ಕ್ರೀಡೆ

ಇಂದಿನಿಂದ ಐಪಿಎಲ್‌ ಹವಾ ; ಬೆಂಗಳೂರಲ್ಲೇ ಉದ್ಘಾಟನಾ ಪಂದ್ಯ

ಕಳೆದ ಬಾರಿಯ ಭೀಕರ ಕಾಲ್ತುಳಿತ ಬಳಿಕ ರಂಗೇರಿದ ಕ್ರಿಕೆಟ್‌

ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಇಂದಿನಿಂದ ಆರಂಭವಾಗುತ್ತಿದೆ. ಬೆಂಗಳೂರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಉದ್ಘಾಟನಾ ಪಂದ್ಯ ನಡೆಯಲಿದೆ.

ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷ ಬಳಿಕ ಉದ್ಘಾಟನಾ ಪಂದ್ಯ ನಡೆಯುತ್ತಿದ್ದು, ಕಳೆದ ವರ್ಷದ ಭೀಕರ ಕಾಲ್ತುಳಿತ ಬಳಿಕ ಮತ್ತೆ ನಗರದಲ್ಲಿ ಕ್ರಿಕೆಟ್ ರಂಗೇರಲಿದೆ. ಈ ಬಾರಿ ಟೂರ್ನಿ 2 ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ. ಮೇ 24ರವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 31ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ 10 ತಂಡಗಳು ಸೆಣಸಾಡಲಿದ್ದು, ಟೂರ್ನಿಯಲ್ಲಿ ಒಟ್ಟು 65 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ.

ಬರೋಬ್ಬರಿ 18 ವರ್ಷಗಳ ಕಾಯುವಿಕೆ ಬಳಿಕ ಕಳೆದ ಬಾರಿ ಕಪ್ ಗೆದ್ದಿದ ಆರ್‌ಸಿಬಿ ತಂಡ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಟೂರ್ನಿಗೆ ಕಾಲಿಡಲಿದ್ದು, ಮತ್ತೊಮ್ಮೆ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಈ ಬಾರಿಯೂ ಬಹುತೇಕ ದಿನ ಒಂದೇ ಪಂದ್ಯ ನಡೆಯಲಿದೆ. ಕೆಲ ವಾರಾಂತ್ಯಗಳಲ್ಲಿ 2 ಪಂದ್ಯಗಳು ನಿಗದಿಯಾಗಿವೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.

ಟೂರ್ನಿಯಲ್ಲಿ ತಲಾ 5 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ತಂಡಗಳ ಈವರೆಗಿನ ಸಾಧನೆ ಆಧಾರದಲ್ಲಿ 2 ಗುಂಪುಗಳನ್ನು ರಚಿಸಲಾಗಿದೆ. ಆದರೆ ಈ ಗುಂಪುಗಳು ವರ್ಚುವಲ್ ಆಗಿದ್ದು, ಅಂಕಪಟ್ಟಿಯಲ್ಲಿ ಗಣನೆಗೆ ಬರುವುದಿಲ್ಲ, ಚೆನ್ನೈ, ಕೋಲ್ಕತಾ, ರಾಜಸ್ಥಾನ, ಆರ್‌ಸಿಬಿ, ಪಂಜಾಬ್ ಒಂದು ಗುಂಪಿನಲ್ಲಿದ್ದು, ಮುಂಬೈ, ಸನ್ ರೈಸರ್ಸ್, ಗುಜರಾತ್, ಡೆಲ್ಲಿ ಹಾಗೂ ಲಖನೌ ತಂಡಗಳು ಮತ್ತೊಂದು ಗುಂಪಿನಲ್ಲಿವೆ.

ಪ್ರತಿ ತಂಡ ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ತಲಾ 1 ಹಾಗೂ ಇನ್ನೊಂದು ಗುಂಪಿನ 5 ತಂಡಗಳ ವಿರುದ್ಧ ತಲಾ 2 ಪಂದ್ಯ ಆಡಲಿದೆ. ಉದಾಹರಣೆಗೆ, ಆರ್‌ಸಿಬಿ ತನ್ನ ಗುಂಪಿನಲ್ಲಿರುವ ಚೆನ್ನೈ, ಕೋಲ್ಕತಾ, ರಾಜಸ್ಥಾನ, ಪಂಜಾಬ್ ವಿರುದ್ಧ ತಲಾ 1 ಹಾಗೂ ಇನ್ನೊಂದು ಗುಂಪಿನಲ್ಲಿರುವ ಗುಜರಾತ್, ಮುಂಬೈ, ಲಖನೌ, ಸನ್ ರೈಸರ್ಸ್, ಡೆಲ್ಲಿ ವಿರುದ್ಧ ತಲಾ 2 ಪಂದ್ಯ ಆಡಬೇಕಿದೆ. ಅಂದರೆ, ಪ್ರತಿ ತಂಡಕ್ಕೆ ಲೀಗ್ ಹಂತದಲ್ಲಿ ತಲಾ 14 ಪಂದ್ಯ. ಲೀಗ್ ಹಂತ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕಾಲಿಫೈಯರ್-1 ಹಾಗೂ 3, 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪ್ರವೇಶಿಸಲಿವೆ. ಕ್ಯಾಲಿಫೈಯರ್-1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಗೇರಲಿದೆ. ಸೋತ ತಂಡ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ವಿರುದ್ಧ ಆಡಲಿದ್ದು, ಅದರಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದೆ.

ಇನ್ನೂ ತನ್ನ ನೆಚ್ಚಿನ ತಂಡಕ್ಕೆ ಶುಭಕೋರಿರುವ ವಂಚನೆ ಕೇಸ್‌ನಲ್ಲಿ ದೇಶಭ್ರಷ್ಟನಾಗಿರುವ ವಿಜಯ್‌ ಮಲ್ಯ, ಆರ್‌ಸಿಬಿ ಸಿಂಹಗಳು ಮತ್ತೆ ಘರ್ಚಿಸಲಿದೆ. ಆರ್‌ಸಿಬಿ ಆಟಗಾರರು ನಮ್ಮ ಸಿಂಹಗಳು. ಚಾಂಪಿಯನ್ಸ್‌ಗಳಿಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

4 hours ago

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ  ಸರಗೂರು: ಪಟ್ಟಣದ…

4 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…

4 hours ago

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…

4 hours ago

ಓದುಗರ ಪತ್ರ: ಗವಿಸಿದ್ಧೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ: ಸಿಎಂ ನಿರ್ಧಾರ ಶ್ಲಾಘನೀಯ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…

4 hours ago

ಇವರ ಪಾಪಗಳನ್ನೆಲ್ಲ ಸಹಿಸಿಕೊ ಸಹ್ಯಾದ್ರಿ!

ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…

4 hours ago