ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಶನಿವಾರ(ಜು.27) ಇಲ್ಲಿ ನಡೆದ ಪುರುಷರು ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದೆ. ಪುರುಷರ ಸಿಂಗಲ್ಸ್‌ನಲ್ಲಿಯೂ ಲಕ್ಷ್ಯಸೇನ್ ಮೊದಲ ಸುತ್ತಿನಲ್ಲಿ ಮುನ್ನಡೆದರು.
ಈ ಇಬ್ಬರ ಜೋಡಿಯ ಅಬ್ಬರದ ಆಟದ ಮುಂದೆ ಫ್ರಾನ್ಸ್‌ನ ಲುಕಾಸ್ ಕೋರ್ವಿ ಹಾಗೂ ರೋನನ್ ಲಾಬರ್ ಮಂಡಿಯೂರಿದ್ದಾರೆ. ಒಟ್ಟು 48 ನಿಮಿಷಗಳ ಕಾಲ ಸೆಣೆಸಾಡಿದ ಈ ಜೋಡಿ 21-17, 21-14 ಅಂತರದಲ್ಲಿ ಗೆಲುವು ಸಾಧಿಸಿದೆ.
ಮೊದಮೊದಲು ಫ್ರಾನ್ಸ್ ಜೋಡಿ ಭಾರತದ ಚಿರಾಗ್ ಹಾಗೂ ಸಾತ್ವಿಕ್ ವಿರುದ್ಧ ಹಿಡಿತ ಸಾಧಿಸಿದ್ದರೂ ನಂತರ ಪುಟಿದೆದ್ದ ಚಿರಾಗ್ ಹಾಗೂ ಸಾತ್ವಿಕ್ ಒಂದೇ ಒಂದು ಪಾಯಿಂಟ್ಸ್ ಬಿಡದ ಹಾಗೆ ಅವರನ್ನು ಎದುರಿಸಿದರು. ಭಾರತದ ಈ ಜೋಡಿ ಸೋಮವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು ಎದುರಿಸಲಿದ್ದಾರೆ.
ಸೇನ್‌ಗೆ ಮೊದಲು ಗೆಲುವು: 22ರ ಹರೆಯದ ಲಕ್ಷ್ಯಸೇನ್‌ಗೆ ಇದು ಮೊದಲ ಒಲಿಂಪಿಕ್ಸ್. ಸಿಂಗಲ್ಸ್ ವಿಭಾಗದ ಎ ಗುಂಪಿನ ಪಂದ್ಯದಲ್ಲಿ ಗ್ವಾಟೆಮಾಲಾದ ಕೆವಿನ್ ಕಾರ್ಡ್‌ನ್ ಅವರನ್ನು ನೇರ ಆಟಗಳಲ್ಲಿ ಸೋಲುಣಿಸಿದರು.
ಸೇನ್ ಅವರು 42 ನಿಮಿಷಗಳ ಪಂದ್ಯದಲ್ಲಿ 21-8, 22-20 ರ ಅಂತರದಲಿ ಕಾರ್ಡನ್ ವಿರುದ್ಧ ಗೆದ್ದು ಬೀಗಿದರು. ಸೋಮವಾರ ನಡೆಯಲಿರುವ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು ಸೇನ್ ಎದುರಿಸಲಿದ್ದಾರೆ.
ಬೆಂಗಳೂರು: ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…
ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…
ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…
ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…
ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…