ಐಸಿಸಿ (ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ತನ್ನ 2023ರ ಸಾಲಿನ ಟಿ20 ಪುರುಷರ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
ಪ್ರಮುಖವಾಗಿ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ನೇಮಕಗೊಂಡಿದ್ದಾರೆ. ಕಳೆದ ವರ್ಷದ ಅತ್ಯುತ್ತಮ ಟಿ20 ಆಟಗಾರರನ್ನು ಒಳಗೊಂಡಿರುವ ತಂಡದಲ್ಲಿ ಟೀಂ ಇಂಡಿಯಾದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಉಳಿದಂತೆ ಝಿಂಬಾಬ್ವೆ ತಂಡದ ಇಬ್ಬರು ಆಟಗಾರರು, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ತಂಡಗಳಿಂದ ತಲಾ ಒಬ್ಬರು ಆಟಗಾರರು ವರ್ಷದ ಟೀಂ ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತೀಯ ನಾಲ್ವರು ಆಟಗಾರರು:
ಸೂರ್ಯಕುಮಾರ್ ಯಾದವ್: 2023 ರಲ್ಲಿ ಒಟ್ಟು 18 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಒಟ್ಟು 733 ರನ್ ಕಲೆಹಾಕಿದ್ದರು. ಇದರಲ್ಲಿ 2 ಶತಕಗಳು ಸೇರಿತ್ತು. 2023ರ ಸಾಲಿನ ಅತ್ಯುತ್ತಮ ಆಟಗಾರನಾಗಿ ಕಾಣಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ಗೆ ನಾಯಕನ ಪಟ್ಟ ದಕ್ಕಿಸಿಕೊಂಡಿದ್ದಾರೆ.
ಯಶಸ್ವಿ ಜೈಸ್ವಾಲ್: ವರ್ಷದಲ್ಲಿ ಒಟ್ಟು 15 ಟಿ20 ಪಂದ್ಯಗಳಿಂದ ಜೈಸ್ವಾಲ್ 430 ರನ್ ಕಲೆಹಾಕಿದ್ದಾರೆ.
ರವಿ ಬಿಷ್ಣೋಯ್: ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ 44 ಓವರ್ಗಳನ್ನು ಎಸೆದಿದ್ದ ಸ್ಪಿನ್ನರ್ ರವಿ ಬಿಷ್ಣೋಯ್ ಒಟ್ಟು 18 ವಿಕೆಟ್ ಕಬಳಿಸುಲ್ಲಿ ಯಶಸ್ವಿಯಾಗಿದ್ದರು. ಈ ಪ್ರದರ್ಶನ ಅವರಿಗೆ ವರ್ಷದ ತಂಡದಲ್ಲಿ ಸ್ಥಾನ ಗಳಿಸಿಕೊಟ್ಟಿತು.
ಅರ್ಷದೀಪ್ ಸಿಂಗ್: 23 ಟಿ20 ಪಂದ್ಯಗಳನ್ನಾಡಿ 26 ವಿಕೆಟ್ ಕಬಳಿಸಿ ಅರ್ಶ್‌ದೀಪ್ ಮಿಂಚಿದ್ದರು.
ಐಸಿಸಿ ಟಿ20 ತಂಡ :
ಸೂರ್ಯಕುಮಾರ್ ಯಾದವ್ (ನಾಯಕ)
ಯಶಸ್ವಿ ಜೈಸ್ವಾಲ್ (ಭಾರತ)
ಫಿಲ್ ಸಾಲ್ಟ್ (ಇಂಗ್ಲೆಂಡ್)
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್)
ಸಿಕಂದರ್ ರಾಝ (ಝಿಂಬಾಬ್ವೆ)
ಅಲ್ಪೇಶ್ ರಾಮ್ಜಾನಿ (ಉಗಾಂಡ)
ಮಾರ್ಕ್ ಅಡೈರ್ (ಐರ್ಲೆಂಡ್)
ರವಿ ಬಿಷ್ಣೋಯ್ (ಭಾರತ)
ರಿಚರ್ಡ್ ನಾಗರವ (ಝಿಂಬಾಬ್ವೆ)
ಅರ್ಷದೀಪ್ ಸಿಂಗ್ (ಭಾರತ)
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…