ಬೆಂಗಳೂರು : ರಾಜ್ಯದ ಮೊದಲ ಅರ್ಜುನ ಪ್ರಶಸ್ತಿ ವಿಜೇತ ಕರ್ನಾಟಕದ ದಿಗ್ಗಜ ಅಥ್ಲಿಟ್ ಕೆನೆತ್ ಪೋವೆಲ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕೆನೆತ್ ಪೋವೆಲ್ ಅವರು 1970ರಲ್ಲಿ ‘ಏಷ್ಯನ್ ಗೇಮ್ಸ್’ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದರು. 1960ರ ದಶದಕದಲ್ಲಿ ಕೆನೆತ್ ಪೋವೆಲ್ ಅವರು ಭಾರತ ಪ್ರಮುಖ ಓಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದರು. 1970ರ ಏಷ್ಯನ್ ಗೇಮ್ಸ್‌ನ 4x100m ರಿಲೆಯಲ್ಲಿ ಅವರು ಕಂಚಿನ ಪದಕ ಪಡೆದುಕೊಂಡಿದ್ದರು.
82 ವರ್ಷ ವಯಸ್ಸಿನ ಕೆನೆತ್ ಪೋವೆಲ್ ಅವರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹಳೆ ಮೈಸೂರು ಭಾಗದ ಪ್ರಪ್ರಥಮ ಕ್ರೀಡಾಪಟುವೂ ಹೌದು. ಕರ್ನಾಟಕಕ್ಕೆ ಅರ್ಜುನ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲಿಗರೂ ಕೂಡ. ಭಾರತದ ಪರ ಅವರು ಅನೇಕ ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.
ಕೋಲಾರದ ಕೆಜಿಎಫ್‌ನಲ್ಲಿ ಜನಿಸಿದ ಕೆನೆತ್ ಅಣ್ಣಸ್ವಾಮಿ ಮೊದಲಿಯಾರ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದರು. 1970ರ ವರೆಗೆ ಅವರು ಕ್ರೀಡಾ ರಂಗದಲ್ಲಿ ಸಕ್ರಿಯರಾಗಿದ್ದರು.
ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.15ರಂದು ಖ್ಯಾತ ನಟ ವಿ.ರವಿಚಂದ್ರನ್ ಅವರು…
ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ ಸರಗೂರು: ಪಟ್ಟಣದ…
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…
ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…
ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…