ಹೊಸದಿಲ್ಲಿ: ಟಿಬಿ, ಎಚ್‌ಐವಿ, ಹೆಪಟೈಟಿಸ್ ಬಿ, ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಪರಿಹಾರ ನೀಡುವ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು (ಎನ್‌ಎಲ್‌ಇಎಂ) ಕೇಂದ್ರ ಸರ್ಕಾರ ಭಾನುವಾರ ಜಾರಿಗೆ ತಂದಿದೆ. ಇದರಿಂದ ಅನೇಕ ರೋಗಗಳಿಗೆ ಔಷಧಗಳು ಅಗ್ಗವಾಗಲಿವೆ. ಇದು ಪೇಟೆಂಟ್ ಔಷಧಗಳನ್ನು ಒಳಗೊಂಡಿದೆ.
ಸುಮಾರು ಏಳು ವರ್ಷಗಳ ನಂತರ ನವೀಕರಿಸಲಾದ ಈ ಪಟ್ಟಿುಂನ್ನು ಆರೋಗ್ಯ ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದೆ. ಇದನ್ನು ೩೫೦ ಕ್ಕೂ ಹೆಚ್ಚು ತಜ್ಞರು ಸಿದ್ಧಪಡಿಸಿದ್ದಾರೆ ಮತ್ತು ಒಟ್ಟು ೩೮೪ ಔಷಧಿಗಳನ್ನು ಒಳಗೊಂಡಿದೆ. ಇವುಗಳಲ್ಲಿ ೪ ಕ್ಯಾನ್ಸರ್ ವಿರೋಧಿ ಔಷಧಗಳು ಸೇರಿದಂತೆ ೩೪ ಹೊಸ ಔಷಧಿಗಳಿವೆ. ೨೬ ಔಷಧಗಳನ್ನೂ ತೆಗೆಯಲಾಗಿದೆ. ೨೦೧೫ರ ಪಟ್ಟಿಯಲ್ಲಿ ೩೭೬ ಔಷಧಗಳಿದ್ದವು. ಈ ಔಷಧಿಗಳನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ. ಕೋವಿಡ್ ಔಷಧಿಗಳು ಮತ್ತು ಲಸಿಕೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಏಕೆಂದರೆ ಅವುಗಳನ್ನು ತುರ್ತು ಬಳಕೆಗೆ ಮಾತ್ರ ಅನುಮತಿಸಲಾಗಿದೆ. ಪಟ್ಟಿಯಿಂದ ಹೊರಗುಳಿದಿರುವ ಔಷಧಿಗಳಲ್ಲಿ ರಾನಿಟಿಡಿನ್, ಬ್ಲೀಚಿಂಗ್ ಪೌಡರ್, ವಿಟಮಿನ್ ಸಪ್ಲಿಮೆಂಟ್ ನಿಕೋಟಿನಮೈಡ್ ಸೇರಿವೆ.
ಮಧುಮೇಹ ವಿರೋಧಿ ಔಷಧಗಳು, ಉದಾ ಟೆನೆಲಿಗ್ಲಿಪ್ಟಿನ್, ಇನ್ಸುಲಿನ್ ಗ್ಲಾರ್ಜಿನ್ ಇಂಜೆಕ್ಷನ್. ಪ್ರತಿಜೀವಕಗಳು ಉದಾಹರಣೆಗೆ ಮೆರೊಪೆನೆಮ್, ಸೆಫುರಾಕ್ಸಿಮ್. ಸಾಮಾನ್ಯ ನೋವು ನಿವಾರಕಗಳು ಮತ್ತು ಇತರ ಔಷಧಿಗಳಾದ ವಾರ್ಫಿನ್, ಐಬುಪ್ರೊಫೇನ್, ಡಿಕ್ಲೋಫೆನಾಕ್, ಪ್ಯಾರಸಿಟವಾಲ್, ಟ್ರವಾಡಾಲ್, ಪ್ರೆಡ್ನಿಸೋಲೋನ್, ಹಾವಿನ ವಿಷಕ್ಕೆ ಪ್ರತಿವಿಷ, ಕಾರ್ಬವಾಜೆಪೈನ್, ಅಲ್ಬೆಂಡಜೋಲ್, ಐವರ್ಮೆಕ್ಟಿನ್, ಸೆಟಿರಿಜಿನ್, ಅಮೋಕ್ಸಿಸಿಲಿನ್ ಟಿಬಿ ವಿರೋಧಿ ಔಷಧಿಗಳಾದ ಬೆಡಾಕ್ವಿಲಿನ್ ಮತ್ತು ಡೆಲಾವಾನಿಡ್, ಆಂಟಿ ಎಚ್‌ಐವಿ ಡೊಲುಟೆಗ್ರಾವಿರ್, ಆಂಟಿ ಹೆಪಟೈಟಿಸ್ ಸಿ ಡಕ್ಲಾಟಾಸ್ವಿರ್ ಮುಂತಾದ ಪೇಟೆಂಟ್ ಔಷಧಗಳು ಬುಪ್ರೆನಾರ್ಫಿನ್, ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯಂತಹ ಡಿ-ಅಡಿಕ್ಷನ್ ಔಷಧಿಗಳು ಡಬಿಗಟ್ರಾನ್ ಮತ್ತು ಇಂಜೆಕ್ಷನ್ ಟೆನೆಕ್ಟೆ ಪ್ಲಸ್ ಅನ್ನು ಹೃದ್ರೋಗಗಳು ಮತ್ತು ಪಾರ್ಶ್ವವಾಯುಗಳಲ್ಲಿ ಬಳಸಲಾಗುತ್ತದೆ ರೋಟವೈರಸ್ ಲಸಿಕೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಪಟ್ಟಿಯಿಂದ ಹೊರಗುಳಿದಿರುವ ಔಷಧಿಗಳಲ್ಲಿ ರಾನಿಟಿಡಿನ್, ಬ್ಲೀಚಿಂಗ್ ಪೌಡರ್, ವಿಟಮಿನ್ ಸಪ್ಲಿಮೆಂಟ್ ನಿಕೋಟಿನಮೈಡ್ ಸೇರಿವೆ.
ಒಟ್ಟು ಔಷಧಿಗಳು ೩೮೪
೪ ಕ್ಯಾನ್ಸರ್ ವಿರೋಧಿ ಔಷಧಿಗಳು
೩೪ ಹೊಸ ಸೇರ್ಪಡೆ
೨೬ ಪಟ್ಟಿಯಿಂದ ಹೊರಕ್ಕೆ
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…