ವಿಜ್ಞಾನ ತಂತ್ರಜ್ಞಾನ

ಟ್ವಿಟರ್ ಹಕ್ಕಿಯನ್ನು ಹರಾಜಿಗಿಟ್ಟ ಮಾಲೀಕ ಎಲಾನ್ ಮಸ್ಕ್!

ವಾಷಿಂಗ್ಟನ್ :  ನಷ್ಟದಲ್ಲಿರುವ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಈಗ ಕಂಪನಿಯ ಪ್ರಧಾನ ಕಚೇರಿಯಲ್ಲಿರುವ ವಸ್ತುಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ. 27 ಗಂಟೆ ಅವಧಿಯ ಆನ್​​ಲೈನ್ ಹರಾಜು ಪ್ರಕ್ರಿಯೆಯನ್ನು ಅವರು ಆರಂಭಿಸಿದ್ದು, ಟ್ವಿಟರ್​ನ ಸ್ಯಾನ್​​ ಫ್ರಾನ್ಸಿಸ್ಕೊದಲ್ಲಿರುವ ಪ್ರಧಾನ ಕಚೇರಿಯ ಪೀಠೋಪಕರಣ, ಅಲಂಕಾರಿಕ ಉಪಕರಣಗಳು, ಅಡುಗೆ ಕೊಠಡಿಗೆ ಸಂಬಂಧಿಸಿದ ಉಪಕರಣಗಳು ಮತ್ತಿತರ ವಸ್ತುಗಳನ್ನು ಹರಾಜಿಗಿಟ್ಟಿದ್ದಾರೆ. ಟ್ವಿಟರ್​ ಹಕ್ಕಿಯ ಪ್ರತಿಮೆಯನ್ನೂ ಹರಾಜಿಗಿಟ್ಟಿದ್ದು, 1 ಲಕ್ಷ ಡಾಲರ್ ಬೆಲೆ ನಿಗದಿಪಡಿಸಿದ್ದಾರೆ ಎಂದು ‘ಎಎಫ್​ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ. ಒಟ್ಟು 631 ಉಪಕರಣಗಳನ್ನು ಹರಾಜು ಹಾಕಲಾಗುತ್ತಿದ್ದು, ಎಸ್​ಪ್ರೆಸ್ಸೊ ಯಂತ್ರಗಳು, ಮೇಜುಗಳು, ಟಿವಿಗಳು, ಬೈಸಿಕಲ್​, ಚಾರ್ಜಿಂಗ್​ ಸ್ಟೇಷನ್​ಗಳು, ಪಿಜ್ಜಾ ಓವನ್​​ ಕೂಡ ಸೇರಿವೆ.

ಈ ಹರಾಜು ಪ್ರಕ್ರಿಯೆಯಿಂದ ಹಣಕಾಸು ಸ್ಥಿತಿಗೆ ಬಂಧಿಸಿದಂತೆ ಏನೂ ಬದಲಾವಣೆಯಾಗದು ಎಂದು ಹೆರಿಟೇಜ್ ಗ್ಲೋಬಲ್ ಪಾರ್ಟ್ನರ್ಸ್ ಪ್ರತಿನಿಧಿಯೊಬ್ಬರು ಇತ್ತೀಚೆಗೆ ‘ಫಾರ್ಚೂನ್’ ನಿಯತಕಾಲಿಕೆಗೆ ತಿಳಿಸಿದ್ದರು. ಟ್ವಿಟರ್ ಪ್ರಧಾನ ಕಚೇರಿ ವಸ್ತುಗಳ ಹರಾಜು ವಿಚಾರವಾಗಿ ಆಕ್ಷನ್​​ ಹೌಸ್​​ಗಳು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

ಕಂಪನಿಯ ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಮಸ್ಕ್‌ಗೆ ಇದು ಉತ್ತಮ ನಿರ್ಧಾರ ಎನಿಸಬಹುದು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಮತ್ತೊಂದು ಕಚೇರಿಯ ವಿಳಾಸಕ್ಕೆ ಬಾಡಿಗೆ ಪಾವತಿಸಲು ವಿಫಲವಾಗಿರುವ ಬಗ್ಗೆ ಅವರು ಮೊಕದ್ದಮೆಯನ್ನೂ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಸಿಂಗಾಪುರ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದ ವಿವಿಧೆಡೆ ಇರುವ ಕಚೇರಿಗಳನ್ನೂ ಉಳಿಸಿಕೊಳ್ಳುವುದು ಮಸ್ಕ್ ಅವರಿಗೆ ಸಾಧ್ಯವಾಗಿಲ್ಲ. ಈ ಪ್ರದೇಶಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಲಾಗಿದೆ ಎಂದು ಇತ್ತೀಚೆಗೆ ‘ಬ್ಲೂಮ್​ಬರ್ಗ್’ ವರದಿ ಮಾಡಿತ್ತು.

ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಸ್ಕ್ ಅವರು ಕಂಪನಿ ಅರ್ಧದಷ್ಟು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದರು. ಆಮೇಲೆ ಬ್ಲೂಟಿಕ್​ಗೆ ಶುಲ್ಕ ವಿಧಿಸಲು ಆರಂಭಿಸಿ ವಾಪಸ್ ಪಡೆದಿದ್ದರು. ಮತ್ತೆ ನಿರ್ಧಾರವನ್ನು ಜಾರಿಗೊಳಿಸಿದ್ದರು. ಟ್ವಿಟರ್ ಸಿಇಒ ಹುದ್ದೆಯಲ್ಲಿ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಟ್ವಿಟರ್​​ನಲ್ಲಿ ಪೋಲ್ ನಡೆಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಹುದ್ದೆ ತ್ಯಜಿಸುವ ಬಗ್ಗೆ ಸುಳಿವು ನೀಡಿದ್ದರು. ಹೀಗೆ, ಟ್ವಿಟರ್ ಖರೀದಿಸಿದ ಬಳಿಕ ಮಸ್ಕ್ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಆದಾಯ ವೃದ್ಧಿಸಿಕೊಳ್ಳಲೆಂದು ‘ಯೂಸರ್ ನೇಂ’ಗಳನ್ನು ಹರಾಜಿಗೆ ಇರಿಸಲು ಟ್ವಿಟರ್ ಮುಂದಾಗಿತ್ತು ಎಂಬ ಸಂಗತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.

andolanait

Share
Published by
andolanait
Tags: Twitter

Recent Posts

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

4 hours ago

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ  ಸರಗೂರು: ಪಟ್ಟಣದ…

5 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…

5 hours ago

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…

5 hours ago

ಓದುಗರ ಪತ್ರ: ಗವಿಸಿದ್ಧೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ: ಸಿಎಂ ನಿರ್ಧಾರ ಶ್ಲಾಘನೀಯ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…

5 hours ago

ಇವರ ಪಾಪಗಳನ್ನೆಲ್ಲ ಸಹಿಸಿಕೊ ಸಹ್ಯಾದ್ರಿ!

ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…

5 hours ago