ಮೈಸೂರು ನಗರ

ಕೂಡಲೇ ನಾಗಮೋಹನ್ ದಾಸ್ ವರದಿ ಬಿಡುಗಡೆಯಾಗಲಿ: ವಕೀಲ ಅರುಣ್‌ ಕುಮಾರ್‌ ಆಗ್ರಹ

ಮೈಸೂರು: ಕೂಡಲೇ ನಾಗಮೋಹನ್‌ ದಾಸ್‌ ವರದಿ ಬಿಡುಗಡೆಯಾಗಬೇಕು ಎಂದು ಸಾಮಾಜಿಕ ನ್ಯಾಯ ಪರ ವಕೀಲರ ಸಂಘದಿಂದ ಆಗ್ರಹಿಸಿದೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ಅರುಣ್‌ ಕುಮಾರ್‌ ಅವರು, ಈ ರಾಜ್ಯದಲ್ಲಿ ಮಾದಿಗರೇ ಜನಸಂಖ್ಯೆಯಲ್ಲಿ ನಂಬರ್ ಒನ್. ಎಲ್ಲಾ ವರದಿಗಳಲ್ಲೂ ನಾವೇ ನಂಬರ್ ಒನ್ ಆಗಿದ್ದೇವೆ. ಜಸ್ಟಿಸ್ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.

ಇನ್ನು ನಾಗಮೋಹನ್ ದಾಸ್ ಸಮಿತಿ 6,60,583 ಪುಟಗಳ ವರದಿ ಸಲ್ಲಿಸಿದೆ. ಆದರೆ ಅದರಲ್ಲಿ ಕೇವಲ 1667 ಪುಟಗಳ ವರದಿ ಸಲ್ಲಿಸಿದ್ದಾರೆ. ಅದರಲ್ಲೂ 332 ಪುಟಗಳನ್ನು ಮಾತ್ರ ಹೊರಗಡೆ ಬಿಟ್ಟಿದ್ದಾರೆ. ಒಬ್ಬ ಹೊಲಯನು ನಮಗೆ ಬೇಡ. ಸತ್ಯವನ್ನು ಗಟ್ಟಿಯಾಗಿ ನೇರವಾಗಿ ಹೇಳಿದ್ದೇವೆ. ಹೊಲೆಯರಿಗೆ ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಯಾವುದೇ ವಿರೋಧವಿರಲಿಲ್ಲ.

ನಾಗಮೋಹನ್ ದಾಸ್ ಕಮಿಷನ್ ಆಗಬೇಕು ಎಂದವರು ಹೊಲೆಯ ಸಮುದಾಯವರು. ಪ್ರತಿಭಟನೆ ಮಾಡುವ ಸ್ವಾಮೀಜಿ ಕೂಡ ಸದಾಶಿವ ಅವರನ್ನೇ ನೇಮಕ ಮಾಡಿ ಎಂದಿದ್ದರು. ಮಾದಿಗರು ಹೊಲೆಯರು ಅಣ್ಣ ತಮ್ಮಂದಿರು ಎಂದು ಹೇಳುತ್ತೀರಾ. ಇದೇನಾ ಅಣ್ಣ ತಮ್ಮ ನಡೆದುಕೊಳ್ಳುವ ರೀತಿ. ಒಬ್ಬ ಹೊಳೆಯನು ಮಾದಿಗ ಗುಂಪಿಗೆ ಬೇಡ. ಮೀಸಲಾತಿ ವರ್ಗಿಕರಣದ ಊಟದಲ್ಲಿ ಮಾದಿಗರಿಗೆ ಕಸ ಕಡ್ಡಿಯೂ ಸಿಕ್ಕಿಲ್ಲ. ಹೊಲೆಯರನ್ನ ನಮ್ಮ ಗುಂಪಿಗೆ ಸೇರಿಸಿ ಅನುಕೂಲ ಪಡೆದುಕೊಳ್ಳುತ್ತಿವಾ? ಪರಿಶಿಷ್ಟ ವರ್ಗದ ವರ್ಗೀಕರಣ ಸರಿಯಾಗಿ ಹಂಚಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕೂಡಲೇ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಬಿಡುಗಡೆಯಾಗಲಿ ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

3 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

4 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

5 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

7 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

7 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

8 hours ago