ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಮಾಪುರ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಇರುತ್ತಿದ್ದ ನೀರೆತ್ತುವ ಪಂಪ್ ಸೆಟ್ ಮೋಟಾರ್‌ಗಳನ್ನು…

14 hours ago