ದೇಶ- ವಿದೇಶ

ಟ್ರಂಪ್‌ ಮೇಲಿನ ದಾಳಿ ಇದೇ ಮೊದಲೇನಲ್ಲ ; ಈ ಹಿಂದೆಯೂ ನಡೆದಿತ್ತು ಹತ್ಯೆಗೆ ಯತ್ನ !

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ  ಮತ್ತೆ ಹತ್ಯೆಗೆ ಯತ್ನ ನಡೆದಿದೆ. ಹಿಲ್ಟನ್ ಹೋಟೆಲ್‌ನ ಘಟನೆ ಸೇರಿ ಒಟ್ಟು 4 ಬಾರಿ ಅಪರಿಚಿತರು ಹತ್ಯೆಗೆ ಯತ್ನ ನಡೆಸಿದ್ದರು.

ವಾಷಿಂಗ್ಟನ್ ಡಿ.ಸಿಯ ಪ್ರತಿಷ್ಠಿತ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷ ಟ್ರಂಪ್ ಅವರು ಭಾಷಣ ಮಾಡಲು ವೇದಿಕೆಗೆ ಸಿದ್ಧರಾಗುತ್ತಿದ್ದಂತೆಯೇ,  ಹೋಟೆಲ್‌ನ ಹೊರಗೆ ಸತತವಾಗಿ 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ.    ಇದರಿಂದ ಎಚ್ಚೆತ್ತ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಕ್ಷಣಾರ್ಧದಲ್ಲಿ ಅಧ್ಯಕ್ಷರು ಮತ್ತು ಗಣ್ಯರನ್ನು ಸುತ್ತುವರಿದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಗುಂಡಿನ ದಾಳಿ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು  ಒಬ್ಬ ಶಂಕಿತ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶ್ವೇತಭವನದ ಸುತ್ತಮುತ್ತಲಿನ ಭದ್ರತೆಯನ್ನು ಹಿಂದೆಂದಿಗಿಂತಲೂ ಹೆಚ್ಚಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ಟ್ರಂಪ್ ಮೇಲಿನ ಆ 4 ದಾಳಿಗಳು ಇಂತಿವೆ…

1. ಪೆನ್ಸಿಲ್ವೇನಿಯಾ  ರ‍್ಯಾಲಿ ದಾಳಿ  ( ಜುಲೈ 13, 2024)
ಇದು ಟ್ರಂಪ್ ಅವರ ಮೇಲಿನ ಅತ್ಯಂತ  ಗಂಭೀರ ದಾಳಿಯಾಗಿದ್ದು, ಅವರ ಬಲಗಿವಿಗೆ ಗುಂಡು ತಗುಲಿ ಗಾಯವಾಗಿತ್ತು. ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ 20 ವರ್ಷದ  ಯುವಕ ಹತ್ತಿರದ ಕಟ್ಟಡದ ಮೇಲ್ಛಾವಣಿಯಿಂದ ಎಂಟು ಬಾರಿ ಗುಂಡು ಹಾರಿಸಿದ್ದ. ಘಟನೆಯಲ್ಲಿ ಒಬ್ಬ ಪ್ರೇಕ್ಷಕ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ  ಗಾಯಗೊಂಡಿದ್ದರು.

2. ಫ್ಲೋರಿಡಾ ಗಾಲ್ಫ್  ಕೋರ್ಸ್ ದಾಳಿ (ಸೆಪ್ಟೆಂಬರ್, 2024)
2024ರ ಸೆಪ್ಟೆಂಬರ್‌ನಲ್ಲಿ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಟ್ರಂಪ್  ಗಾಲ್ಫ್ ಆಡುತ್ತಿದ್ದಾಗ ಅವರ ಮೇಲೆ ದಾಳಿಗೆ ಸಂಚು ರೂಪಿಸಲಾಗಿತ್ತು. ರೈಯಾನ್ ವೆಸ್ಲಿ ರೌತ್ ಎಂಬತಾ ರೈಫಲ್‌ನೊಂದಿಗೆ ಪೊದೆಗಳಲ್ಲಿ ಅಡಗಿದ್ದಾಗ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಅವನನ್ನು ಗುರುತಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಕೋರನಿಗೆ  ಫೆಬ್ರವರಿ 2026ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

3. ಮಾರ್-ಎ-ಲಾಗೋ  ಘಟನೆ (ಫೆಬ್ರವರಿ 22, 2026)
ಸುಮಾರು ಎರಡು ತಿಂಗಳ ಹಿಂದೆ ಟ್ರಂಪ್ ಅವರ ಫ್ಲೋರಿಡಾ ನಿವಾಸವಾದ  ಮಾರ್-ಎ-ಲಾಗೋದ ಭದ್ರತಾ ವಲಯವನ್ನು ಪ್ರವೇಶಿಸಲು ಪ್ರಯತ್ನಿಸಿದ ಸಶಸ್ತ್ರ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದರು. ಈತ ನುಗ್ಗಿದ ಸಂದರ್ಭದಲ್ಲಿ ಟ್ರಂಪ್‌ ನಿವಾಸದಲ್ಲಿ ಇರಲಿಲ್ಲ.

4. ಶ್ವೇತಭವನದ ವರದಿಗಾರರ  ಔತಣಕೂಟ (ಏಪ್ರಿಲ್ 25/26, 2026)
ವಾಷಿಂಗ್ಟನ್ ಡಿ.ಸಿಯ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ “ವೈಟ್ ಹೌಸ್  ಕರೆಸ್ಪಾಂಡೆಂಟ್ಸ್ ಡಿನ್ನರ್” ವೇಳೆ ದಾಳಿ ನಡೆದಿದೆ. ಟ್ರಂಪ್ ಅವರು ಭಾಷಣ ಮಾಡಲು ಸಿದ್ಧರಾಗಿದ್ದಾಗ ಸುಮಾರು 5 ರಿಂದ 8 ಬಾರಿ ಗುಂಡಿನ ಸದ್ದು ಕೇಳಿಬಂದಿದೆ.

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ವಸತಿ ರಹಿತರಿಗೆ 5 ಲಕ್ಷ ನಿವೇಶನ : ಸಿಎಂ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ 5 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ…

8 hours ago

ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ

ಮೈಸೂರು: ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…

11 hours ago

ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್‌ ಒಡೆಯರ್‌

ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್  ಒಡೆಯರ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…

12 hours ago

7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್‌ 12ರಂದು ದೆಹಲಿಗೆ…

12 hours ago

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

18 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

18 hours ago